32 C
Mumbai
March 7, 2026
Mumbai News Kannada
ಕ್ರೀಡೆ

ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ – 59ನೇ ಆರ್. ಎನ್. ಉಚ್ಚಿಲ್ ಸ್ಮಾರಕ ಅಥ್ಲೆಟಿಕ್ಸ್ ಕ್ರೀಡಾಕೂಟ





ಮುಂಬಯಿ : ಮಹಾನಗರದ ಜಾತೀಯ ಸಂಘಟನೆಗಳಲ್ಲಿ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿಟ್ಟ ಪ್ರತ್ಯೇಕ ಕ್ರೀಡಾ ಸಂಘಟನೆ ಕರಾವಳಿ ಜಿಲ್ಲೆಗಳ ಮೊಯಾ (ಬೋವಿ) ಸಮಾಜದ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಗೆ 80 ವರ್ಷಗಳಿಕೂ ಮಿಕ್ಕಿದ ಇತಿಹಾಸವಿದೆ. ಈ ಸಂಘಟನೆಯು ಸಮುದಾಯದ ಅನೇಕರನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಚ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. 

ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ 59ನೇ ಆರ್. ಎನ್. ಉಚ್ಚಿಲ್ ಸ್ಮಾರಕ ಅಥ್ಲೆಟಿಕ್ಸ್ ಕ್ರೀಡಾಕೂಟವು ಡಿ. 21 ರಂದು ಚರ್ಚ್‌ಗೇಟ್‌ನ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಮೈದಾನದಲ್ಲಿ ಯಶಸ್ವಿಯಾಗಿ ನಡೆದಿದ್ದು ಹೆಚ್ಚಿನ ಯುವ ಪ್ರತಿಭೆಗಳು ಸೇರಿ 300 ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ನೂರಾರು ಕ್ರೀಡಾಭಿಮಾನಿಗಳು ಬಾಗವಹಿಸಿದ್ದರು. 

ಹಿರಿಯರಾದ ಕೆ. ಕೆ. ಬಟ್ಟಪಾಡಿ ಯವರು ನಾರಾಯಣ ಬಿ. ಉದ್ಯಾವರ್  ಅವರೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು. ಇತ್ತೀಚೆಗೆ ನಿಧನರಾದ ಸುರೇಂದ್ರ ಬಿ. ಉಚ್ಚಿಲ್ ಅವರಿಗೆ ಸಂತಾಪ ಸೂಚಿಸಲಾಯಿತು. 

ಸಮಾಜದ ಹಿರಿ ಕಿರಿಯರಿಗೆ ಮನರಂಜನಾ ಸ್ಪರ್ಧೆಗಳು, ಜಾವೆಲಿನ್ ಥ್ರೋ, ಲಾಂಗ್ ಜಂಪ್, ಶಾಟ್‌ಪುಟ್ ಹಾಗೂ 200 ಮತ್ತು 400 ಮೀಟರ್ ವಾಕ್ ಸ್ಪರ್ಧೆಗಳು,  ಅಂತರ-ಕುಟುಂಭ ರಿಲೇ ರೇಸ್‌, ಸೈಕಲ್ ಟಯರ್ ಉರುಳಿಸುವ ಸ್ಪರ್ಧೆ, ನಿಂಬೆ-ಚಮಚ ರೇಸ್,  ತಲೆಯ ಮೇಲೆ ತಟ್ಟೆ ಸಮತೋಲನ ಸ್ಪರ್ಧೆಗಳು, ಟಗ್ ಆಫ್ ವಾರ್‌ ಹಾಗೂ ಇನ್ನಿತರ ಹೊರಾಂಗಣ ಕ್ರೀಡೆ ನಡೆಯಿತು.

ರಾಜ್ಯ ಮಟ್ಟದ ಫುಟ್ಬಾಲ್ ಗೋಲ್‌ಕೀಪರ್ ಆಯಾನ್ ಮಂಗೇಶ್ ಸೋಮೇಶ್ವರ ಮತ್ತು ರಾಷ್ಟ್ರಮಟ್ಟದಲ್ಲಿ  ಮಹಾರಾಷ್ಟ್ರವನ್ನು ಪ್ರತಿನಿಧಿಕರಿಸಲಿರುವ ಕವಿನ್ ಪ್ರದೀಪ್ ಉದ್ಯಾವರ್ ಅವರನ್ನು ನಾರಾಯಣ ಬಿ. ಉದ್ಯಾವರ್ ವಿಶೇಷವಾಗಿ ಗೌರವಿಸಿ ಅಭಿನಂದಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಸೇವೆ ಮಾಡುತ್ತಾ ಬಂದಿರುವ ಮುಂಬಯಿಯ ಪತ್ರಕರ್ತರಾದ ಈಶ್ವರ ಎಂ. ಐಲ್ ಮತ್ತು ಸುಭಾಷ್ ಶಿರಿಯಾ ಇವರನ್ನು  ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಪರವಾಗಿ ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರು ಇತರ ಗಣ್ಯರೊಂದಿಗೆ ಸನ್ಮಾನಿಸಿದರು.  

