32 C
Mumbai
March 7, 2026
Mumbai News Kannada
ಮುಂಬಯಿ

ಕನ್ನಡ ಸಂಘ ಸಯನ್ : ಯಶಸ್ವಿಯಾಗಿ ಜರಗಿದ ಅಟಿಡೊಂಜಿ ದಿನ, ಸಂಘವನ್ನು ಒಗ್ಗಟ್ಟಿನಿಂದ ಮುನ್ನಡೆಸೋಣ – ಎಂ ಜೆ ಪ್ರವೀಣ್ ಭಟ್





ಸಯನ್ ಪರಿಸರದಲ್ಲಿ ಸಂಘದ ಅಗತ್ಯತೆಯನ್ನು ಕಂಡುಕೊಂಡ ಬಳಿಕ, ಸಂಘ ಆರಂಭವಾಗಿ ಎರಡು ವರ್ಷ ಆಗುತ್ತಿದೆ. ಸಂಘವು ಇಷ್ಟರತನಕ ಅರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎನ್ನಲು ಸಂತಸವಾಗುತ್ತದೆ. ಸಂಘದ ಪ್ರಾರಂಭದ ದಿನಗಳಿದಲೂ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಿ ಕ್ಯಾಟರಸ್ ನ ಸತೀಶ್ ಶೆಟ್ಟಿ ಅವರು ಎಲ್ಲ ರೀತಿಯಲ್ಲಿಯೂ ನಮಗೆ ಸಹಕಾರ ಮಾಡುತ್ತಾ ಬಂದಿದ್ದಾರೆ. ನಾವು ಶ್ರೀ ನಿತ್ಯಾನಂದ ಸ್ವಾಮಿಯ ಅನುಗ್ರಹ ದೊಂದಿಗೆ ಈ ಸಂಘವನ್ನು ಸ್ಥಾಪಿಸಿದ್ದೇವೆ, ಅವರ ಅನುಗ್ರಹದಿಂದ ಖಂಡಿತ ನಮಗೆ ಸ್ವಂತ ಕಚೇರಿ ಲಭಿಸುವಂತಾಗಲಿ. ಸಂಘದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ, ಒಂದೂವರೆ ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಯಿತು.
ಇಂದಿನ ಕಾರ್ಯಕ್ರಮ ಬಹಳ ಉತ್ತಮ ರೀತಿಯಲ್ಲಿ ನಡೆದಿದ್ದು ಮುಂದಕ್ಕೂ ಕೂಡ ಇಂತಹ ಕಾರ್ಯಗಳನ್ನು ಆಯೋಜಿಸುತ್ತಾ ಇರೋಣ, ಸಂಘವನ್ನು ಒಗ್ಗಟ್ಟಿನಿಂದ ಮುನ್ನಡೆಸೋಣ ಎಂದು ಕನ್ನಡ ಸಂಘ ಸಯನ್ ನ ಅಧ್ಯಕ್ಷ ಪ್ರವೀಣ್ ಭಟ್ ನುಡಿದರು.
ಅವರು ಆಗಸ್ಟ್ 10 ರಂದು, ಕನ್ನಡ ಸಂಘ ಸಯನ್, ನಿತ್ಯಾನಂದ ಸಭಾಗ್ರಹದಲ್ಲಿ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.

ಮುಖ್ಯ ಅತಿಥಿ ಬಾಂಬೆ ಬಂಟ್ಸ್ ಎಸೋಸಿಯೇಷನ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ ಮಾತನಾಡುತ್ತಾ ” ಕನ್ನಡ ಸಂಘ ಸಯನ್ ಒಂದೂವರೆ ವರ್ಷದಲ್ಲಿ ನಟಿಸಿದ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತದೆ. ಇದು ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಸಾಧ್ಯವಾಯಿತು. ಇಂದಿನ ಆಟಿಡೊಂಜಿ ದಿನದ ಕಾರ್ಯಕ್ರಮವನ್ನು ಕೂಡ ಉತ್ತಮವಾಗಿ ಆಯೋಜಿಸಿದ್ದೀರಿ.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಉತ್ತಮವಾಗಿತ್ತು. ತುಳುವರ ಕ್ಯಾಲೆಂಡರ್ ಪ್ರಕಾರ ಆಟಿ ತಿಂಗಳು ನಾಲ್ಕನೇ ತಿಂಗಳಾಗಿದೆ, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಾರಿ ಕಷ್ಟದ ದಿನವಾಗಿತ್ತು. ಆಗಿ ತಿಂಗಳು ಬರಗಾಲದಂತೆ ಕಂಡರೂ, ತುಳುವರ ಒಳಿತಿಗಾಗಿ ಸಿರಿ ತುಂಬಿಸುವ ಕಾಲವಾಗಿತ್ತು. ತುಳು ನಾಡು ದೈವದೇವರ ನೆಲೆ, ಮೇಲೆ ಆದರೆ ಆಟಿ ತಿಂಗಳಲ್ಲಿ ದೈವ ದೇವರಿಗೆ ತಂಬಿಲ, ಭೋಗ , ನೇಮ ಭೋಗ ಆಗುವುದು ಕಡಿಮೆ. ಹಾಗಾಗಿ ಆಟಿ ತಿಂಗಳಲ್ಲಿ ದೈವಗಳು ಘಟ್ಟದ ಕಡೆ ಹೋಗುತ್ತವೆ ಎಂಬುದು ತುಳುವರ ನಂಬಿಕೆ. ಅಂದಿನ ಆಟಿ ತಿಂಗಳ ದಿನಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ನಡೆಯುತ್ತಿರಬೇಕು ಎಂದರು.


