ಕಂಬಳ ಕರಾವಳಿಗರ ನೆಚ್ಚಿನ ಕ್ರೀಡೆ. ಕೇವಲ ಕ್ರೀಡೆಯಷ್ಟೇ ಅಲ್ದೇ ಕರಾವಳಿಯ ಮಣ್ಣಿನ ಆಚರಣೆ. ಈ ಆಚರಣೆಯಲ್ಲಿ ನಂಬಿಕೆಯಿದೆ. ದೈವಿಕ ನೆಲೆ ಇದೆ, ವರ್ಷದ ಆಯಾ ಋತುವಿನಲ್ಲಿ ಕಂಬಳವನ್ನು ಅವಳಿ ಜಿಲ್ಲೆಯಲ್ಲಿ ಆಚರಿಸಲಾಗುತದೆ.
ಬೇರೆ ಜಿಲ್ಲೆಗಳಲ್ಲಿ ಕಂಬಳ ನಡೆಯಬಾರದು ಅಂತಾ ಪೇಟಾದವರು ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ಮೈಸೂರು ಹಾಗೂ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಅಡ್ಡಿಯಾಗಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಕಂಬಳವನ್ನು ರಾಜ್ಯದ ಯಾವ ಮೂಲೆಯಲ್ಲೂ ಮಾಡಬಹುದು ಅಂತಾ ಆದೇಶ ನೀಡಿದೆ. ಇದು ಕಂಬಳ ಪ್ರೇಮಿಗಳಲ್ಲಿ ಹರ್ಷ ತಂದಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿ ಪ್ರಸಾದ ಶೆಟ್ಟಿ, ಕಂಬಳ ಈ ಭಾಗದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು, ಆ ಮೂಲಕ ದೇಶ ವಿದೇಶಗಲ್ಲಿಯೂ ಖ್ಯಾತಿ, ಮನ್ನಣೆ ಪಡೆದುಕೊಂಡಿದೆ. ಈ ಕ್ರೀಡೆಯನ್ನು ರಾಜ್ಯ ಕ್ರೀಡೆ ಎಂದು ಗುರುತಿಸಿ, ರಾಜ್ಯದ ಕಂಬಳ ಅಸೋಸಿಯೇಷನ್ ಅನ್ನು ಮಾನ್ಯ ಮಾಡಿದೆ. ಈಗ ಸಿಕ್ಕಿರುವ ಬಹಳ ದೊಡ್ಡ ತೀರ್ಪು ಆಗಿದ್ದು, ನಮಗೆ ಬಹಳ ಸಂತೋಷ ಆಗಿದೆ ಎಂದು ತಿಳಿಸಿದ್ದಾರೆ.
.
.
.
.




