32 C
Mumbai
March 7, 2026
Mumbai News Kannada
ಮುಂಬಯಿ

ಮಲಾಡ್ ಕುರಾರ್  ಶನಿ ಮಹಾತ್ಮಾ ಪೂಜಾ ಸಮಿತಿ ಮಹಿಳಾ ವಿಭಾಗ  ಆಟಿದ ಕೂಟ 





ಆಟಿ ಆಡಂಭರದ ಕೂಟವಾಗದಿರಲಿ – ಶ್ರೀನಿವಾಸ ಪಿ ಸಾಫ಼ಲ್ಯ.

      ಮುಂಬಯಿ.  ಹಬ್ಬ ಹರಿದಿನಗಳು ಧಾರ್ಮಿಕ ಹಾಗು ಸಾಂಸ್ಕ್ರತಿಕ ಚೌಕಟ್ಟನ್ನು ಮೀರದಿದ್ದಲ್ಲಿ ಭವಿಷ್ಯದ ಪೀಳಿಗೆಗೆ ನಾವು ಸನಾತನ ಸಂಸ್ಕೃತಿಯಲ್ಲಿ ಅವರನ್ನು ಶ್ರೀಮಂತಗೊಳಿಸಬಹುದು. ಈ ನಿಟ್ಟಿನಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರು ಹಲವು ವರ್ಷಗಳಿಂದ ಅರ್ಥಗರ್ಭಿತ ಆಟಿಯನ್ನು ಆಚರಿಸುತ್ತಿದಾರೆ. ಎಂದು ಮಲಾಡ್ ಕುರಾರ್ ವಿಲೇಜಿನ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ  ಶ್ರೀನಿವಾಸ ಪಿ ಸಾಫ಼ಲ್ಯ ನುಡಿದರು. 

ಅವರು ಆ 3ರಂದು ಮಲಾಡ್ ಕುರಾರ್ ವಿಲೇಜ ಲಕ್ಷಣ ನಗರದ ಸೆಂಟ್ ಪ್ರಾನ್ಸಿಸ್ ಸ್ಕೂಲಿನ ಸಭಾಗೃಹದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಹಿಳಾ ವಿಭಾಗ ಆಯೋಜಿಸಿದ ಆಟಿದ ಕೂಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಆಟಿ ತಿಂಗಳಲ್ಲಿ ಶ್ರೀ ವಿಷ್ಣು ದೇವರು ಸಹ ಶಯನಾವಸ್ಥೆಯಲ್ಲಿರುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆಟಿ ತಿಂಗಳು ಅಂದರೆ ಒಂದು ಸಮಯದಲ್ಲಿ ಬಹಳ ಕಷ್ಟದ ತಿಂಗಳಾಗಿತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟವಾದುದರಿಂದ ಪ್ರಕೃತಿಯಲ್ಲಿ ಬೆಳೆದ ಸೊಪ್ಪು ಗೆಡ್ಡೆಗಳನ್ನು ತಿನ್ನುತ್ತಿದ್ದರು ವೈಜ್ಞಾನಿಕವಾಗಿಯೂ ಸಹ ಈ ತಿನಿಸುಗಳು ಆರೋಗ್ಯಗರವೆಂದು ತಿಳಿದು ಬಂದಿದೆ. ಆದರೆ ಇಂದಿನ ಆಟಿ ಸಂಭ್ರಮದಲ್ಲಿ ಚೈನೀಸ್ ಪದಾರ್ಥಗಳು ಪಾಲು ಪಡೆದುಕೊಂಡಿವೆ ಎಂದಾಗ ಬೇಸರವಾಗುತ್ತೆ. ನಮ್ಮ ಹಬ್ಬ ಹರಿದಿನಗಳು ಮೌಲ್ಯಯುತವಾಗಿವೆ. ಈ ಪರಂಪರೆಯನ್ನು ಉಳಿಸುವ ಬಹುಮೂಲ್ಯ ಕೊಡುಗೆ ನಮ್ಮದಾಗಬೇಕು ಎಂದರು.

