ಮುಂಬಯಿ: ಇಲ್ಲಿನ ಮಲಾಡ್ ಪೂರ್ವದ ಕುರಾರ್ ವಿಲೇಜ್ನ ಜಾನ್ ಕಂಪೌಂಡ್ನಲ್ಲಿ ನೆಲೆಸಿರುವ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಜನವರಿ 3ರಂದು ಶನಿವಾರ 30ನೇ ವರ್ಷದ ‘ವಾರ್ಷಿಕ ಅಯ್ಯಪ್ಪ ಮಹಾಪೂಜೆ’ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ, ಶಿಬಿರದ ರಘು ಗುರುಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಗಣಹೋಮ, ಕಲಶ ಸ್ಥಾಪನೆ, ಶರಣುಘೋಷ ಹಾಗೂ ಪಡಿಪೂಜೆ ನೆರವೇರಲಿದೆ. ದೇವಸ್ಥಾನದ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಇರುಮುಡಿ ಕಟ್ಟುವುದು ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ನಡೆಯಲಿದ್ದು, ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಗೌರವಾನ್ವಿತ ಅಧ್ಯಕ್ಷ ಸಂತೋಷ್ ಕೆ. ಪೂಜಾರಿ, ಅಧ್ಯಕ್ಷ ಲಾಲ್ಮನ್ ಯಾದವ್, ಗೌರವ ಕಾರ್ಯದರ್ಶಿ ಉದಯ ಬಿ. ಸಾಲ್ಯಾನ್, ಕೋಶಾಧಿಕಾರಿ ಹರಿಶ್ಚಂದ್ರ ಆಚಾರ್ಯ ಹಾಗೂ ಸದಸ್ಯರಾದ ಉಮೇಶ್ ಅಂಚನ್, ಶೇಖರ್ ಅಮೀನ್, ರಾಜು ಪೂಜಾರಿ, ಚಂದ್ರಕಾಂತ್ ಸಾಲಿಯಾನ್, ಸನತ್ ಪೂಜಾರಿ, ಮನೋಜ್ ಓಜ, ನವೀನ್ ಸಾಲಿಯಾನ್, ಪ್ರಕಾಶ್ ಸಾಲಿಯಾನ್, ಅಕ್ಷಯ ಪೂಜಾರಿ, ಅಮಿತ್ ಪೂಜಾರಿ, ಕೌಶಲ್ ಪೂಜಾರಿ, ಪ್ರಥಮ್ ಪೂಜಾರಿ ಮತ್ತು ಆದಿತ್ಯ ಅಂಚನ್ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಆಶಾ ಆರ್. ಪೂಜಾರಿ, ವಿಜಯಲಕ್ಷ್ಮೀ ಸಾಲಿಯಾನ್, ವೇದಾವತಿ ಸಾಲಿಯಾನ್, ಸುನಂದ ಅಮೀನ್, ಶೋಭಾ ಪೂಜಾರಿ, ರಿನ್ ಯಾದವ್, ಆಶಾ ಅಂಚನ್, ಶಶಿ ಪೂಜಾರಿ, ರತ್ನಾ ಪೂಜಾರಿ, ಕುಸುಮಾ ಬಂಜನ್, ಸುಮತಿ ಆಚಾರ್ಯ, ಯಶೋಧ ಸಾಲ್ಯಾನ್ ಹಾಗೂ ಸುನೀತಾ ಕುಂದರ್ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




