ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ, ಜನಾನುರಾಗಿಯಾಗಿದ್ದು, ತನ್ನ ನಿಸ್ವಾರ್ಥ ಸೇವೆಯಿಂದ ಅಪಾರ ಜನಪ್ರೀತಿಗಳಿಸಿರುವ, ಹಿರಿಯ Cardiologist ಡಾ. ಸದಾನಂದ ಶೆಟ್ಟಿಯವರು ಈ ಕ್ಷೇತ್ರದಲ್ಲಿ ಪರಿಪಕ್ವ ಅನುಭವವುಳ್ಳ ಹಿರಿಯ ಹೃದ್ರೋಗ ತಜ್ಞರು. ತುಳು-ಕನ್ನಡಿಗರ ಹೆಮ್ಮೆಯ, ತುಳುನಾಡ ಮಣ್ಣಿನ ಮಗನಾದ ಅವರಿಗೆ ಕಲಾ ಜಗತ್ತು ಸಂಸ್ಥೆಯ ರೂವಾರಿ ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ. ಸದಾನಂದ ಶೆಟ್ಟಿ ಅಭಿಮಾನಿ ಬಳಗ ಮುಂಬಯಿ ಇವರ ಸಹಯೋಗದಲ್ಲಿ ತಾರೀಕು 18-12.2025 ಗುರುವಾರ ಮಧ್ಯಾಹ್ನ 4:00 ಗಂಟೆಗೆ ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ನಾಟ್ಯಗೃಹ ಮೀರಾ ರೋಡ್( ಪೂ) ಇಲ್ಲಿ ಒಂದು ಅದ್ಭುತ ಸಂಯೋಜನೆಯ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಡಾ. ಸದಾನಂದ ಶೆಟ್ಟಿಯವರು ಮುಂಬಯಿಯ NKES ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಬಹು ಬೇಡಿಕೆಯ, ಪ್ರತಿಷ್ಠಿತ ಹೃದ್ರೋಗ ತಜ್ಞರಾಗಿ ಬೆಳೆದು ಬಂದಿರುವುದು ಅಲ್ಲದೆ ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತ, ವೃತ್ತಿಯ ಜೊತೆಗೆ ಸಂಘ ಸಂಸ್ಥೆಗಳಲ್ಲೂ ತಮ್ಮ ಯೋಗದಾನವನ್ನು ನೀಡುತ್ತಾ ಬಂದಿರುವುದು ಇತರರಿಗೆ ಆದರ್ಶಪ್ರಾಯವಾದುದು.
ಇವರು ವೈದ್ಯಕೀಯ ಕ್ಷೇತ್ರದಲ್ಲಿ D.M ( Card),MD,( Med.), FACC, FSCAI,FCPS, FACA, FISE, FICC, FICP, FCSI ಪದವಿಗಳನ್ನು ಪಡೆದಿದ್ದು ಬಹುಭಾಷಾ ಬಹು ಸಂಸ್ಕೃತಿಯ ಈ ಮರಾಠಿ ಮಣ್ಣಿನಲ್ಲಿ ಜನಾನುರಾಗಿಯಾಗಿ ಬೆಳೆದು ಬಂದಿರುವುದು ಶ್ರದ್ಧೆ ಮತ್ತು ಆಸಕ್ತಿಯಿಂದ.
ಮುಂಬಯಿಯ ವೆಬ್ ಮೀಡಿಯಾ ಔಟ್ ಲುಕ್ ಪ್ರಸ್ತುತಿಯ ಬೆಸ್ಟ್ ಡಾಕ್ಟರ್ ಮುಂಬಯಿ ಗೌರವಕ್ಕೆ ಹಲವು ವರ್ಷಗಳಿಂದ
ಪಾತ್ರರಾಗುತ್ತಾ ಬಂದಿರುವುದು ತುಳು- ಕನ್ನಡಿಗರಿಗೆ ಅಭಿಮಾನದ ಸಂಗತಿಯಾಗಿದೆ.