ಇನ್ನೋರ್ವ ಅತಿಥಿ ವಿದ್ಯಾದಾಯಿನಿ ಸಭಾದ ಗೌರವ ಕಾರ್ಯದರ್ಶಿ, ಸಮಾಜ ಸೇವಕ ಚಿತ್ರಾಪು ಕೆ ಎಂ ಕೋಟ್ಯಾನ್ ತನ್ನ ಅನಿಸಿಕೆ ತಿಳಿಸುತ್ತಾ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹಳ ಸಂತಸವಾಯಿತು.
ಒಂದೂವರೆ ವರ್ಷದಲ್ಲಿ ಕನ್ನಡ ಸಂಘ ಸಯನ್ ನ ಚಟುವಟಿಕೆಗಳು ನಿಜಕ್ಕೂ ಮೆಚ್ಚತಕ್ಕದ್ದು. ಅಂದು ಮುಂಬೈ ಗೆ ಬಂದ ತುಳು-ಕನ್ನಡಿಗರು ಬಹಳ ಕಷ್ಟದ ಜೀವನ ನಡೆಸಿ, ಇಂದು ಯಶಸ್ಸು ಗಳಿಸದ್ದಾರೆ. ನಾನು ರಾತ್ರಿ ಶಾಲೆಯಲ್ಲಿ ಕಲಿತವ, ನನ್ನಂತೆ ಬಹಳಷ್ಟು ಕನ್ನಡಿಗರು ಹಗಲು ದುಡಿದು ರಾತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಿದ್ದಾರೆ. ಬಳಿಕ ಇತರರ ಬಾಳಿಗೆ ಬೆಳಕಾದರು. ನಾವು ಮಾಡುವ ದಾನ – ಧರ್ಮದಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ.ಆದ್ದರಿಂದ ನಾವು ಯಾವಾಗಲೂ ನಮ್ಮ ಕೈಲಾದಷ್ಟು ಪರೋಪಕಾರವನ್ನು ಮಾಡಬೇಕು. ಆತಿಡೊಂಜಿ ದಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಮಹಿಳಾ ಸದಸ್ಯರಿಗೆ ಅಭಿನಂದನೆಗಳು ಎಂದರು.


ಇನ್ನೋರ್ವ ಅತಿಥಿ ಸಿದ್ಧಿವಿನಾಯಕ ಟ್ರಸ್ಟ್ ನ ಟ್ರಸ್ಟಿ ಭಾಸ್ಕರ್ ಶೆಟ್ಟಿ ಮಾತನಾಡುತ್ತಾ “ಈಗ ಮುಂಬೈಯಲ್ಲಿ ಮತ್ತು ಊರಿನಲ್ಲಿ ಎಲ್ಲ ಕಡೆ ಆಟಿಡೊಂಜಿ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಆಯೋಜಿಸಲಾಗುತ್ತಿದೆ, ಚಿತ್ರಪು ಕೆ ಮ್ ಕೋಟ್ಯಾನ್ ಹೇಳಿದಂತೆ ಎಲ್ಲರೂ ನಾವು ಅತಿ ಕಷ್ಟದ ದಿನಗಳಲ್ಲಿ ಮುಂಬೈಗೆ ಬಂದಿದ್ದೇವೆ. ಆ ಸಮಯದಲ್ಲಿ ಏಳು ವರ್ಷ ಎಂಟು ವರ್ಷದ ಮಕ್ಕಳನ್ನು ಮುಂಬೈಗೆ ಕಳಿಸಿದ್ದ ನಮ್ಮ ತಾಯಂದಿರಿಗೆ ನಿಜಕ್ಕೂ ನಾವು ಸೆಲ್ಯೂಟ್ ಹೊಡಿಯಬೇಕು.ಅಂತಹ ತಾಯಂದಿರ ಆಶೀರ್ವಾದದಿಂದಲೇ ಇಂದು ನಾವೆಲ್ಲ ಜೀವನದಲ್ಲಿ ಯಶಸ್ಸುಗಳಿಸಿದ್ದೇವೆ. ಅಂದಿನ ಕಷ್ಟದ ಆಟಿಯ ದಿನಗಳನ್ನು ನಾವು ನೆನೆಸುತ್ತಾ ಜೀವನದಲ್ಲಿ ಮುಂದುವರಿಯಬೇಕು. ಸಂಘ ಅತಿ ಕಡಿಮೆ ಸಮಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ನಿಜಕ್ಕೂ ಸಂತೋಷದ ಸಂಗತಿ ಇದೇ ರೀತಿ ನೀವು ಕಾರ್ಯಕ್ರಮ ಮಾಡುತ್ತಿದ್ದೀರಿ ನನ್ನ ಸಹಕಾರ ಸದಾ ಇದೆ ಎಂದರು.