ಸಂಸ್ಥೆಯ ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿಯವರು ಮಾತನಾಡುತ್ತಾ ತಮ್ಮ ಬಾಲ್ಯದಲ್ಲಿನ ಆ ಕಷ್ಟದ ದಿನಗಳು ಹೇಗಿದ್ದವು ಎನ್ನುವುದನ್ನು ನೆನಪಿಸಿದರಲ್ಲದೆ. ಅಂದಿನ ಆಟಿ ತಿಂಗಳಿಗೂ ಇಂದಿನ ಆಟಿ ತಿಂಗಳ ಅಂತರವನ್ನು ವಿಸ್ತಾರವಾಗಿ ವಿವರಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಶೀತಲ್ ಆನಂದ ಕೋಟ್ಯಾನ್ ಮಾತನಾಡುತ್ತಾ  ಪುಜಾ ಸಮಿತಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಮುಂಚೂಣಿಯಲ್ಲಿರುತ್ತಾರೆ. ಆಟಿಯ ಸಂಭ್ರಮದ ಈ ದಿನದಲ್ಲಿ ಮಹಿಳೆಯರು ಹಲವಾರು ಬಗೆಯ ಖಾದ್ಯಗಳನ್ನು ಮಾಡಿ ತಂದಿರುತ್ತಾರೆ ಅವರೆಲ್ಲರೂ ಇಂದಿನ ದಿನಕ್ಕಾಗಿ ಹಲವಾರು ದಿನಗಳಿಂದ ತಯಾರಿ ನಡೆಸುತ್ತಿದ್ದರು. ಅವರ ಶ್ರಮ ಪರಿಶ್ರಮಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುವೆ ಶ್ರೀ ಶನಿ ದೇವರ ಕೃಪೆ ಅವರೆಲ್ಲರಿಗೂ ಸದಾ ಶ್ರೀರಕ್ಷೆಯಾಗಿರಲಿ ಎಂದರು.

ಪುಜಾ ಸಮಿತಿಯ ಉಪಾಧ್ಯಕ್ಷರಾದ ಪೇತ್ರಿ ವಿಶ್ವನಾಥ ಶೆಟ್ಟಿ ಹಾಗು ರಮೇಶ ಆಚಾರ್ಯ ಸಮಯಯೋಚಿತವಾಗಿ ಮಾತನಾಡಿದರು.  ಮಹಿಳಾ ವಿಭಾಗದ ಕಾರ್ಯಕರ್ತೆ ಜಯಂತಿ ಸುರೇಶ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.   ಮಾಸ್ಟರ್ ಸನ್ವಿತ್ ಆಟಿ ಕಲೆಂಜದ ಪ್ರಾತ್ಯಕ್ಷಿಕೆಯೊಂದಿಗೆ ಒಟ್ಟು ಕಾರ್ಯಕ್ರಮದ ಸೋಬಗನ್ನು ಹೆಚ್ಚಿಸಿದರು.  ರಾಜಶ್ರೀ ಯವರು ಧನ್ಯವಾದ ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗು ಚಾರಿಟೇಬಲ್ ಟ್ರಸ್ಟ್ ನ ಸರ್ವ ಸದಸ್ಯರು ಸಹಕರಿಸಿದರು. ತದ ನಂತರ ಮಹೀಳಾ ಸದಸ್ಯೆರು ತಯಾರಿಸಿದ ವಿವಿಧ ರೀತಿಯ ತಿನಿಸುಗಳಿತ್ತು.

B. Dinesh Kulal

Mob.: 9821868674



Related posts

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಿಹಾರಕೂಟದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಸ್ವಾಮಿ ನಿತ್ಯಾನಂದಮಂದಿರ ಬೊಯಿಸರ್ ನಲ್ಲಿ ದೇವೀ ಜಪಪಾರಾಯಣ ಸಂಪನ್ನ

Mumbai News Desk

ಮೈಸೂರು ಅಸೋಸಿಯೇಷನ್ ನಲ್ಲಿ  “ಕನ್ನಡ ವಿಠಲು”: ಸಾಂಸ್ಕೃತಿಕ ಬಾಂಧವ್ಯದ ಸ್ಮರಣೀಯ ಕಾರ್ಯಕ್ರಮ 

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಮುಂಬೈ : ಘಾಟ್ಕೋಪರ್ ನಲ್ಲಿ ಪಾದಚಾರಿಗಳ ಮೇಲೆ ಟೆಂಪೋ ಡಿಕ್ಕಿ 1 ಸಾವು, 5 ಮಂದಿಗೆ ಗಾಯ.

Mumbai News Desk