32 C
Mumbai
March 7, 2026
Mumbai News Kannada
ಮುಂಬಯಿ

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಡೊಂಬಿವಲಿ: 61ನೇ ವರ್ಷದ ನವರಾತ್ರಿ ಉತ್ಸವ ಯಶಸ್ವಿ ಸಂಪನ್ನ





🎦 ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಡೊಂಬಿವಲಿ

🎦 61 ನೇ ನವರಾತ್ರೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ, ವಿಸರ್ಜನ ಮೆರವಣಿಗೆ

🌎 ಮುಂಬೈ ನ್ಯೂಸ್ ಕನ್ನಡ

​ಡೊಂಬಿವಲಿ, ಅ. 3: ಡೊಂಬಿವಲಿ ಪಶ್ಚಿಮ ವಿಭಾಗದಲ್ಲಿ ಕಳೆದ 61 ವರ್ಷಗಳಿಂದ ಶ್ರೀ ದುರ್ಗೆಯ ಆರಾಧನೆ ಮಾಡುತ್ತಿರುವ ತುಳು-ಕನ್ನಡಿಗರು, ಈ ಬಾರಿಯೂ ಸಾರ್ವಜನಿಕ ನವರಾತ್ರೋತ್ಸವವನ್ನು ಭಕ್ತಿ, ಶ್ರದ್ಧೆಗಳಿಂದ ಆಚರಿಸಿ ಯಶಸ್ವಿಯಾದರು. ಅ. 1ರ ಬುಧವಾರದಂದು ಜರುಗಿದ ನವರಾತ್ರಿ ಉತ್ಸವದ ಸಭಾ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸಾಮಾಜಿಕ ಮತ್ತು ರಾಜಕೀಯವಾಗಿ ಸಂಘಟಿತರಾಗುವ ಬಗ್ಗೆ ಗಣ್ಯರು ಕರೆ ನೀಡಿದರು.

​ಸ್ಥಳದ ಅಭಾವವಿದ್ದರೂ ಕೃಪೆಯಲ್ಲಿ ಅಭಾವವಿಲ್ಲ: ವಿಜೀತ್ ಶೆಟ್ಟಿ
​ಸಭೆಯನ್ನುದ್ದೇಶಿಸಿ ಮಾತನಾಡಿದ ಖ್ಯಾತ ಹೋಟೆಲ್ ಉದ್ಯಮಿ ವಿಜೀತ್ ಶೆಟ್ಟಿ ಅವರು, “ತುಳು-ಕನ್ನಡಿಗರು ಪಶ್ಚಿಮ ವಿಭಾಗದಲ್ಲಿ ಕಳೆದ 61 ವರ್ಷದಿಂದ ಶ್ರೀ ದುರ್ಗೆಯ ಆರಾಧನೆಯನ್ನು ಮಾಡುತ್ತಾ ಬಂದಿದ್ದಾರೆ. 43 ವರ್ಷಗಳಿಂದ ನಾನು ಈ ಕ್ಷೇತ್ರದ ನವರಾತ್ರಿ ಉತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಶ್ರೀ ದುರ್ಗೆಯನ್ನು ಆಚರಿಸಲು ಸ್ಥಳದ ಅಭಾವವಿದೆ, ಆದರೆ ಶ್ರೀ ದುರ್ಗೆಯು ನೀಡುವ ಕೃಪೆಯಲ್ಲಿ ಯಾವುದೇ ಅಭಾವವಿಲ್ಲ,” ಎಂದರು. ಪಶ್ಚಿಮ ವಿಭಾಗದಲ್ಲಿ ನವರಾತ್ರಿ ಆಚರಣೆ ಡೊಂಬಿವಲಿ ತುಳು-ಕನ್ನಡಿಗರಿಗೆ ಬಹು ದೊಡ್ಡ ಉತ್ಸವ ಎಂದು ಅವರು ಬಣ್ಣಿಸಿದರು.

​ರತನ್ ಪೂಜಾರಿ ಅವರಿಗೆ ದಾಸು ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ
​ಸಭೆಯಲ್ಲಿ ಸಮಾಜ ಸೇವಕ, ಡೊಂಬಿವಲಿ ಬಿಜೆಪಿ ಸೌತ್ ಸೆಲ್ ಅಧ್ಯಕ್ಷ ರತನ್ ಪೂಜಾರಿ ಮತ್ತು ಅವರ ತಾಯಿ ರತ್ನಾ ಪೂಜಾರಿಯವರಿಗೆ ಮಂಡಳಿಯ ಸಂಸ್ಥಾಪಕ ಕುರ್ಕಿಲಬೆಟ್ಟು ದಾಸು ಶೆಟ್ಟಿ ಸಂಸ್ಮರಣಾರ್ಥ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