ಸಂಘದ ಗೌರವಾಧ್ಯಕ್ಷರಾದ ಜಯರಾಮ್ ಶೆಟ್ಟಿ ಮಾತನಾಡುತ್ತಾ “ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ನಾವೆಲ್ಲ ಒಟ್ಟಾಗಿರುವುದೇ ಒಂದು ಸಂತಸದ ವಿಷಯ, ನಮ್ಮ ಸಂಘ ಪ್ರಾರಂಭವಾಗಿ ಒಂದುವರೆ ವರ್ಷವಾಯಿತು, ಸಂಘವು ಸ್ಥಾಪನೆಯದ ಉದ್ದೇಶಕನುಸಾರವಾಗಿ ಕಾರ್ಯವೆಸಗುತ್ತಿದೆ. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿದ್ದು, ಇದಕ್ಕಾಗಿ ಮಕ್ಕಳು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ.
ಅವರೆಲ್ಲರಿಗೂ ಅಭಿನಂದನೆಗಳು, ಅದೇ ರೀತಿ ಮಹಿಳೆಯರು ವಿಶೇಷ ಅಡಿಗೆಯನ್ನು ತಯಾರಿಸಿ ತಂದಿದ್ದಾರೆ. ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮ ನಡೆಯುತ್ತ ಇರಲಿ, ಎಲ್ಲರೂ ಆಗಾಗ ಒಟ್ಟಾಗುತ್ತ ಇರೋಣ ಸಂಘದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ. ಎಲ್ಲರೂ ಪ್ರೀತಿಯಿಂದ ಇರೋಣ ಎಂದರು.

