
ವರದಿ : ಈಶ್ವರ ಎಂ. ಐಲ್
ಮಂಗಳೂರು : ಪವಿತ್ರವಾದ ಮಂಗಳಾದೇವಿಯ ಸಮೀಪ ತಲೆ ಎತ್ತಿ ನಿಂತ ಕುಲಾಲ ಭವನ ಭವಿಷ್ಯದ ಜನಾಂಗಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ಹೊಂದಿದ್ದು ಇದು ಭವಿಷ್ಯದ ಭಾರತಕ್ಕೆ ನೀಡಿದಂತ ಅತೀ ಅಮೂಲ್ಯವಾದ ಕೊಡುಗೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ನುಡಿದರು.

ಕುಲಾಲ ಸಂಘ ಮುಂಬಯಿ ಹದಿನೈದು ಕೋಟಿಗೂ ಅಧಿಕ ಮೊತ್ತದಲ್ಲಿ ಸಮಾಜ ಬಾಂಧವರ ಹಾಗೂ ದಾನಿಗಳ ಸಹಾಯದಿಂದ ಮಂಗಳೂರಿನ ಮಂಗಳಾದೇವಿ ಸಮೀಪ ನಿರ್ಮಿಸಿದ, ಕುಲಾಲ ಭವನ ಉದ್ಘಾಟನಾ ಸಮಾರಂಭವು ನ. 23ರಂದು ಅಧ್ಯಕ್ಷ ರಘು ಎ.ಮೂಲ್ಯ ರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆದಿದ್ದು ಮುಖ್ಯ ಅತಿಥಿಯಾಗಿ ಮಾತನಾಡಿದ ಯು.ಟಿ. ಖಾದರ್, ಅವರು ಈ ಭವ್ಯ ಕುಲಾಲ ಭವನವು ಕರಾವಳಿ ಕರ್ನಾಟಕದ ಕಿರೀಟಕ್ಕೆ ದೊಡ್ಡ ಗರಿ ಮೂಡಿಸಿದಂತಾಗಿದೆ. ತಮ್ಮ ಕುಲ ಕಸುಬಿನೊಂದಿಗೆ, ವಿವಿಧ ಉದ್ಯೋಗ, ಉದ್ಯಮಗಳ ಮೂಲಕ ತಮ್ಮೊಂದಿಗೆ ತನ್ನ ಸಮುದಾಯವನ್ನು ಬೆಳೆಸುವ ಕಾರ್ಯ ಇತರರಿಗೂ ಮಾದರಿ. ಇದೇ ರೀತಿ ಸಮಾಜದ ಹಿರಿಯರ ಕನಸನ್ನು ನನಸಾಗಿಸುವ ಕಾರ್ಯ ಕುಲಾಲ ಸಮಾಜದಿಂದ ಇನ್ನೂ ನಡೆಯಲಿ ಎಂದು ಶುಭ ಹಾರೈಸಿದರು.

ಶ್ರೀಮತಿ ಸುಮಿತ್ರಾ ರಾಜು ಸಾಲಿಯನ್ ಸಭಾಂಗಣ, ಶ್ರೀಮತಿ ಯಶೋಧಾ ಬಾಬು ಸಾಲಿಯನ್ ಬಂಟ್ವಾಳ ವೇದಿಕೆ, ಶ್ರೀಮತಿ ಸರಸ್ವತಿ ವಿಶ್ವನಾಥ್ ಬಂಗೇರಾ ಕುಲಾಯಿ (ಬಾಲ್ಕನಿ), ಶ್ರೀಮತಿ ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಶ್ರೀಮತಿ ಸಾವಿತ್ರೀ ಪಿ. ಕೆ. ಸಾಲಿಯನ್ ವೇದಿಕೆ, ಶ್ರೀಮತಿ ವಸಂತಿ ಸದಾಶಿವ ಬಂಜನ್ ಆಡಳಿತ ಕಚೇರಿಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಓಡಿಯೂರು ಮತ್ತು ಕರ್ಮಯೋಗಿ ಶ್ರೀ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮನಿಲ, ಇವರು ಇತರ ಗಣ್ಯರೊಂದಿಗೆ ನೆರವೇರಿಸಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಕುಲಾಲ ಶಬ್ಧಕ್ಕೆ ಒಳ್ಳೆಯ ಅರ್ಥವಿದೆ. ಮೂಲ್ಯರು ಅಂದರೆ ಅಮೂಲ್ಯ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ತ್ಯಾಗ, ವಿಶ್ವಾಸದ ಮೂಲಕ ಈ ಸಮಾಜವು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದು ಕುಲಾಲ ಭವನ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ. ಪ್ರೀತಿ ಇದ್ದಲ್ಲಿ ಸಂಪತ್ತು ಇದೆ. ಅದು ಈ ಸಮಾಜದಲ್ಲಿದೆ ಎಂದರು.

