
ಮುಂಬಯಿ, ಆ.26 : ಭಾರತ್ ಬ್ಯಾಂಕಿನ ಕಾಂದಿವಿಲಿ ಪೂರ್ವ, ಠಾಕೂರ್ ವಿಲೇಜ್ನಲ್ಲಿರುವ ಶಾಖೆಯಲ್ಲಿ 49ನೇ ಸಂಸ್ಥಾಪನಾ ದಿನಾಚರಣೆಯನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.
ಬ್ಯಾಂಕಿನ ನಿರ್ದೇಶಕರಾದ ಸಂತೋಷ್ ಕೆ. ಪೂಜಾರಿ, ಹಿರಿಯ ಗ್ರಾಹಕರಾದ ಅವೆನ್ಯೂ ಹೋಟೆಲ್ನ ರಘುರಾಮ ಶೆಟ್ಟಿ, ತಾರಾನಾಥ್ ಕಲ್ಯಾಣಪುರ, ಜಯಾ ಶೆಟ್ಟಿ, ಲಕ್ಷ್ಮಣ್ ಸಾಲಿಯಾನ್, ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡು ಶುಭಾಶಯಗಳನ್ನು ಕೋರಿದರು.

ಶಾಖೆಯ ಮುಖ್ಯ ಪ್ರಬಂಧಕರಾದ ವೀರೇಂದ್ರ ಕುಂದರ್ ಅವರು ಪ್ರಮುಖ ಗ್ರಾಹಕರಿಗೆ ಹೊದಿಕೆ ನೀಡಿ ಗೌರವ ಸಲ್ಲಿಸಿದರು.
ಉಪ ಪ್ರಬಂಧಕರಾದ ಜಯಲಕ್ಷ್ಮಿ ಅಮೀನ್ ಹಾಗೂ ಸಿಬ್ಬಂದಿಗಳಾದ ಕಾರ್ತಿಕ್ ಪೂಜಾರಿ, ಸೌಮ್ಯಾ ಬಂಗೇರ, ಮಹೇಶ್ ಕರ್ಕೇರ, ದೀಪಾ ಪಾಲನ್, ಅನಿಶಾ ಪೂಜಾರಿ, ಶ್ರುತಿ ಸುವರ್ಣ, ಸಿಂಚನಾ ಪೂಜಾರಿ, ಸುಧರ್ಶನ ಆಚಾರ್ಯ ಮತ್ತು ಆದಿತ್ಯ ಕುಬಲ್ ಉಪಸ್ಥಿತರಿದ್ದರು.