ಸಂಘದ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ತನ್ನ ಅಭಿಪ್ರಾಯ ತಿಳಿಸುತ್ತಾ “ಈ ಬಾರಿಯ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಜನರು ಸೇರಿರುವುದು ಬೇಸರದ ವಿಷಯ. ಸಂಘದಲ್ಲಿ ಲೋಪ ದೋಷ, ವೈಮನಸು ಇರುವುದು ಸಹಜ, ಇದು ಬೇಕಂತಲೇ ಯಾರು ಮಾಡುವುದಲ್ಲ, ಎಲ್ಲರೂ ಒಟ್ಟಾಗಿ ಸಂಘವನ್ನು ಮುನ್ನಡೆಸುವ ಅವಶ್ಯಕತೆ ಇದೆ. ಜಯರಾಮ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಪ್ರವೀಣ್ ಭಟ್ ಮನಸು ಮಾಡಿದರೆ, ಖಂಡಿತ ಸಂಘಕ್ಕೆ ಸ್ವಂತ ಕಚೇರಿ ಲಭಿಸಬಹುದು, ಈ ಕೆಲಸ ಆದಷ್ಟು ಬೇಗ ನಡೆಯಲಿ ಎಂದು ನನ್ನ ವಿನಂತಿ. ಅಂದಿನ ಆಟಿಯ ದಿನಗಳು ಬಾರಿ ಕಷ್ಟ, ಇಂದು ನಾವ್ ಅದನ್ನು ಸಂಭ್ರಮಿಸುತ್ತಿದ್ದೇವೆ. ಸಂಘ ಒಂದು ನಮ್ಮ ಕುಟುಂಬವಿದ್ದಂತೆ, ಕಷ್ಟದ ಸಮಯದಲ್ಲಿ ಸ್ಪಂದಿಸುವವರು ಸಂಘದವರೇ. ಸಂಬಂಧಿಕರು ನಂತರ ಬರುವುದು. ಎಲ್ಲರೂ ಒಟ್ಟಾಗಿ ಸಂಘವನ್ನು ಬಲಿಷ್ಠ ಗೊಳಿಸೋಣ ಎಂದರು.
ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಉದ್ಯಮಿ ರವಿ ಶೆಟ್ಟಿ ಮಾತನಾಡಿ ಸಂಘದ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣಯಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ರವಿಶೆಟ್ಟಿ, ಕರ್ನಾಟಕ ಬ್ಯಾಂಕ್ ನ ಸಾಯನ್ ಶಾಖೆಯ ಪ್ರಬಂಧಕ ಯಶ್ವಂತ್ ರಾವ್ ಶುಭ ಕೋರಿದರು.
ಸಂಘದ ಹಿತೇಷಿ ಸಂಪತ್ ಶೆಟ್ಟಿ ಹಾಗೂ ಹಿರಿಯರಾದ ಎನ್ ಪಿ ಸುವರ್ಣರನ್ನು ಗೌರವಿಸಲಾಯಿತು.
ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶೋಭಾ ಶೆಟ್ಟಿ ಪ್ರಾಥನೆಗೈದರು. ಸುರೇಖಾ ದೇವಾಡಿಗ ಸಹಕರಿಸಿದರು.
ಸಂಘದ ಉಪಾಧ್ಯಕ್ಷ ಸದಾಶಿವ ಶೆಟ್ಟಿ ಸ್ವಾಗತಿಸಿ, ಕೊನೆಗೆ ವಂದಿಸಿದರು.
ಹಿರಿಯ ತುಳು ಸಾಹಿತಿ, ರಂಗ ನಿರ್ದೇಶಕರ ನಾರಾಯಣ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.
ಮಾಲಾ ಮೇಸ್ತ ಅವರ ಮುಂದಾಳತ್ವದಲ್ಲಿ ಮಕರ ಜ್ಯೋತಿ ಫೌಂಡೇಶನ್ ನ ಮಕ್ಕಳು, ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಾದರ ಪಡಿಸಿದರು.
ಹಾಗೂ ಸಂಘದ ಸದಸ್ಯರಿಗೆ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಕೊನೆಗೆ ಮಹಿಳಾ ಸದಸ್ಯರು ಮಾಡಿ ತಂದ ಆಟಿ ತಿಂಗಳ, ತುಳು ನಾಡಿನ ವಿಶೇಷ ಖಾದ್ಯ, ಪದಾರ್ಥ ಹಾಗೂ ಸತೀಶ್ ಶೆಟ್ಟಿ ಅವರ ಲಕ್ಷ್ಮೀ ಕ್ಯಾಟರರ್ಸ್ ನವರ ಆಯೋಜನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಸಂಘದ ಗೌರವ ಅಧ್ಯಕ್ಷ ಜಯರಾಮ್ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಭಟ್, ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ,
ಸದಾಶಿವ ಶೆಟ್ಟಿ , ಸಂಸ್ಥಾಪಕ ಹ್ಯಾರಿ ಸೀಕ್ವೆರ, ಜೊತೆ ಕೋಶಾಧಿಕಾರಿ ಚಂದ್ರಿಕಾ ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ದಯಾನಂದ ಮೂಲ್ಯ, ಜಯಶೀಲ ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದೂರು, ನವೀನ್ ಪೂಜಾರಿ , ಕಾರ್ಯಕಾರಿ ಸಮಿತಿಯ ಪ್ರಭಾ ಎನ್ ಸುವರ್ಣ, ಚಂದ್ರ ದೇವಾಡಿಗ, ಮಹೇಶ್ ಪೂಜಾರಿ, ತ್ರಿವೇಣಿ ಶೆಟ್ಟಿ, ಶೋಭಾ ಶೆಟ್ಟಿ, ವಿನೀತ ಗೌಡ ಉಪಸ್ಥಿತರಿದ್ದು ಸಹಕರಿಸಿದರು.



Related posts

ಶಾರದೆಯ ವೈಭವ: ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಸಂಭ್ರಮ

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ.

Mumbai News Desk

ಕುಲಾಲ ಸಂಘದ ಮುಂಬಯಿಯ ನವಿ ಮುಂಬಯಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ , ಭಜನೆ 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವೈಭವಮಯ ನವರಾತ್ರಿ

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಗೋರೆಗಾಂವ್: ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ 61ನೇ ವಾರ್ಷಿಕೋತ್ಸವ

Mumbai News Desk