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಸಮುದಾಯ ಗಳ ಜತೆ ಸೇರುವ ಭಾವನಾತ್ಮಕ ಪ್ರತಿಕ್ರಿಯೆ, ದೈವ- ದೇವರ ಸೇವೆಯ ಮೂಲಕ ಸಮಾಜಕ್ಕೆ ಉಳಿತನ್ನು ಬಯಸುವ ಕುಲಾಲ ಸಮಾಜದ ಸಜ್ಜನಿಕೆಯ ರೂಪವಾಗಿ ಮುಂಬಯಿ ಸಂಘದ ನೆರವಿನಿಂದ ಕುಲಾಲ ಭವನ ನಿರ್ಮಾಣವಾಗಿದ್ದು, ನಮ್ಮ ಇತಿಹಾಸವನ್ನು ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ನಮ್ಮವರಿಂದಾಗಲಿ ಎಂದರು.

ಕೇಂದ್ರ ಸಚಿವ ಶ್ರೀಪಾದ ಯೆಸ್ಕೊ ನಾಯಕ್, ಮಾತನಾಡುತ್ತಾ ಪ್ರತೀ ವ್ಯಕ್ತಿಯ ಅಭಿವೃದ್ದಿ ಇಡೀ ರಾಷ್ಟದ ಅಭಿವೃದ್ದಿಯಾಗಿದ್ದು, ಕುಲಾಲ ಸಮಾಜವು ಒಗ್ಗಟ್ಟಿನಿಂದ ಕುಲಾಲ ಭವನವನ್ನು ಲೋಕಾರ್ಪಣೆ ಮಾಡುದರೊಂದಿಗೆ ಕಾರ್ಯರೂಪಕ್ಕೆ ತಂದಿಗೆ ಎಂದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ನನಸಾಗಲು ಕುಂಬಾರಿಕೆಯ ಕೌಶಲ್ಯವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಕುಂಬಾರಿಕೆ ಕೇಂದ್ರಗಳನ್ನು ಆರಂಭಿಸಲು ನಾವೆಲ್ಲ ಕೈಜೋಡಿಸಬೇಕು ಎಂದರು.