ಮೇರು ಹೃದ್ರೋಗ ತಜ್ಞರಾದ ಇವರು ಮುಂಬಯಿಯ ಹೃದಯ ಭಾಗವಾದ ಸಯಾನ್ ನಲ್ಲಿರುವ ಸದಾನಂದ ಹೆಲ್ದಿ ಲಿವಿಂಗ್ ಸೆಂಟರ್ ಇದರ ಸಂಸ್ಥಾಪಕರಲ್ಲದೆ ಆಡಳಿತ ನಿರ್ದೇಶಕರಾಗಿಯೂ
ಜನಸೇವಾ ಕಾರ್ಯ ಕೈಗೊಂಡಿದ್ದಾರೆ. ಇದಲ್ಲದೆ ಡಾ. ಡಿ.ವೈ ಪಾಟೀಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್, ನವಿ ಮುಂಬಯಿ, ಇದರ ವಿಶ್ರಾಂತ ಪ್ರಾಚಾರ್ಯರಾಗಿ, ಸೋಮಯ್ಯ ಸೂಪರ್ ಸ್ಪೆಷಾಲಿಟಿ ಇನ್ಸ್ಟಿಟ್ಯೂಟ್ ಮುಂಬಯಿ ಇದರ ಹೃದ್ರೋಗ ವಿಭಾಗದ ನಿರ್ದೇಶಕರಾಗಿದ್ದಾರೆ. ಸಿವಿಡಿ ಇಂಡಿಯಾ ಆ್ಯಂಡ್ ಸಿಸಿಎ ಇಂಟರ್ ನ್ಯಾಷನಲ್ ಇದರ ಸಂಸ್ಥಾಪಕರಾಗಿ, ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಅಧ್ಯಕ್ಷರಾಗಿ, ಸಲಹೆಗಾರರಾಗಿ, ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ ಇದರ ರಾಷ್ಟ್ರೀಯ ಸಲಹೆಗಾರರಾಗಿ, ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಆ್ಯಂಡ್ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಇದರ ಸದಸ್ಯರಾಗಿ, ಸದಾನಂದ ಜಿ2 ಎಸ್2 ಫೌಂಡೇಶನ್ ಇದರ ಸಂಸ್ಥಾಪಕರಾಗಿದ್ದು, ಕಾರ್ಡಿಯಾಲಜಿ ಬುಕ್ 2020ರಲ್ಲಿ ಕ್ಲಿನಿಕಲ್ ಪ್ರಕರಣಗಳ ಹೊತ್ತಗೆಯ ಸಂಪಾದಕರಾಗಿ ಸೇವಾ ನಿರತರಾಗಿದ್ದಾರೆ. ಮುಂಬಯಿಯ ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ನ ಸಂಚಾಲಕರಾಗಿಯೂ ಸೇವಾ ಕಾರ್ಯನಿರತರಾಗಿದ್ದಾರೆ.
ಕನ್ನಡ ಸಂಘ ಸಯನ್ ಇದರ ಸಲಹೆಗಾರರಾಗಿದ್ದು, ಬೃಹತ್ ವೈದ್ಯಕೀಯ ಶಿಬಿರವನ್ನು ನಡೆಸಿದ ಕೀರ್ತಿ ಇವರ ಪಾಲಿಗಿದೆ.
ಮೂಲತ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕು ಮೂಲ್ಕಿ, ಅತಿಕಾರಿಬೆಟ್ಟು ದೆಪ್ಪಣಿಗುತ್ತು ಪ್ರತಿಷ್ಠಿತ ಮನೆತನದವರಾದ
ಇವರ ಎಲ್ಲಾ ಸೇವಾ ಕಾರ್ಯಗಳಿಗೆ ಇನ್ನಷ್ಟು ಪ್ರಶಸ್ತಿಗಳು ಹಾಗೂ ಮಾನ್ಯತೆಗಳು ಲಭಿಸಲೆಂದು ಸರ್ವ ತುಳು- ಕನ್ನಡಿಗರ ವತಿಯಿಂದ ಶುಭಕೋರುವೆ.
ಅಭಿನಂದನಾ ಸಮಾರಂಭದ ಬಳಿಕ ರಂಗಭೂಮಿಯಲ್ಲಿ ಲಿಮ್ಕಾ ಬುಕ್ ರಾಷ್ಟ್ರೀಯ ದಾಖಲೆ ಮಾಡಿರುವ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರ ನಿರ್ದೇಶನದ “ಸಂತ ಚೋಖಾ ಮೇಳ” ಕನ್ನಡ ಸಂಗೀತ ನಾಟಕದ ರಂಗ ಪ್ರದರ್ಶನವಿದೆ.
ಈ ನಾಟಕದ ಮೂಲ ಮರಾಠಿ ಲೇಖಕರು ಬಾಲಯೋಗಿ ಸದಾನಂದ ಮಹಾರಾಜ್ ಹಾಗೂ ಕನ್ನಡಕ್ಕೆ ಡಾ. ಜಿ. ಪಿ. ಕುಸುಮ್ ಭಾಷಾಂತರಗೊಳಿಸಿದ್ದಾರೆ.




