
ಮುಂಬಯಿ ಅಕ್ಟೋಬರ್ 1: ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮಹಿಳಾ ವಿಭಾಗವು ಹಮ್ಮಿಕೊಂಡಿದ್ದ **’ಮನೆ-ಮನೆಯಲ್ಲಿ ಭಜನಾ ಕಾರ್ಯಕ್ರಮ’**ದ ಅಂಗವಾಗಿ ನವರಾತ್ರಿಯ ಪ್ರಯುಕ್ತ ಸಮಿತಿಯ ಸದಸ್ಯರಾದ ಸೂರಪ್ಪ ಕುಂದರ್ ಅವರ ಬಾಂದ್ರಾದ ನಿವಾಸದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು.
ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಭಜನಾ ಭಕ್ತರು ಭಕ್ತಿಯಿಂದ ಭಜನೆ ಮತ್ತು ಆರತಿಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ಕುಮಾರೇಶ್ ಆಚಾರ್ಯ ಅವರನ್ನು ವಿಶಾಲ ಎಸ್. ಕುಂದರ್ ಅವರು ಶಾಲು ಹೊದಿಸಿ ಮತ್ತು ಫಲಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.