ಪುರುಷರ ಅಂತರ-ಕುಟುಂಭ ಟಗ್ ಆಫ್ ವಾರ್‌ನಲ್ಲಿ ಉಳ್ಳಾಡ್ಮೊಯಾರ್ ಕುಟುಂಭ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ಮಹಿಳೆಯರಲ್ಲಿ ಸೆಂಟ್ರಲ್ ತಂಡ ಮತ್ತು ಫುಟ್ಬಾಲ್ ಪಂದ್ಯದಲ್ಲಿ ವೆಸ್ಟರ್ನ್ ತಂಡವು ಸೆಂಟ್ರಲ್ ಜಯಬೇರಿ ಗಳಿಸಿದೆ.

ಅಂತರ-ಕುಟುಂಭ ರಿಲೇ ರೇಸ್ ನಲ್ಲಿ  ಬಾಯೇಕರೆಮೊಯಾರ್ ಪ್ರಥಮ ಸ್ಥಾನ ಗಳಿಸಿದ್ದು 

ಏರೊಡಿಮೊಯಾರ್ ರನ್ನರ್-ಅಪ್ ಗಳಿಸಿದೆ. ಫೈನಲ್ ನಲ್ಲಿ ಉಳ್ಳಾಡ್ಮೊಯಾರ್ ಪ್ರಥಮ ಸ್ಥಾನ ಗಳಿಸಿದೆ. ಕರ್ಪಟ್ಕಿರಿಯಮೊಯಾರ್ ಕುಟುಂಭ 2025ರ ಚಾಂಪಿಯನ್ ಆಗಿ ಗುರುತಿಸಲ್ಪಟ್ಟಿದೆ. ಶ್ರೀಮತಿ ಸಂದ್ಯಾ ಎಸ್ ಐಲ್ ಕುಟುಂಬದ ಪರವಾಗಿ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಚಂದ್ರಕಾಂತ್ ಎಸ್ ಉಚ್ಚಿಲ್ ಇವರಿಂದ ಟ್ರೋಪಿ ಪಡೆದರು.

ಪವನ್ ವೆಂಕಟ್ರಮಣ ವಿಟ್ಠಲ್ ಸ್ಮಾರಕ ಟ್ರೋಫಿ – 9 ವರ್ಷಗಳೊಳಗಿನ ಚಾಂಪಿಯನ್ (ಬಾಲಕಿ) ಗಾರ್ಗಿ ಕಾಸರಗೋಡ್ (ಬಾಲಕ) ಯಶಿಲ್ ಡಿ. ಉದ್ಯಾವರ್, ವಸಂತ್ ಉಚ್ಚಿಲ್ ಸ್ಮಾರಕ ಟ್ರೋಫಿ – 15 ವರ್ಷಗಳೊಳಗಿನ ಚಾಂಪಿಯನ್ ಬಾಲಕಿ: ಆರಿಯಾ ಆರ್. ಉಚ್ಚಿಲ್  ಆನಂದ್ ಅಂಬು ಉದ್ಯಾವರ್ ಸ್ಮಾರಕ ಟ್ರೋಫಿ – ಚಾಂಪಿಯನ್ ಬಾಲಕ (18–25): ಕವಿನ್ ಪಿ. ಉದ್ಯಾವರ್  ಆರ್. ಎನ್. ಉಚ್ಚಿಲ್ ಸ್ಮಾರಕ ಟ್ರೋಫಿ – ವರ್ಷದ ಅತ್ಯುತ್ತಮ ಕ್ರೀಡಾಪಟು: ಆರ್ಯನ್ ಡಿ. ಉದ್ಯಾವರ್ ಗಳಿಸಿದ್ದಾರೆ. 

