September 6, 2026
Mumbai News Kannada
ತುಳುನಾಡು

ಕಾಪು : ಧರ್ಮಪಾಲ ಯು ದೇವಾಡಿಗ ಮತ್ತು ಪರಿವಾರದವರ ಹರಕೆ ಮಾರಿ ಪೂಜೆ ಯಶಸ್ವಿ ಸಂಪನ್ನ





ದೇವಾಡಿಗ ಮಹಾಮಂಡಲದ ಅಧ್ಯಕ್ಷ, ಅಖಿಲ ಭಾರತ ತುಳು ಒಕ್ಕೂಟ ಇದರ ಮಾಜಿ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ಅವರು ಸಕುಟುಂಬ – ಪರಿವಾರ ಸಮೇತರಾಗಿ ಅಕ್ಟೋಬರ್ 28ರ ಮಂಗಳವಾರದಂದು ಕಾಪುವಿನ ಶ್ರೀ ಹಳೇಮಾರಿಯಮ್ಮ ದೇವರಿಗೆ ಹರಕೆ ಮಾರಿ ಪೂಜೆ ಸೇವೆ ನೀಡಿದರು.
ಅಂದು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಹೂವಿನ ಪೂಜೆಯ ಬಳಿಕ ಹೊರೆ ಕಾಣಿಕೆಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀ ಹಳೇಮಾರಿಯಮ್ಮನವರ ಸನ್ನಿಧಿಯಲ್ಲಿ ಹರಕೆ ಮಾರಿ ಪೂಜೆ ಸೇವೆ ನೀಡಿದರು.ಸುಜಾತಾ ಡಿ ದೇವಾಡಿಗ ಅವರು ದೇವಿಗೆ ಮಲ್ಲಿಗೆ ಹಾಗೂ ಪಟ್ಟಿ ಸೀರೆಯನ್ನು ಸಮರ್ಪಿಸಿದರು. ಶ್ರೀ ಮಾರಿಯಮ್ಮನವರನ್ನು ಬೆಳ್ಳಿರಥದಲ್ಲಿ ಸವಾರಿ ಮಾಡಲಾಯಿತು.


ಹರಕೆ ಮಾರಿ ಪೂಜೆಯ ನಂತರ ಬುಧವಾರದಂದು ಸ್ತಳೀಯ ಕೆ ವನ್ ಹೋಟೆಲ್ ನ ಸಭಾಭವನದಲ್ಲಿ ಧರ್ಮ ಪಾಲ ದೇವಡಿಗರು ಅನ್ನದಾನ ಸೇವೆ ನೀಡಿದರು. ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿ ಧರ್ಮಪಾಲ ದೇವಾಡಿಗ, ಸುಜಾತ ಧರ್ಮಪಾಲ ದೇವಾಡಿಗ, ಡಾ. ಪೂನಂ ಆರ್ ಶರೀಗಾರ್, ಡಾ. ರಾಹುಲ್ ಶೇರಿಗಾರ್, ಪವನ್ ಡಿ ದೇವಾಡಿಗ, ನಿಮ್ಮಿ ಪವನ್ ದೇವಾಡಿಗ, ಚಿತ್ರ ಶೇರಿಗಾರ್ ಹಾಗೂ ಕುಟುಂಬದ ಸದಸ್ಯರು ಕ್ರತಾರ್ಥರಾದರು.


ದೇವಾಡಿಗ ಹಾಗೂ ಪರಿವಾರದ ಸದಸ್ಯರು, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ ಶೆಣೈ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಆರ್ ಬೆಲ್ಚಡ, ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಯಸ್ ದೇವಾಡಿಗ ಮತ್ತು ಗಣ್ಯರು ಹಾಗೂ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗೀಗಳಾದರು.

.

.

.



Related posts

ತೋಕೂರು ಮದ್ದೇರಿ ದೈವಸ್ಥಾನದ ಗೌ.ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ, ಅಧ್ಯಕ್ಷರಾಗಿ ಹರಿಪ್ರಸಾದ್ ಜಿ. ಶೆಟ್ಟಿ ಆಯ್ಕೆ

Mumbai News Desk

ಪಡುಬಿದ್ರಿ : ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿ ನಿಧಿ ವಿತರಣೆ, ಉಪನ್ಯಾಸ

Mumbai News Desk

ತುಳುವೆರೆ ‘ತುಡರ ಪರ್ಬ’: ಬಲಿ ಚಕ್ರವರ್ತಿ ಬೊಕ್ಕ ಬೆನ್ನಿ ಸಂಸ್ಕೃತಿದ ಸಂಗಮ

Mumbai News Desk

ನಾಡಿನ ಸಂಸ್ಕೃತಿ ಉಳಿಸುವಲ್ಲಿ ಕಟೀಲು ಕ್ಷೇತ್ರದ ಪಾತ್ರ ಅನನ್ಯ: ಸಚಿವ ಯು. ಟಿ. ಖಾದರ್ (೨೬ನೇ ವರ್ಷದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ)

Mumbai News Desk

ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 16ನೇ ವರ್ಷದ ವಾರ್ಷಿಕೋತ್ಸವ

Mumbai News Desk

ಮೂಲ್ಕಿ: ಸೋಮಪ್ಪ ಸುವರ್ಣರ ಸ್ಮರಣೆ: ಸಾಧಕರಿಗೆ ಪ್ರಶಸ್ತಿ, ಸೇವಾ ಕಾರ್ಯಕ್ಕೆ ಪ್ರೇರಣೆ-ಮಾಜಿ ಸಚಿವ ಅಭಯ ಚಂದ್ರ ಮೂಲ್ಕಿ

Mumbai News Desk