ಮಂಗಳೂರಿನ ವೇದವ್ಯಾಸ ಕಾಮತ್ ಮಾತನಾಡಿ, ದಾನಿಗಳು ತಮ್ಮ ಹೆತ್ತವರ ಹೆಸರಿನಲ್ಲಿ ದೊಡ್ಡ ಮೊತ್ತಗಳನ್ನು ನೀಡುವ ಮೂಲಕ ನಿರ್ಮಾಣಗೊಂಡ ಕುಲಾಲ ಭವನವು ಮಂಗಳೂರಿಗೆ ದೊಡ್ಡ ಹೆಗ್ಗುರುತು. ಇದರ ದಾನಿಗಳೆಲ್ಲ ಅಭಿನಂದನಾರ್ಹರು ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಯಾವುದೇ ಸಮುದಾಯದ ಸಂಖ್ಯೆ ಮುಖ್ಯವಲ್ಲ, ಅದರ ಉದ್ದೇಶ ಮುಖ್ಯ ಎಂಬುದನ್ನು ಕುಲಾಲ ಸಮುದಾಯ ತೋರಿಸಿ ಕೊಟ್ಟಿದೆ. ಕುಲಾಲ ಭವನ ಇಡೀ ಮಂಗಳೂರಿನ ಹಾಗೂ ಪರಿಸರದ ಎಲ್ಲರಿಗೂ ಪ್ರಯೋಜನಕಾರಿಯಾಗಲಿ ಎಂದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ನಡುಬೆಟ್ಟು ಶ್ರೀ ಉದ್ಧವ ರೌದ್ರನಾ ಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ.ರವಿ ಎನ್., ಮಂಗಳಾದೇವಿ ದೇವಸ್ಥಾನದ ಟ್ರಸ್ಟಿ ಅರುಣ್ ಕುಮಾರ್ ಐತಾಳ್, ಮಾರ್ಗನ್ಸ್ ಗೇಟ್ ಸೇಂಟ್ ರಿಚರ್ಡ್ ಧರ್ಮ ಕ್ರೋಸ್ತಾ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಬಯಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯ ಕಾಂತ ಜಯ ಸುವರ್ಣ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕ ಜಯಕೃಷ್ಣ ಎ.ಶೆಟ್ಟಿ, ಬಂಟರ ಸಂಘ ಮುಂಬಯಿಯ ಎಸ್ ಎಂ ಶೆಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಮುಂಬಯಿಯ ಉದ್ಯಮಿ, ಸಮಾಜ ಸೇವಕ ರವೀಂದ್ರನಾಥ್ ಭಂಡಾರಿ, ದಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ನಾಸಿಕ್ ಉದ್ಯಮಿಗಳಾದ ಸಂಜೀವ ಕೆ.ಬಂಗೇರ, ರಮಾನಂದ ಬಂಗೇರ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಎಡಪದವು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್ ಟಿ ಪೂಜಾರಿ, ದ.ಕ. ಜಿಲ್ಲಾ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪ್ಪಾಡಿ, ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಯಜೇಶ್ ಬರ್ಕೆ, ಸಂಘದ ಪದಾಧಿಕಾರಿ ಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ದಿಕ್ಸೂಚಿ ಭಾಷಣ ಮಾಡಿದರು.
ಬೆಳಿಗ್ಗೆ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ, ವೈಭವದ ಮೆರ ವಣಿಗೆ ಪ್ರಾರಂಭವಾಯಿತು. ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗ, ವೀರನಾರಾಯಣ ಮಾತೃ ಮಂಡಳಿ ಹಾಗೂ ಸ್ವಾಮಿಲ ಪದವು ಶ್ರೀ ಮಲ್ಲಿಕಾರ್ಜುನ ಸ್ವಾಮಿ ತಂಡದಿಂದ ಕುಣಿತ ಭಜನೆ, ಚೆಂಡೆ -ವಾದ್ಯ ಮೇಳ, ಗೊಂಬೆ-ಕೀಲು ಕುದುರೆ, ಶಿಸ್ತಿನಿಂದ ಸಾಗಿದ ಎನ್‌ಸಿಸಿ ಕೆಡೆಟ್ ಮಕ್ಕಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿದ್ದರು.
ಮಧ್ಯಾಹ್ನ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು. ಕುಲಾಲ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ.ಸಾಲಿಯಾನ್ ಸ್ವಾಗತಿಸಿ ದರು. ಅರುಣಾ ಕುಲಾಲ್, ಪ್ರವೀಣ್ ಬಸ್ತಿ ಮತ್ತು ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಡಿ.ಐ.ಮೂಲ್ಯ ವಂದಿಸಿದರು.
