34 C
Mumbai
March 6, 2026
Mumbai News Kannada
ಸುದ್ದಿ

ಉಡುಪಿ : ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ : ಕಡೆಗಣನೆ ಆರೋಪಗಳನ್ನು ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್





ನವಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿ ಅವರು ಪ್ರಮೋದ್​​ ಮಧ್ವರಾಜ್​ ಕೊಡುಗೆ ನೀಡಿದ್ದ ಕನಕನ ಕಿಂಡಿಯ ಸ್ವರ್ಣ ಕವಚವನ್ನು ಉದ್ಘಾಟಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಮಾಜಿ ಸಚಿವರಿಗೆ ಆಹ್ವಾನ ಇರಲಿಲ್ಲ. ಇದೇ ವಿಚಾರವೀಗ ರಾಜಕೀಯವಾಗಿ ಒಂದಿಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಕೊಡುಗೆ ನೀಡಿದ್ದು ಬಿಜೆಪಿ ಮುಖಂಡರೇ ಆದರೂ ಅವರನ್ನು ಸೈಡ್​​ಲೈನ್​ ಮಾಡಲಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಆರಂಭವಾಗಿರು ಕಾರಣ ಪ್ರಮೋದ್​​ ಮಧ್ವರಾಜ್​​ ಅವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.

ಜಿಲ್ಲಾ ಬಿಜೆಪಿ ನಾಯಕರು ಪ್ರಮೋದ್​​ ಮಧ್ವರಾಜ್​​ ಅವರ ಜೊತೆಯಾಗಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಎಲ್ಲ ಊಹಾಪೋಹಗಳಿಗೂ ಮಾಜಿ ಸಚಿವರು ಉತ್ತರಿಸಿದ್ದಾರೆ.ತಮ್ಮ ಹಿಂದಿನ ಹೇಳಿಕೆಗಳಲ್ಲಿ ಅಸಮಾಧಾನದ ಭಾವನೆ ಇರಲಿಲ್ಲ. ನನ್ನ ಸೇವೆಯನ್ನು ಪ್ರಧಾನಿ ಉದ್ಘಾಟಿಸಿರುವುದು ನನಗೆ ಅಪಾರ ಸಂತೋಷ ಎಂದು ಅವರು ಪುನರುಚ್ಛರಿಸಿದ್ದಾರೆ. ಮಠದವರಾಗಲಿ, ಜಿಲ್ಲಾ ಬಿಜೆಪಿ ನಾಯಕರಾಗಲಿ ಯಾರೂ ಕೂಡ ನನ್ನ ಕಡೆಗಣಿಸಿದ್ದಾರೆ ಎನಿಸುತ್ತಿಲ್ಲ. ಅದನ್ನು ಹುಡುಕುವ ಪ್ರಯತ್ನವನ್ನೂ ನಾನು ಮಾಡಿಲ್ಲ ಎಂದಿದ್ದಾರೆ. ಕನಕನ ಕಿಂಡಿಗೆ ಸ್ವರ್ಣ ಕವಚ ದಾನ ಮಾಡಿದ ವ್ಯಕ್ತಿಯಾಗಿ ಪ್ರಧಾನಿಯ ಉದ್ಘಾಟನಾ ಕ್ಷಣವನ್ನು ಸ್ಥಳದಲ್ಲೇ ನಿಂತು ವೀಕ್ಷಿಸುವ ಆಸೆ ಇದ್ದರೂ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡವರಿಗೆ ಧನ್ಯವಾದ ತಿಳಿಸೋದಾಗಿಯೂ ಅವರು ಹೇಳಿದ್ದಾರೆ.

ಇನ್ನು ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಮಠ ಮತ್ತು ನಮ್ಮಿಂದ ಕಳುಹಿಸಿದ ಅತಿಥಿಗಳ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು  ಸೇರಿಸಲಾಗಿತ್ತು. ಆದರೆ ಪ್ರಧಾನಿಯ ಕಚೇರಿಯಿಂದ ಪರಿಷ್ಕೃತ ಪಟ್ಟಿಯನ್ನು ಕಳುಹಿಸಿದಾಗ ಅವರು ಸೇರಿದಂತೆ ಹಲವು ಹೆಸರುಗಳು ಇರಲಿಲ್ಲ. ಇದರಲ್ಲಿ ಜಿಲ್ಲಾ ಬಿಜೆಪಿ ಯಾವುದೇ ರೀತಿಯಲ್ಲೂ ಪಾತ್ರವಹಿಸಿಲ್ಲ. ಪ್ರಮೋದ್​​ ಮಧ್ವರಾಜ್ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಲು–ಸಕ್ಕರೆ ಬೆರೆತಂತೆ ಬಿಜೆಪಿ ಮತ್ತು ಪ್ರಮೋದ್ ಮಧ್ವರಾಜ್ ಒಟ್ಟಿಗಿದ್ದೇವೆ ಎಂದು ನುಡಿದ್ದಿದ್ದಾರೆ.



Related posts

ನವಿ ಮುಂಬೈ – ಪ್ರಮುಖ ಪೈಪ್ ಲೈನ್ ಕಾಮಗಾರಿಗಾಗಿ ಜುಲೈ 18 – 19ರಂದು 18 ಗಂಟೆಗಳ ಕಾಲ ನೀರು ಸರಬರಾಜು ಕಡಿತ

Mumbai News Desk

ಹೆಜಮಾಡಿ : ಸಾವಿತ್ರಿ ಡಿ ಸಾಲ್ಯಾನ್ ನಿಧನ

Mumbai News Desk

2018 ರ ರೆಮೋ ಡಿಸೋಜಾ ಸುಲಿಗೆ ಪ್ರಕರಣದ ಗ್ಯಾಂಗ್ ಸ್ಟರ್ ರವಿ ಪೂಜಾರಿ ಬಂಧನ

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.

Mumbai News Desk

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk

ಧರ್ಮಸ್ಥಳ : ಸಾಮೂಹಿಕ ಅಂತ್ಯಕ್ರಿಯೆಗಳ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಕ್ಷೇತ್ರದ ಆರೋಪಗಳು ಆಧಾರರಹಿತ, ಎಸ್‌ಐಟಿಗೆ ಸ್ವಾಗತ: ವೀರೇಂದ್ರ ಹೆಗ್ಗಡೆ

Mumbai News Desk