32 C
Mumbai
March 7, 2026
Mumbai News Kannada
ಕ್ರೀಡೆ

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ





ಮುಂಬಯಿ : ಬಿಲ್ಲವರ ಅಸೋಶಿಯೇಶನ್ ಇದರ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವವು ದಿನಾಂಕ 14 ಡಿಶಂಬರ್ 2025 ರವಿವಾರದಂದು ಪ್ರಭಾತ್ ಕಾಲೋನಿಯ ಮುನ್ಸಿಫಲ್ ಶಾಲಾ ಮೈದಾನದಲ್ಲಿ ನಡೆಯಿತು.ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವದ ಕಾರ್ಯಕ್ರಮವು ಬಿಲ್ಲವರ ಅಸೋಶಿಯೇಶನ್ ಇದರ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷ ಶ್ರೀ ರವಿ ಸನಿಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಅವರು ಕ್ರೀಡಾ ಮಹೋತ್ಸವದ ನೇತೃತ್ವ ವಹಿಸಿದ ಮಾತನಾಡುತ್ತ ಸದೃಢವಾದ ದೇಹದಲ್ಲಿ ದೃಢ ಮನಸ್ಸು ಮತ್ತು ದೃಢತೆಯ ಪ್ರವೃತ್ತಿ ಹೊರ ಹೊಮ್ಮತ್ತದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯು ವಿದ್ಯಾರ್ಥಿಗಳ ಉತ್ತಮ ದೈಹಿಕ ಬೆಳವಣಿಗೆಯನ್ನು ಖಚಿತ ಪಡಿಸುತ್ತದೆ. ಕ್ರೀಡೆಗಳಲ್ಲಿ ಸೋಲು -ಗೆಲವು ಒಂದು ನಾಣ್ಯದ ಎರಡು ಮುಖವಿದ್ದಂತೆ.ಅವುಗಳೆರಡು ಸಮಾನ ವಾಗಿ ಸ್ವೀಕರಿಸಬೇಕು.ಇಲ್ಲಿ ಸೋಲು ಗೆಲವು ಮುಖ್ಯವಲ್ಲ. ಆದರೆ ಭಾಗ ವಹಿಸುವುದು ಮುಖ್ಯ.ಪ್ರತಿಯೊಂದು ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದರಿಂದ ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ. ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಾ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾತೃ ಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿ ಹರೀಶ ಜಿ ಸಾಲಿಯಾನ್ ಅವರು ಉಪಸ್ಥಿತಿದ್ದು ತೆಂಗಿನ ಕಾಯಿ ಒಡೆದು ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡುತ್ತಾ ಅವರು ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿ
ರುವುದು ನನಗೆ ಸಂತೋಷವೆನಿಸುತ್ತದೆ.ಮಾಸುಮ ಸಂಸ್ಥೆಯವರು ಆಯೋಜಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಡಾಜ್ ಬಾಲ್ ಕ್ರೀಡೆಯಲ್ಲಿ ನಮ್ಮ ರಾತ್ರಿ ಶಾಲೆಯ ವಿದ್ಯಾರ್ಥಿನಿಯ
ರು ದ್ವಿತೀಯ ಸ್ಥಾನ ಪಡೆದು ಸಂಸ್ಥೆ ಮತ್ತು ಶಾಲೆಗೆ ಕೀರ್ತಿ ತಂದಿದ್ದು ಹೆಮ್ಮೆನೆಸುತ್ತದೆ.ರಾತ್ರಿ ಪ್ರೌಢ ಶಾಲೆ
ಯಾದರೂ ಉತ್ತಮವಾದ ಕಾರ್ಯ- ಕಲಾಪಗಳನ್ನು ಜರುಗಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರು
ವುದು ಶಾಲೆಯ ಮುಖ್ಯಾಧ್ಯಾಪಕ ಮತ್ತು ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು.ಮತ್ತು ನಮ್ಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಕೋರುತ್ತಾ ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಮಲ್ಲಿಕಾರ್ಜುನ ಬಡಿಗೇರರು ಶಾಲೆಯ ಕ್ರೀಡಾ ಸಂಭ್ರಮವನ್ನು ಕುರಿತು ಪ್ರಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ಮಾತೃ ಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಇದರ ಪ್ರೋತ್ಸಾಹ ಪ್ರೇರಣೆಯಿಂದಲೇ,ನಮ್ಮರಾತ್ರಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಶಾಲೆಯ ಪ್ರತಿಯೊಂದು ಕಾರ್ಯಕ್ರಮ ಚೆನ್ನಾಗಿ ಮೂಡಿ ಬರಲು ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವ ಮುಖ್ಯವಾದದ್ದು ಎಂದು ಹೇಳಿದರು.

ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವ ಕ್ಕೆ ದೀಪ ಪ್ರಜ್ವಲನೆಗೈದ ಮಾತೃ ಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿಶ್ರೀ ಹರೀಶ ಜಿ ಸಾಲಿಯಾನ್ ಮತ್ತು ಶಾಲಾ ಸಮಿತಿಯ ಕಾರ್ಯಧ್ಯಕ್ಷ ಶ್ರೀ ರವಿ ಸನಿಲ್ ಶಾಲಾ ಸಮಿತಿಯ ಸದಸ್ಯ ಶ್ರೀ,ಚಂದ್ರಹಾಸ್ ಕೋಟ್ಯಾನ್, ಶ್ರೀ ದೇವೇಂದ್ರ ಬಂಗೇರ, ಜಗದೀಶ್ ಅಮೀನ್ ಅವರಿಗೆ ಶಾಲಾ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಡಿಗೇರರು ಪುಷ್ಪ ಗುಚ್ಚ ನೀಡಿ ಸತ್ಕರಿಸಿದರು. ಶಾಲಾ ಕ್ರೀಡಾ ಮಹೋತ್ಸವ ದ ಯಶಸ್ವಿಗೆ ಕಾರಣಿ ಭೂತರಾದ ಮತ್ತು ಊಟದ ವ್ಯವಸ್ಥೆಯನ್ನು ಮಾಡಿದ ಶಾಲಾ ಸಮಿತಿಯ ಸಲಹೆಗಾರ ಶ್ರೀ ಬನ್ನಂಜೆ ರವೀಂದ್ರ ಅಮೀನ್, ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದ ಹಳೆ ವಿದ್ಯಾರ್ಥಿಗಳಾದ ವಾಸು ಗೌಡ, ಸುದರ್ಶನ ಗೌಡ, ರಾಘವೇಂದ್ರ ಗೌಡ, ಅಶೋಕ ಗೌಡ ಮತ್ತು ಶಾಲಾ SMDC ಇದರ ಅಧ್ಯಕ್ಷೆ ತಾಹಿರ ಶೇಖ, ಅವರಿಗೆ ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ. ಐ.ಬಡಿಗೇರರು ಪುಷ್ಪಗುಚ್ಚ ನೀಡಿ ಸತ್ಕರಿಸಿದರು.