​ಪ್ರಶಸ್ತಿ ಸ್ವೀಕರಿಸಿದ ರತನ್ ಪೂಜಾರಿ ಮಾತನಾಡಿ, “ತಾಯಿ ದುರ್ಗೆಯ ಅನುಗ್ರಹ ಮತ್ತು ನನ್ನ ತಾಯಿಯ ಆಶೀರ್ವಾದ ಹಾಗೂ ಆಜ್ಞೆಯ ಮೇರೆಗೆ ನಾನು ಜನಹಿತ ಸೇವೆಯನ್ನು ಮಾಡುತ್ತಿದ್ದೇನೆ. ತುಳು-ಕನ್ನಡಿಗರಾದ ನಾವೆಲ್ಲರೂ ಒಂದಾಗಿ ಡೊಂಬಿವಲಿ ನಗರದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳ ಕ್ರಾಂತಿಯನ್ನು ಮಾಡೋಣ. ಈ ಪ್ರಶಸ್ತಿಯನ್ನು ಶ್ರೀ ದುರ್ಗೆಯ ಪ್ರಸಾದ ಎಂದು ಸ್ವೀಕರಿಸಿದ್ದೇನೆ. ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ನನ್ನನ್ನು ಸಂಪರ್ಕಿಸಬಹುದು,” ಎಂದು ನುಡಿದರು.

​ರಾಜಕೀಯ ಸಂಘಟನೆಗೆ ಧರ್ಮದರ್ಶಿ ಕರೆ
​ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಮಾತನಾಡಿ, ಹೊಟೇಲ್ ದ್ವಾರಕದ ಮಾಲಕ ಲತಾ ಸಾಧು ಶೆಟ್ಟಿ ಮಕ್ಕಳು, ವಿಜೀತ್ ಶೆಟ್ಟಿ, ವಿಕಾಸ್ ಶೆಟ್ಟಿ, ವೇಣುಗೋಪಾಲ ರೈ ಅವರು ಹಲವಾರು ವರ್ಷಗಳಿಂದ ಸಂಸ್ಥೆಗೆ ಯಕ್ಷಗಾನದ ಪ್ರಾಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದು, ಈ ವರ್ಷ ಮೂರ್ತಿ ಸೇವೆಯ ಸೌಭಾಗ್ಯವು ಅವರಿಗೆ ಲಭಿಸಿದೆ ಎಂದು ತಿಳಿಸಿದರು. ದಾಸು ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಯು ದೀನ ದಲಿತರ ಸೇವೆಗೆ ಲಭ್ಯವಿರುವ ಉತ್ತಮ ಸಮಾಜ ಸೇವಕ ರತನ್ ಪೂಜಾರಿಗೆ ಸಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.
​”ಡೊಂಬಿವಲಿ ನಗರದಲ್ಲಿ ತುಳು-ಕನ್ನಡಿಗ ರಾಜಕಾರಣಿ ಯಾರೊಬ್ಬರೂ ಇಲ್ಲ. ಈ ವರ್ಷ ನಡೆಯುವ ನಗರ ಪಾಲಿಕೆ ಚುಣಾವಣೆಯಲ್ಲಿ ರತನ್ ಪೂಜಾರಿಗೆ ಟಿಕೆಟ್ ನೀಡಿದರೆ ನಾವೆಲ್ಲರೂ ಒಗ್ಗಟ್ಟಾಗಿ ರತನ್ ಪೂಜಾರಿಯನ್ನು ಗೆಲ್ಲಿಸಲು ಪ್ರಯತ್ನಿಸ ಬೇಕು. ತಮ್ಮೆಲ್ಲರ ಸಹಕಾರದಿಂದ ಈ ವರ್ಷದ ಶರನ್ನವರಾತ್ರಿ ಆಚರಣೆ ಅತ್ಯುತ್ತಮವಾಗಿ ನೆರವೇರಿದೆ,” ಎಂದು ಅಶೋಕ್ ಶೆಟ್ಟಿ ರಾಜಕೀಯ ಸಂಘಟನೆಗೆ ಒತ್ತು ನೀಡಿದರು.

​ಇದೇ ಸಂದರ್ಭದಲ್ಲಿ ಯಕ್ಷಗಾನ ಸೇವಕರಾದ ಲತಾ ಸಾಧು ಶೆಟ್ಟಿ, ವಿಜೇತ್ ಶೆಟ್ಟಿ ಮತ್ತು ವೇಣುಗೋಪಾಲ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

​ನವರಾತ್ರಿ ಉತ್ಸವದ ಅಂಗವಾಗಿ, ಬಿಲ್ಲವರ ಎಸೋಸಿಯೇಶನ್ ಪ್ರಾಯೋಜಕತ್ವದ ನಾರಾಯಣ ಗುರು ಯಕ್ಷಗಾನ ಮಂಡಳಿಯ ನುರಿತ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮ’ ಯಕ್ಷಗಾನವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಮಂಡಳಿಯ ಪರವಾಗಿ ಡೊಂಬಿವಲಿ ಪರಿಸರದ ಸಂಘ-ಸಂಸ್ಥೆಗಳನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು.