ಸಮಾರೋಪ :
ಮಂಗಳೂರಿನ ಕುಲಾಲ ಭವನ ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ದಿ. ಪಿ. ಕೆ. ಸಾಲ್ಯಾನ್ ಸೇರಿ ನಮ್ಮ ಎಲ್ಲಾ ಹಿರಿಯರ ಕನಸು ಹಾಗೂ ಪರಿಶ್ರಮ. ಇದನ್ನು ನೆನಸಾಗಿಸುವಲ್ಲಿ ಸಮಾಜ ಬಾಂಧವರೆಲ್ಲರೂ, ದಾನಿಗಳು ಹಾಗೂ ಮಹಾದಾನಿಗಳೊಂದಿಗೆ ಕೈಜೋಡಿಸಿದ್ದಾರೆ. ಈ ಯೋಜನೆಯನ್ನು ಸಂಪೂರ್ಣಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಕುಲಾಲ ಸಂಘ ಮುಂಬಯಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿರುವೆನು ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ.ಮೂಲ್ಯ ಪಾದೆಬೆಟ್ಟು ನುಡಿದರು.
ನ. 23ರಂದು ಮಂಗಳೂರಿನ ಮಂಗಳಾದೇವಿ ಸಮೀಪ ನಿರ್ಮಾಣಗೊಂಡ ಬ್ರಹತ್ ಕುಲಾಲ ಭವನ ಉದ್ಘಾಟನಾ ಸಮಾರಂಭದ ಸಮಾರೋಪ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಲಾಲ ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು. ದೂರದ ಹಳ್ಳಿಗಳಿಂದಲೂ ಸಮಾಜ ಬಾಂಧವರು ಆಗಮಿಸಿ ಪ್ರೋತ್ಸಾಹ ನೀಡಿರುವುದನ್ನು ಅವರು ಮೆಚ್ಚಿದರು. ದಾನಿಗಳ ಜೊತೆಗೆ ಅನೇಕರು ಠೇವಣಿಗಳ ಮೂಲಕ ಮಹತ್ವದ ಸಹಕಾರ ನೀಡಿದ್ದಾರೆ, ಕೆಲವರು ತಮ್ಮ ಠೇವಣಿಯನ್ನು ದಾನವಾಗಿ ಪರಿವರ್ತಿಸುವ ಮೂಲಕ ಉದಾರತೆ ತೋರಿದ್ದಾರೆ. ಮುಂಬಯಿಯಿಂದ ಐನೂರಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸಿದ್ದು, ಮುಂಬಯಿ ಕುಲಾಲ ಸಂಘದ ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿ, ಉಪಸಮಿತಿಗಳು, ಮಹಿಳಾ ವಿಭಾಗ ಮತ್ತು ಸ್ಥಳೀಯ ಸಮಿತಿಗಳು ನೀಡಿದ ಸೇವೆ ಅವಿಸ್ಮರಣೀಯ. ಮುಖ್ಯವಾಗಿ ಊರಿನ ಸಮಾಜ ಬಾಂಧವರ ಸಹಕಾರವು ನಮಗೆ ದೊರಕಿದ್ದು, ಇದೇ ರೀತಿ ಎಲ್ಲರೂ ಒಂದೇ ಕುಟುಂಬದಂತೆ ಸಮಾಜವನ್ನು ಮುನ್ನಡೆಸೋಣ ಎಂದು ಕರೆನೀಡಿದರು.