ಬಹುಮಾನಗಳು ಮತ್ತು ಪ್ರಮಾಣಪತ್ರಗಳನ್ನು ವೈಯಂಬಿಎ ಯ ನಿಕಟಪೂರ್ವ ಅಧ್ಯಕ್ಷ 

ಯಶವಂತ ಎ. ಕುಂದ್ರಿಕಾಡ್,  ಅಧ್ಯಕ್ಷ ಹರಿಶ್ ಉದ್ಯಾವರ್, ಪ್ರಮೋದ್ ಎಸ್. ಉಚ್ಚಿಲ್,  ಚಂದ್ರಕಾಂತ್ ಎಸ್. ಉಚ್ಚಿಲ್,  ಕೆ. ಕೆ. ಬಟ್ಟಪಾಡಿ, ಉದಯ್ ಐಲ್,  ಶೈಲರಾಜ್ ಎಸ್. ಉಚ್ಚಿಲ್, ಶ್ರೀಮತಿ ಶಕುಂತಲಾ ಎಸ್. ಉಚ್ಚಿಲ್,  ರಾಜಾ ಆರ್. ಉಚ್ಚಿಲ್,  ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಕೋಶಾಧಿಕಾರಿ ನಿರಂಜನ್ ಉಚ್ಚಿಲ್ ಮತ್ತು ಪ್ರಧಾನ ಕಾರ್ಯದರ್ಶಿ ದರ್ಶನ ಬಟ್ಟಪಾಡಿ ವಿತರಿಸಿದರು. ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಸತೀಶ್ ಎನ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಗುರುದತ್ ಎಸ್ ಉಚ್ಚಿಲ್, ಸಮಿತಿಯ ಸದಸ್ಯರಾದ ಶೈಲ್ ರಾಜ್ ಎಸ್ ಉಚ್ಚಿಲ್, ನಿತಿನ್ ಎಸ್ ಉಚ್ಚಿಲ್, ನಾರಾಯಣ ಉದ್ಯಾವರ್, ಸುರೇಂದ್ರ ಎನ್. ಉಚ್ಚಿಲ್, ದಿಶಾ ಜೆ ಉಚ್ಚಿಲ್, ಉದಯ ಕೆ ಐಲ್, ಆಶೋಕ್ ಕೆ ಉಚ್ಚಿಲ್, ಪ್ರಫ಼ುಲ್ ಜಿ ಉಚ್ಚಿಲ್, ಸಿ. ಕೆ. ಉದ್ಯಾವರ್, ಜಯಂತ್ ಎಸ್ ಉಚ್ಚಿಲ್, ಪ್ರಮೋದ್ ಎಸ್ ಉಚ್ಚಿಲ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಇತರ ಸದಸ್ಯರೊಂದಿಗೆ ಸಹಕರಿಸಿದರು. ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಪ್ರಾಯೋಜಕರಾಗಿ ಸಹಕರಿಸಿದ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೋಶಾಧಿಕಾರಿ ನಿರಂಜನ್ ಉಚ್ಚಿಲ್ ಅಬಾರ ಮನ್ನಿಸಿದರು ಪ್ರಧಾನ ಕಾರ್ಯದರ್ಶಿ ದರ್ಶನ ಬಟ್ಟಪಾಡಿ  ಕಾರ್ಯಕ್ರಮವನ್ನು ನಿರ್ವಹಿಸಿದರು.



Related posts

ಡಬ್ಲ್ಯೂ ಐಎಫ್ ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಆಯ್ಕೆ

Mumbai News Desk

ಭಾರತ – ಇಂಗ್ಲೆಂಡ್ 5ನೇ ಟೆಸ್ಟ್ : 6 ರನ್ ಗಳ ರೋಚಕ ಜಯಗಳಿಸಿದ ಭಾರತ, ಅಂಡರ್ಸನ್- ತೆಂಡೂಲ್ಕರ್ ಟ್ರೋಫಿ ಸಮಬಲ

Mumbai News Desk

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

Mumbai News Desk

ಉಡುಪಿ ಮೂಲದ ಕನ್ನಡತಿ, ದುಬಾಯಿಯ ಗುಲ್ಶನ್ ಬಾನು ಕಾಜಿಯಿಂದ ಜಪಾನ್‌ನಲ್ಲಿ ಐತಿಹಾಸಿಕ ದಾಖಲೆ

Mumbai News Desk

ಭಾಯಂದರ್, ರೈ ಸುಮತಿ ಎಜುಕೇಷನಲ್ ಟ್ರಸ್ಟ್ ನ ಸೇಂಟ್ ಆಗ್ನೆಸ್ ಆಂಗ್ಲ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ

Mumbai News Desk

ಮುಂಬೈ ಬಂಟರ ಸಂಘದ   ಡೊಂಬಿವಲಿ ಪ್ರಾದೇಶಿಕ ಸಮಿತಿಗೆ. ಟ್ರೋಪಿ , ಒಂದು ಲಕ್ಷ

Mumbai News Desk