​ವೇದಿಕೆಯ ಮೇಲೆ ಮಂಡಳಿಯ ಅಧ್ಯಕ್ಷ ಗೋಪಾಲ ಕೆ. ಶೆಟ್ಟಿ, ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ವಿಜೀತ್ ಶೆಟ್ಟಿ, ವೇಣುಗೋಪಾಲ ರೈ, ರತನ್ ಪೂಜಾರಿ, ದರ್ಶನ್ ಶೆಟ್ಟಿ, ವಿಕಾಸ್ ಶೆಟ್ಟಿ, ರಮೀತಾ ಶೆಟ್ಟಿ, ವಿಲಾಸಿನಿ ಶೆಟ್ಟಿ, ರತ್ನಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ರಘುವೀರ್ ಭಟ್ ಸನ್ಮಾನ ಪತ್ರವನ್ನು ಮತ್ತು ಸಂಘ-ಸಂಸ್ಥೆಯ ಯಾದಿಯನ್ನು ವಾಚಿಸಿದರು. ಲತೇಶ್ ಶೆಟ್ಟಿ ಮತ್ತು ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಕಿಶೋರ್ ಶೆಟ್ಟಿ ವಂದಿಸಿದರು.


ಆಕ್ಟೊಬರ್ 2ರ ಗುರುವಾರ ಸಾಯಂಕಾಲ ಶ್ರೀದೇವಿಯ ವಿಸರ್ಜನಾ ಮೆರವಣಿಗೆಯು ವಿವಿಧ ವೇಷ ಭೂಷಣ ಗಳೊಂದಿಗೆ ವೈಭವ ವಾಗಿ ನಡೆಯಿತು,

ವಿವಿಧ ವೇಶಭೂಷಣಗಳೊಂದಿಗೆ ನಾಸಿಕ್ ಡೋಲ್, ತಟ್ಟಿರಾಯ, ಸಿಡಿಮದ್ದು, ಬ್ಯಾಂಡುವಾಲಗ, ಕೇರಳ ಚೆಂಡೆ ಕುಣಿತ, ಮಂಡಳಿಯ ಮಹಿಳೆಯರಿಂದೆ ಭಜನೆ, ಮಂಡಳಿಯ ಮಕ್ಕಳಿಂದ ಮತ್ತು ತವರಿನಿಂದ ಆಗಮಿಸಿದ ಭಜನಾ ತಂಡದಿಂದ ಕುಣಿತ ಭಜನೆ, ಹುಲಿವೇಷ, ಯಕ್ಷಗಾನದ ಪ್ರತ್ಯಕ್ಷತೆ, ಹಾಗೂ ಇನ್ನಿತರ ವೇಷಭೂಷಣಗಳು ಮೆರವಣಿಗೆಗೆ ಮೆರಗನ್ನು ನೀಡಿದವು. ಪರಿಸರದ ತುಳು ಕನ್ನಡಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯ ಮೆರೆಗನ್ನು ಹೆಚ್ಚಿಸಿದರು.

ಒಟ್ಟಿನಲ್ಲಿ, ಡೊಂಬಿವಲಿಯ ಈ ನವರಾತ್ರಿ ಉತ್ಸವವು ಧಾರ್ಮಿಕ ಆಚರಣೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನದ ಸಮ್ಮಿಲನವಾಗಿ ಯಶಸ್ವಿಯಾಗಿ ನೆರವೇರಿತು.

ಮಂಡಳಿಯ ಧರ್ಮದರ್ಶಿಗಳಾದ ಅಶೋಕ್ ದಾಸು ಶೆಟ್ಟಿ ಯವರ ಮುಂದಾಳತ್ವದಲ್ಲಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ವಿಲಾಸಿನಿ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳ, ಸದಸ್ಯರ ಸಹಕಾರದಿಂದ 61 ನೇ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿರುವ ಈ ಮಂಡಳಿಯು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತ, ಪರಿಸರದ ಪ್ರಮುಖ ಶ್ರದ್ಧಾ ಕೇಂದ್ರವಾಗಿದ್ದು, ಡೊಂಬಿವಲಿ ದಸರವು ವಿಶ್ವ ವಿಖ್ಯಾತ ವಾಗಲಿ ಎಂಬ ಆಶಯ ನಮ್ಮದು.




Related posts

ಬೊರಿವಲಿ: ಶ್ರೀ ಜಗದೀಶ್ವರಿ ಮಂದಿರದ ಪುನರ್‌ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಲಲಿತ ಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ವತಿಯಿಂದ ನಾಡ ಹಬ್ಬ ಅಚರಣೆ

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಸಂಪನ್ನ.

Mumbai News Desk

ಲಾಲ್ ಬಾಗ್ ಚಾ ರಾಜ ಪಂಡಲ್ ನಲ್ಲಿ ವಿಐಪಿ ದರ್ಶನ ಪಕ್ಷಪಾತವನ್ನು ಖಂಡಿಸಿ, ನೋಟಿಸ್ ಜಾರಿ ಮಾಡಿದ ಮಾನವ ಹಕ್ಕುಗಳ ಆಯೋಗ

Mumbai News Desk