ದೇವಾಡಿಗ ಸಂಘ, ಮುಂಬಯಿ, ಮಾಜಿ ಅಧ್ಯಕ್ಷ ಎಚ್. ಮೋಹನ್ ದಾಸ್, ಮಾತನಾಡಿ ಕುಲಾಲ ಸಮಾಜ ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದು ದೊಡ್ಡ ಸಮಾಜದವರ ಸಾಲಿಗೆ ಸೇರಿದ್ದು ಕುಲಾಲ ಸಮಾಜದವರಿಂದ ಇಂತಹ ಭವನವು ದೇಶದ ವಿವಿಧ ಜಾಗಗಳಲ್ಲಿ ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡುತ್ತಾ ದೊಡ್ಡ ಮಟ್ಟದಲ್ಲಿರುವ ಕುಲಾಲ ಸಮಾಜ ತಮ್ಮ ಮೂಲ ಬೇರನ್ನು ಮರೆತಿಲ್ಲ. ಮಣ್ಣಿನಿಂದಲೇ ಬದುಕನ್ನು ರೂಪಿಸಿದ ಕುಲಾಲ ಸಮಾಜದಿಂದ ಕುಲಾಲ ಭವನ ಎದ್ದು ನಿಂತಿದೆ. ಈ ಭವನಕ್ಕೆ ಎಷ್ಟು ಮೊತ್ತ ನೀಡಿದರು ಅದು ಸಮಾಜಕ್ಕೆ ನೀಡಿದ ಕೊಡುಗೆ. ಪಿ. ಕೆ. ಸಾಲ್ಯಾನ್ ಅವರು ಎಲ್ಲಾ ತುಳು ಕನ್ನಡಿಗರಿಗೆ ಬೇಕಾದವರು, ಅವರ ಕೊಡುಗೆ ಈ ಸಮಾಜಕ್ಕೆ ಅಪಾರ ಎಂದರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಉಪಾಧ್ಯಕ್ಷ ಅಶೋಕ್ ಸುವರ್ಣ ಮಾತನಾಡಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಪರವಾಗಿ ಕುಲಾಲ ಸಮಾಜಕ್ಕೆ ಅಬಿನಂದನೆ ಸಲ್ಲಿಸುತ್ತಾ ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಪಿ. ಕೆ. ಸಾಲ್ಯಾನ್ ಇವರ ಕೊಡುಗೆಯನ್ನು ಸ್ಮರಿಸುತ್ತಾ ಅವರ ಹಾದಿಯಲ್ಲೇ ಮುಂದುವರಿಯುತ್ತಿರುವ ಸಮಾಜ ಬಾಂಧವರ ಕಾರ್ಯವನ್ನು ಸ್ಲಾಗಿಸಿದರು.
ವೇದಿಕೆಯಲ್ಲಿ ರವಿ ದೇವಾಡಿಗ, ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ, ಡಾ. ಎಂ. ಅಣ್ಣಯ್ಯ ಕುಲಾಲ್ ಉಲ್ತೂರು, ಅಧ್ಯಕ್ಷರು, ಅಖಿಲ ಭಾರತ ಕುಂಭಾರರ ಮಹಾಸಂಘ, ಮನೋಜ್ ಹೆಗ್ಡೆ, ಅಧ್ಯಕ್ಷರು, ಹೆಗ್ಗಡೆ ಸೇವಾ ಸಂಘ, ಮುಂಬಯಿ, ಸುಂದರ್ ಕುಲಾಲ್ ಶಕ್ತಿನಗರ, ಆಡಳಿತ ಟ್ರಷ್ಟಿ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್, ಕುಲಶೇಖರ, ಮಂಗಳೂರು, ದಾಮೋದರ ಎ., ಅಧ್ಯಕ್ಷರು, ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋಧಾರ ಸಮಿತಿ, ಕುಲಶೇಖರ, ಮಂಗಳೂರು, ಬಿ. ಪ್ರೇಮಾನಂದ ಕುಲಾಲ್, ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್, ಕುಲಶೇಖರ, ಮಂಗಳೂರು, ಸಂಜೀವ ಎನ್. ಶೆಟ್ಟಿ, ಹೋಟೆಲ್ ಅಶ್ವಿತ್, ಸಿಬಿಡಿ ಬೆಲಾಪುರ, ನವಿ ಮುಂಬಯಿ, ಭಾಸ್ಕರ ಕುತ್ತಾರ್, ಅಧ್ಯಕ್ಷರು, ಕುಲಾಲ ಸಂಘ ಕೊಲ್ಯ, ಎನ್.