ಮುಂಬಯಿ: ಡಿ. 14 – ದಂತ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿ (ಎಂ.ಡಿ.ಎಸ್.) ಪರೀಕ್ಷೆಯಲ್ಲಿ ದಂತ ವೈದ್ಯೆ ಡಾ. ಪ್ರಾಜ್ಞಾ ಸಾಲ್ಯಾನ್ ಅವರು ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಮುಂಬಯಿಯ ಪ್ರತಿಷ್ಠಿತ ಸರ್ಕಾರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ (GDC&H) ಯಲ್ಲಿ ‘ಪ್ರೊಸ್ತೋಡೊಂಟಿಕ್ಸ್’ (Prosthodontics) ವಿಷಯದಲ್ಲಿ ಡಾ. ಪ್ರಾಜ್ಞಾ ಅವರು ದ್ವಿತೀಯ ರ‍್ಯಾಂಕ್ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಅಲ್ಲದೆ, ಮಹಾರಾಷ್ಟ್ರ ರಾಜ್ಯದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾದ ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (MUHS) ನಡೆಸಿದ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಇವರು ನಾಲ್ಕನೇ ರ‍್ಯಾಂಕ್ ಗಳಿಸುವ ಮೂಲಕ ತಮ್ಮ ಶೈಕ್ಷಣಿಕ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಡಾ. ಪ್ರಾಜ್ಞಾ ಸಾಲ್ಯಾನ್ ಅವರು ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನೆಲೆಸಿರುವ ಉದ್ಯಮಿ ಶ್ರೀ ರಾಮನಾಥ್ ಸಾಲ್ಯಾನ್ ಮತ್ತು ಶ್ರೀಮತಿ ನಿರ್ಮಲಾ ಆರ್. ಸಾಲ್ಯಾನ್ ದಂಪತಿಯ ಸುಪುತ್ರಿ. ಈ ಉನ್ನತ ಸಾಧನೆಗಾಗಿ ಅವರಿಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.




