32 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ವಿರಾರ್ ಶಾಖೆಯ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ





ವಿರಾರ್ :
ಸಹಕಾರಿ ಚಳವಳಿಯಲ್ಲಿ ತನ್ನದೇ ಆದ ಸುವರ್ಣ ಅಧ್ಯಾಯವನ್ನು ಬರೆದಿರುವ ಭಾರತ್ ಬ್ಯಾಂಕ್ ತನ್ನ ವಿರಾರ್ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆಯನ್ನು ಭವ್ಯವಾಗಿ ಆಚರಿಸಿತು. ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಹರ್ಷೋದ್ಗಾರದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಈ ಸಂಭ್ರಮದಲ್ಲಿ ಶಾಖೆಯ ಹಿರಿಯ ಗ್ರಾಹಕರೂ, ಉದ್ಯಮಿಗಳೂ ಆಗಿರುವ ಅನಿಲ್ ಶಾ, ಲಷ್ಮಿಕಾಂತ್ ಪಾಂಡೆ, ನಳಿನ್ ಮೆಹತಾ, ವಿನೋದ್ ಕಾಂಚನ್, ದಯಾನಂದ್ ಕುಂದರ್, ಸುನಿಕ್ ಮಂಕಿಕರ್, ಕೀರ್ತಿಬೆನ್ ಗಜ್ಜಾರ್, ಶೀತಲ್ ಮಂಕಿಕರ್, ಡಿಚೋಳ್ಕರ್, ಸಾನ್ವಿ, ಶ್ರೀಮತಿ ಮೆಹತಾ, ಭಾರತಿ ಪೂಜಾರಿ, ಜಯಶ್ರೀ ಪೂಜಾರಿ, ಶಾಖಿಲ್ ಸಿದ್ದಿಕಿ, ನಂದಕುಮಾರ್ ಮೇಸ್ತ್ರಿ, ನಾಯ್ಕ್, ರೇವರಾಮ್ ಪುರೋಹಿತ್, ಮನೋಜ್ ತ್ರಿವೇದಿ, ಭೂಪೇಶ್ ಜೈನ್, ಸುನೀಲ್ ಮಗ್ಗಮ್, ದೇವಕಿ ಸುತರ್, ಲಕ್ಷ್ಮೀ ಕೋಟ್ಯಾನ್ ಹಾಗೂ ಶೈಲೇಶ್ ಕೋಟ್ಯಾನ್ ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡು ಕೇಕ್ ಕತ್ತರಿಸಿ ಶುಭ ಹಾರೈಸಿದರು.

ಅತಿಥಿಗಳನ್ನು ಹಾಗೂ ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿದ ಶಾಖಾ ಮುಖ್ಯಸ್ಥ ಜಯಪ್ರಸಾದ್ ಬಂಗೇರರು, ಬ್ಯಾಂಕ್‌ನ ಸಾಧನೆ ಹಾಗೂ ಗ್ರಾಹಕರ ಅಚಲ ನಂಬಿಕೆ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನು ಹೇಳಿದರು. ಉಪ ಶಾಖಾ ಮುಖ್ಯಸ್ಥೆ ಕಿಶೋರಿ ಪೂಜಾರ್ ಹಾಗೂ ಸಿಬ್ಬಂದಿ ವರ್ಗದ ಲೋಹಿತಾಕ್ಷ ಅಂಚನ್, ಕಿರಣ್ ಮನುಕದನ್, ಮಾನ್ಯ ಪೂಜಾರಿ, ನಿರೀಕ್ಷಾ ಸಾಲ್ಯಾನ್, ದಿಲೀಪ್ ಭವಿಸ್ಕರ್, ರಮಣಿ, ನೀರಜ್, ಸಾಯಿಕಿರಣ್, ಕಲ್ಪೆಶ್ (Non operation staff) ತಮ್ಮ ಶ್ರಮ ಮತ್ತು ಸೇವೆಯಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಮಾರಂಭದ ಅಂತ್ಯದಲ್ಲಿ, ಎಲ್ಲರೂ ಒಗ್ಗಟ್ಟಿನ, ವಿಶ್ವಾಸದ ಹಾಗೂ ಅಭಿವೃದ್ಧಿಯ ಬಾಂಧವ್ಯವನ್ನು ಹಂಚಿಕೊಂಡು, ಬ್ಯಾಂಕ್ ಇನ್ನೂ ಹೆಚ್ಚಿನ ಶ್ರೇಷ್ಟಿಯನ್ನು ತಲುಪಲಿ ಎಂಬ ಹಾರೈಕೆ ವ್ಯಕ್ತಪಡಿಸಿದರು.



Related posts

ಮಹಾರಾಷ್ಟ್ರ ಚುಣಾವಣಾ ಸಹ ಪ್ರಮುಖರಾದ ಅಶ್ವಿನಿ ಎಮ್. ಎಲ್. ಮುಂಬಯಿ ಪ್ರವಾಸ

Mumbai News Desk

ಶ್ರೀ ದುರ್ಗಾಪರಮೇಶ್ವರಿ-ಶನೀಶ್ವರ ದೇವಸ್ಥಾನ, ದಹಿಸರ್ (ರಾವಲ್‌ಪಾಡ)ದಲ್ಲಿ ನವರಾತ್ರಿ ಮಹೋತ್ಸವ ಸಂಪನ್ನ

Mumbai News Desk

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಸಂಪನ್ನ.

Mumbai News Desk

ನೀರನ್ನು ಕುದಿಸಿ, ಪಿಲ್ಟರ್ ಮಾಡಿ ಬಳಸಿ ಬಿ ಎಂ ಸಿಯಿಂದ ಮುಂಬೈ ಜನತೆಗೆ ಸಲಹೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ ಗಣೇಶ್ ಕೆ ಕಾಂಚನ್ ಆಯ್ಕೆ

Mumbai News Desk

ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ,

Mumbai News Desk