July 23, 2026
Mumbai News Kannada
ಸುದ್ದಿ

ರಾಜ್ಯವ್ಯಾಪಿ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ :ಯಾವ ಮೂಲೆಯಲ್ಲಾದ್ರೂ ಕಂಬಳ ನಡೆಸಲು ಆದೇಶ







ಕಂಬಳ ಕರಾವಳಿಗರ ನೆಚ್ಚಿನ ಕ್ರೀಡೆ. ಕೇವಲ ಕ್ರೀಡೆಯಷ್ಟೇ ಅಲ್ದೇ ಕರಾವಳಿಯ ಮಣ್ಣಿನ ಆಚರಣೆ. ಈ ಆಚರಣೆಯಲ್ಲಿ ನಂಬಿಕೆಯಿದೆ. ದೈವಿಕ ನೆಲೆ ಇದೆ‌, ವರ್ಷದ ಆಯಾ ಋತುವಿನಲ್ಲಿ ಕಂಬಳವನ್ನು ಅವಳಿ ಜಿಲ್ಲೆಯಲ್ಲಿ ಆಚರಿಸಲಾಗುತದೆ.

ಬೇರೆ ಜಿಲ್ಲೆಗಳಲ್ಲಿ ಕಂಬಳ ನಡೆಯಬಾರದು ಅಂತಾ ಪೇಟಾದವರು ಕೋರ್ಟ್​ ಮೊರೆ ಹೋಗಿದ್ದರು. ಇದರಿಂದ ಮೈಸೂರು ಹಾಗೂ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಅಡ್ಡಿಯಾಗಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್​, ಕಂಬಳವನ್ನು ರಾಜ್ಯದ ಯಾವ ಮೂಲೆಯಲ್ಲೂ ಮಾಡಬಹುದು ಅಂತಾ ಆದೇಶ ನೀಡಿದೆ. ಇದು ಕಂಬಳ ಪ್ರೇಮಿಗಳಲ್ಲಿ ಹರ್ಷ ತಂದಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿ ಪ್ರಸಾದ ಶೆಟ್ಟಿ, ಕಂಬಳ ಈ ಭಾಗದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು, ಆ ಮೂಲಕ ದೇಶ ವಿದೇಶಗಲ್ಲಿಯೂ ಖ್ಯಾತಿ, ಮನ್ನಣೆ ಪಡೆದುಕೊಂಡಿದೆ. ಈ ಕ್ರೀಡೆಯನ್ನು ರಾಜ್ಯ ಕ್ರೀಡೆ ಎಂದು ಗುರುತಿಸಿ, ರಾಜ್ಯದ ಕಂಬಳ ಅಸೋಸಿಯೇಷನ್ ಅನ್ನು ಮಾನ್ಯ ಮಾಡಿದೆ. ಈಗ ಸಿಕ್ಕಿರುವ ಬಹಳ ದೊಡ್ಡ ತೀರ್ಪು ಆಗಿದ್ದು, ನಮಗೆ ಬಹಳ ಸಂತೋಷ ಆಗಿದೆ ಎಂದು ತಿಳಿಸಿದ್ದಾರೆ.

.

.

.

.



Related posts

ಕರ್ನಾಟಕ ಸಮಾಜ ಸೂರತ್ : “ಕರ್ನಾಟಕ ರಾಜ್ಯೋತ್ಸವ ” ಆಚರಣೆ

Mumbai News Desk

ಶಬರಿಮಲೆ ಯಾತ್ರೆಗೆ ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ.ಆರ್. ಪುತ್ರನ್ ಅವರಿಗೆ ನುಡಿನಮನ: ಅಂಧೇರಿಯಲ್ಲಿ ಸಂತಾಪ ಸಭೆ

Mumbai News Desk

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು

Mumbai News Desk

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಖ್ಯಾತ ಸಾಹಿತಿ ಕಮಲ ಹಂಪನಾ ಇನ್ನಿಲ್ಲ

Mumbai News Desk