ಜಿ. ಮೂಲ್ಯ, ಮಾಜಿ ಅಧ್ಯಕ್ಷರು, ಜ್ಯೋತಿ ಸಹಕಾರಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ಮುಂಬಯಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಟ್ಟಡ ಸಮಿತಿಯ ಅಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಬಂಟ್ವಾಳ, ಇವರು ದಿಕ್ಸೂಚಿ ಬಾಷಣ ಮಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಲ. ಅನಿಲ್ ದಾಸ್, ಚಲನ ಚಿತ್ರ ನಟ ಅರ್ಜುನ್ ವೇದಾಂತ್, ದಾನಿಗಳಾದ ಕುಲಾಲ ಭವನ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಸುನಿಲ್ ರಾಜು ಸಾಲಿಯಾನ್, ಗಿರೀಶ್ ಬಿ. ಸಾಲಿಯಾನ್, ಜಗದೀಶ್ ಆರ್. ಬಂಜನ್, ಎಸ್.ಆರ್.ಬಂಜನ್, ವಿಶ್ವನಾಥ ಬಂಗೇರ, ಸಾವಿತ್ರಿ ಪಿ. ಕೆ.ಸಾಲಿಯಾನ್, ಡಾ, ಸುರೇಖಾ ರತನ್ ಕುಲಾಲ್, ಮಹಾಬಲ ಕೊಟ್ಟಾರಿ ದಂಪತಿ, ವಾಮನ್ ಕರ್ಕೇರ ದಂಪತಿ, ಮಮತಾ ಗುಜರನ್ ದಂಪತಿ, ರಘು ಆರ್ ಮೂಲ್ಯ ಗೋರೆಗಾಂವ್ ದಂಪತಿ, ಎ. ಬಿ. ಸಾಲ್ಯಾನ್, ಎನ್. ಜಿ. ಮೂಲ್ಯ ದಂಪತಿ, ಶ್ರೀನಿವಾಸ್ ಬಿ. ಸಾಲ್ಯಾನ್, ಮಹಾಬಲ ಕೊಟ್ಟಾರಿ, ಸದಾಶಿವ ಕುಲಾಲ್, ಶ್ರೀಮತಿ ಎ ಜಯರಾಮ್, ಭಾಸ್ಕರ ಅತ್ತಾವರ್, ಶೀಧರ ಮೂಲ್ಯ, ಸುರೇಶ್ ಕುಲಾಲ್ ದಂಪತಿ, ನಟೇಶ್ ಕುಮಾರ್ ಬಂಗೇರ ದಂಪತಿ, ಗಣೇಶ್ ಕುಲಾಲ್, ಅಜಯ್ ಮೂಲ್ಯ ದಂಪತಿ, ದಯಾನಂದ ಮತ್ತು ಪ್ರವೀಣ್, ಬಿ. ಪ್ರೇಮಾನಂದ ಕುಲಾಲ್, ಸಂಜಯ್ ರಾಜು ಕುಂದರ್, ಹೇಮಚಂದ್ರ, ಕೃಷ್ಣ ಬಂಗೇರ ದಂಪತಿ, ದಿನೇಶ್ ಕುಲಾಲ್ ದಂಪತಿ, ಅಲ್ಲದೆ ವಿವಿಧ ರೀತಿಯಲ್ಲಿ ಸಹಕರಿಸಿದ ಪ್ರಾಯೋಜಕರು ಮತ್ತು ಇತರ ದಾನಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಕುಲಾಲ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ , ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಗೌ. ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ. ಮೂಲ್ಯ, ಮತ್ತು ಸುನಿಲ್ ಕೆ. ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್. ಸಾಲ್ಯಾನ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಹಾಗೂ ಕಟ್ಟಡ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ , ಉಪಕಾರ್ಯಾಧ್ಯಕ್ಷರುಗಳಾದ ಸುನಿಲ್ ಆರ್. ಸಾಲ್ಯಾನ್, ಜೈರಾಜ್ ಪಿ. ಸಾಲ್ಯಾನ್, ಮಮತಾ ಎಸ್. ಗುಜರಾನ್, ಕಾರ್ಯದರ್ಶಿ ಉಮೇಶ್ ಎಂ. ಬಂಗೇರ, ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ದಿನೇಶ್ ಕುಲಾಲ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಉಪಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡಾ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ, ಎಲ್ಲಾ ಸದಸ್ಯರುಗಳು, ಅಮೂಲ್ಯ ಸಂಪಾದಕರಾದ ಆನಂದ್ ಬಿ. ಮೂಲ್ಯ ಉಪ ಸಂಪಾದಕ ಎಲ್. ಆರ್. ಮೂಲ್ಯ, ಉಪ ಸಮಿತಿಗಳು, ಸ್ಥಳೀಯ ಸಮಿತಿಗಳು , ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಂಗಳೂರು ಪರವಾಗಿ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ಅಧ್ಯಕ್ಷರಾದ ರಘು ಎ. ಮೂಲ್ಯ, ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ , ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಗೌ. ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ. ಮೂಲ್ಯ, ಮತ್ತು ಸುನಿಲ್ ಕೆ. ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್. ಸಾಲ್ಯಾನ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಹಾಗೂ ಕಟ್ಟಡ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್, ಉಪಕಾರ್ಯಾಧ್ಯಕ್ಷರುಗಳಾದ ಸುನಿಲ್ ಆರ್. ಸಾಲ್ಯಾನ್, ಜೈರಾಜ್ ಪಿ. ಸಾಲ್ಯಾನ್, ಮಮತಾ ಎಸ್. ಗುಜರಾನ್, ಕಾರ್ಯದರ್ಶಿ ಉಮೇಶ್ ಎಂ. ಬಂಗೇರ, ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ದಿನೇಶ್ ಕುಲಾಲ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಉಪಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡಾ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ, ಎಲ್ಲಾ ಸದಸ್ಯರುಗಳು, ಅಮೂಲ್ಯ ಸಂಪಾದಕರಾದ ಆನಂದ್ ಬಿ. ಮೂಲ್ಯ ಉಪ ಸಂಪಾದಕ ಎಲ್. ಆರ್. ಮೂಲ್ಯ, ಉಪ ಸಮಿತಿಗಳು, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳು , ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಂಗಳೂರು ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಭಾಸ್ಕರ ಕುಟ್ಟರ್, ಅಧ್ಯಕ್ಷರು, ಕುಲಾಲ ಸಂಘ ಕೊಲ್ಯ, ಎನ್.ಜಿ. ಮೂಲ್ಯ, ಮಾಜಿ ಅಧ್ಯಕ್ಷರು, ಜ್ಯೋತಿ ಸಹಕಾರಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ಮುಂಬಯಿ, ಕೆ. ಗೋವಿಂದ ಬಂಗೇರ, ಪಿ. ಶೇಖರ್ ಮೂಲ್ಯ, ಆನಂದ ಬಿ. ಮೂಲ್ಯ, ನ್ಯಾ. ಉಮನಾಥ್ ಕೆ. ಮೂಲ್ಯ, ಎಲ್. ಆರ್. ಮೂಲ್ಯ, ಉಮೇಶ್ ಎಂ. ಬಂಗೇರ, ಆನಂದ ಕೆ. ಕುಲಾಲ್, ಸಂಜೀವ ಎನ್. ಬಂಗೇರ, ಸುಂದರ್ ಎನ್. ಮೂಲ್ಯ, ವೇಣುಗೋಪಾಲ ಡಿ. ಕರ್ಕೆರ, ರಘು ಆರ್. ಮೂಲ್ಯ, ಸುಕುಮಾರ ಎಸ್. ಸಾಲ್ಯಾನ್, ಹರಿಯಪ್ಪ ಕೆ. ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು.
ಮನೋರಂಜನೆಯ ಅಂಗವಾಗಿ ಡಾ. ದೇವದಾಸ್ ಕಾಪಿಕಾಡ್ ರವರ “ಏರ್ಲ ಗ್ಯಾರಂಟಿ ಅತ್” ತುಳು ನಾಟಕ ಪ್ರದರ್ಶನ ನಡೆಯಿತು. ಲಕ್ಷಣ್ ಸಿ ಮೂಲ್ಯ ದನ್ಯವಾದವಿತ್ತರು.




