32 C
Mumbai
March 7, 2026
Mumbai News Kannada
ಪ್ರಕಟಣೆ

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ





ಭಾಯಂದರ್ ಪೂರ್ವದಲ್ಲಿರುವ ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆಯು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿದೆ. ಸುಂದರಿ ಶೆಟ್ಟಿ ಪರಿವಾರ, ಸಮಿತಿಯ ಸದಸ್ಯರು ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ, ಧರ್ಮಸೇವಕ ಶೇಖರ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮ ಸನ್ನಿಧಾನದಲ್ಲಿ (ಜಿ-03, ನ್ಯೂ ಕೃಷ್ಣ ಪ್ಯಾಲೇಸ್, ನರೇಶ್ ಸ್ಟೀಲ್ ಸಮೀಪ, ಎಸ್.ವಿ. ರಸ್ತೆ, ಭಾಯಂದರ್ ಪೂರ್ವ) ಜರುಗಲಿದೆ.

ಪೂಜಾ ಕಾರ್ಯಕ್ರಮಗಳ ವಿವರ:

  • ಬೆಳಿಗ್ಗೆ 7.30ಕ್ಕೆ: ವನದುರ್ಗಾ ಹೋಮ
  • ಬೆಳಿಗ್ಗೆ 10.00ರಿಂದ: ಭಜನೆ
  • ಬೆಳಿಗ್ಗೆ 11.30ಕ್ಕೆ: ಪುಷ್ಪಾಲಂಕಾರ ಮತ್ತು ಶ್ರೀ ದೇವಿ ದರ್ಶನದೊಂದಿಗೆ ಮಂಗಳಾರತಿ
  • ಮಧ್ಯಾಹ್ನ 12.30ಕ್ಕೆ: ಮಹಾ ಪ್ರಸಾದ ಅನ್ನಸಂತರ್ಪಣೆ

ಸಂಜೆಯ ಕಾರ್ಯಕ್ರಮಗಳು:

  • ಸಂಜೆ 6.00ರಿಂದ: ಮಾತೆ ಶಾಂತ ದುರ್ಗೆಗೆ ಭಜನೆ
  • ಸಂಜೆ 7.00ಕ್ಕೆ: ಹೂವಿನ ಪೂಜೆ ಮತ್ತು ಮಂಗಳಾರತಿ
  • ರಾತ್ರಿ 8.00ರಿಂದ: ಅನ್ನಸಂತರ್ಪಣೆ

​ಈ ಪುಣ್ಯ ಕಾರ್ಯಕ್ರಮಕ್ಕೆ ತಮ್ಮ ಬಂಧು-ಮಿತ್ರರೊಂದಿಗೆ ಆಗಮಿಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ತೀರ್ಥ ಪ್ರಸಾದ ಮತ್ತು ಅನ್ನ ಪ್ರಸಾದ ಸ್ವೀಕರಿಸಬೇಕೆಂದು ಧರ್ಮಸೇವಕ ಶೇಖರ್ ಶೆಟ್ಟಿ, ಸುಂದರಿ ಶೆಟ್ಟಿ ಪರಿವಾರ, ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ಸೇವಾ ಸಮಿತಿ ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಕಾಂದಿವಲಿ ಕನ್ನಡ ಸಂಘ ಮಹಿಳಾ ವಿಭಾಗ,ಜು 7 ರಂದು ಮಹಿಳಾ ಸದಸ್ಯೆಯರಿಂದ ‘ಸುದರ್ಶನ ವಿಜಯ’ ತುಳು ಯಕ್ಷಗಾನ ತಾಳಮದ್ದಳೆ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಕರ್ನಾಟಕ ಸಮಾಜ ಸೂರತ್ : ನ. 24ರಂದು ಕರ್ನಾಟಕ ರಾಜ್ಯೋತ್ಸವ

Mumbai News Desk

ಜ. 12. ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಕೋಟಿ -ಚೆನ್ನಯ ಕ್ರೀಡೋತ್ಸವ

Mumbai News Desk

ಬೊಯಿಸರ್ : ಜುಲೈ ತಾ.10 ರಂದು ಸ್ವಾಮಿ ನಿತ್ಯನಂದ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ

Mumbai News Desk