ಸುದ್ದಿ ವಿವರ : ಪಿ.ಆರ್.ರವಿಶಂಕರ್
ಡಹಾಣೂ : 09.08.2025
ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ಮತ್ತು ಮಹಾವಿಕಾಸ್ ಆಘಾಡಿ ಇವರು ಇದೇ ತಾ.09 ಆಗಸ್ಟ್ 2025 ರಂದು ಡಹಾಣೂ ಪಶ್ಚಿಮದಲ್ಲಿನ ಸಾಗರ ನಾಕಾದಲ್ಲಿನ ತಾರ್ಪಾ ಚೌಕದಲ್ಲಿ ” ಜಾಗತಿಕ ಆದಿವಾಸಿ ದಿನಾಚರಣೆಯ ” ನಿಮಿತ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಆದಿವಾಸಿ ಮುಂದಾಳು ಹಾಗೂ ಮಹಾರಾಷ್ಟ್ರ ಸರಕಾರದ ಶಾಸಕರಾದ ಕಾಮ್ರೇಡ್ ವಿನೋದ್ ಭಿವಾ ನಿಕೋಲೆ ಇವರ ಅಧ್ಯಕ್ಷತೆಯಲ್ಲಿ ಡಹಾಣೂವಿನ ಉದ್ಯಮಿ ಹಾಗೂ ಸಮಾಜ ಸೇವಕರಾದ ಶ್ರೀ. ಅಶೋಕ್ ಎಸ್. ಶೆಟ್ಟಿ ಉಳೆಪಾಡಿ ಇವರನ್ನು ಸಾರ್ವಜನಿಕ ವೇದಿಕೆಯಲ್ಲಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತಾ ” ಅಶೋಕ್ ಶೆಟ್ಟಿಯವರು ತಮ್ಮ ( ಹೋಟೆಲ್ ಸರೋವರ್ ಫ್ಯಾಮಿಲಿ ರೆಸ್ಟೋರೆಂಟ್) ಉದ್ಯಮದ ವ್ಯಸ್ತ ಜೀವನದ ನಡುವೆಯೂ ತೆರೆಯ ಮರೆಯಲ್ಲಿ ಜರಗಿಸುವ ಹಲವಾರು ಸಮಾಜಪರ ಹಾಗೂ ಮಾನವೀಯತೆಯ ಕಾರ್ಯಗಳು ಅಭಿನಂದನೀಯ ಹಾಗೂ ಪ್ರೇರಣಾದಾಯಿ ಎಂದು ಶ್ಲಾಘಿಸಿದರು.
ಸುದ್ದಿ ವಿವರ : ಪಿ.ಆರ್.ರವಿಶಂಕರ್
cell : 84839 80035