ಮಸೂಮ ಸಂಸ್ಥೆಯ ವತಿಯಿಂದ
ಅಂತರ್ ರಾತ್ರಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವದಲ್ಲಿ 66 ರಾತ್ರಿ ಶಾಲೆಯ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.ಈ ಕ್ರೀಡಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಡಾಜ್ ಬಾಲ್ ಆಟದಲ್ಲಿ ಭಾಗ ವಹಿಸಿದ್ದರು.
ವಿದ್ಯಾರ್ಥಿನಿಯರ ವಿಭಾಗದ ಓಟದ ಮೊದಲನೇ ಸುತ್ತಿನಲ್ಲಿ ವಿದ್ಯಾರ್ಥಿನಿ ಚಾಂದನಿ ಚವಾನರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಮತ್ತು ಮಾತೃಸಂಸ್ಥೆಗೆ ಕೀರ್ತಿ ತಂದಿದ್ದಾಳೆ.ಈ ವಿದ್ಯಾರ್ಥಿಬ್ಬರಿಗೂ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವದಲ್ಲಿ ಮಾತೃ ಸಂಸ್ಥೆಯ ಪದಾಧಿಕಾರಿಗಳು ಸತ್ಕರಿಸಿ ಅಭಿನಂದಿಸಿದರು. ಅದರಂತೆ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕ್ರೀಡಾ ಮಹೋತ್ಸವದ ಸ್ವಾಗತಗೈದು ಮಾತನಾಡಿದ ಶಿಕ್ಷಕ ಶ್ರೀ ಸಿದ್ಧರಾಮ ದಸಮಾನೆ ಅವರು ಕ್ರೀಡಾ ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಓಟ್, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ್, ಕೋಕೋ, ಕಬಡ್ಡಿ, ವಾಲಿಬಾಲ್, ಟೆನಿಸ್, ಮುಂತಾದ ಆಟಗಳನ್ನು ನಡೆಸಲು ಆಯೋಜನೆ ಮಾಡಲಾಗುತ್ತದೆ. ಇಂದು ನಡೆದ ಪಂದ್ಯಾವಳಿಯ ಎಲ್ಲಾ ಆಟಗಳಲ್ಲಿ ವಿಜಯಶಾಲಿಗಳಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಬರುವ 10 ಜನೇವರಿ 2026 ರಂದು ನಡೆಯಲಿರುವ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರದಾನ ಮಾಡಿ ಸತ್ಕರಿಸಲಾಗುವುದು. ಎಂದು ವಿದ್ಯಾರ್ಥಿಗಳಿಗೆ ಆಟದ ಮಹತ್ವದ ಕುರಿತು ಹೇಳಿದರು.

ಶಾಲಾ ಕ್ರೀಡಾ ಕೂಟ ಪ್ರಾರಂಭದ ಮೊದಲು ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ಸಂಗೀತಾ ಚವಾನ, ರಾಧಿಕಾ ಭಾವಿಮನಿ, ಪ್ರೀತಿ ರಾಠೋಡ್, ರಾಧಿಕಾ ರಮೇಶವರು ಮಾಡಿದರು.ಯಶಸ್ವಿಯಾಗಿ ನೆರವೇರಲು ಶಿಕ್ಷಕರಾದ ಸಿದ್ಧರಾಮ ದಶಮಾನೆ, ಶಿವಾನಂದ ಪಾಟೀಲ, ಶಿಕ್ಷಕಿಯರಾದ ಹೇಮಾ ಗೌಡ, ವಿಮಲಾ ಪೂಜಾರಿ ಮತ್ತು ಶಿಕ್ಷಕೇತರಾದ ನಮಿತಾ ಸುವರ್ಣ, ಲಕ್ಷ್ಮಣ ಪೂಜಾರಿ ಮತ್ತು ಹಳೆ ವಿದ್ಯಾರ್ಥಿಗಳು ಸಹಕರಿಸಿದರು.ಕೊನೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಈ ಬಡಿಗೇರ ಧನ್ಯವಾದಗೈದರು.



Related posts

ಮುಂಬೈ ಮ್ಯಾರಥಾನ್‌ನಲ್ಲಿ ವೈದ್ಯನ ‘ಗೋಲ್ಡನ್’ ಓಟ: ಆರ್ಥೋಪೆಡಿಕ್ ಸರ್ಜನ್ ಕಾರ್ತಿಕ್ ಕರ್ಕೇರಗೆ ಚಿನ್ನದ ಪದಕ

Mumbai News Desk

ಕಾಂದಿವಲಿ ಪಶ್ಚಿಮದ ರಂಜಿತ್ ಪೂಜಾರಿಗೆ ವಿಶ್ವ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

Mumbai News Desk

ಆದರ್ಶ ವಿದ್ಯಾನಿಕೇತನ ಪ್ರೌಢಶಾಲೆ,ಮೀರಾ ರೋಡ್ ನ,ವಾರ್ಷಿಕ ಕ್ರೀಡಾಕೂಟ,

Mumbai News Desk

ಎನ್ ಕೆ ಇ ಎಸ್ ಪ್ರೊ ಕಬಡ್ಡಿ ಸೀಸನ್ 1 – ಬಹುಮಾನ ವಿತರಣೆ

Chandrahas