
ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದವರು ವಿಶ್ವಕರ್ಮರು ಈ ಸಮಾಜವು ಜಗತ್ತಿಗೆ ಶಿಲ್ಪ ಕಲೆಯನ್ನು ಪರಿಚಯಿಸುವ ಮೂಲಕ ಭಾರತದ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಎಂದು
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರೂ ಉಡುಪಿ ಇಲ್ಲಿಯ ಪರಮಪೂಜ್ಯನೀಯ ಜಗದ್ಗುರು ಶ್ರೀ ಅನಂತಶ್ರೀವಿಭೂಷಿತ ಕಾಳಹಸ್ತೆಂದ್ರ ಸರಸ್ವತೀ ಮಹಾಸ್ವಾಮೀಜಿಯವರು ನುಡಿದರು. ಅವರು
ಜ.4 ರಂದು ರವಿವಾರದ ಮಿರಾರೋಡ್ ಪೂರ್ವದ ಲತಾ ಮಂಗೇಶ್ಕರ್ ನಾಟ್ಯಗೃಹ ಇಲ್ಲಿ ಮುಂಬಯಿಯ ಮಹಾನಗರದ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲಿ ಒಂದಾದ ಹಿರಿಯ ಸಂಸ್ಥೆ ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ (ರಿ) ಮುಂಬಯಿ ಇದರ 80ನೇ
ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬೆಳಿಗ್ಗೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವದಿಸಿ ಮಾತನಾಡುತ್ತಿದ್ದರು.

ಭಾರತದ ಅನೇಕ ಪೌರಾಣಿಕ ಐತಿಹಾಸಿಕ ದೇವಸ್ಥಾನಗಳ ಮೂಲಕ ಶಿಲ್ಪಕಲೆಯ ಮಹತ್ವವನ್ನು ತಿಳಿಸಿದ ವಿಶ್ವಕರ್ಮರು ಹಣ ಸಂಪಾದನೆಯ ಹಿಂದೆ ಹೋಗದೆ ಕಲೆ ಸಂಸ್ಕೃತಿಯ ಶ್ರೀಮಂತ ಗೊಳಿಸುವಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದು ಶ್ರೀಗಳು ನುಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ
ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘ ಬೆಂಗಳೂರು, ಇದರ ಅಧ್ಯಕ್ಷ ಶ್ರೀ ತುಕಾರಾಮ ಆಚಾರ್ಯ ಅವರು ಮಾತನಾಡಿ. 80 ವರ್ಷಗಳ ಹಿಂದೆ ಸಮಾಜದ ಸಂಘಟನೆಗಾಗಿ ನಮ್ಮ ಹಿರಿಯರು ಸ್ಥಾಪಿಸಿದಂತ ಈ ಸಂಸ್ಥೆಯು ಮುಂಬೈಯಲ್ಲಿ ಅದೆಷ್ಟು ಸಮಾಜ ಪರ ಕಾರ್ಯಗಳನ್ನು ಮಾಡುತ್ತ ಇಂದು ಸಮಾಜದ ಪ್ರತಿಷ್ಠಿತ ಸಂಘಟನೆಯಾಗಿ ಬೆಳೆಸಿದ್ದಾರೆ. ಈ ಸಂಘದ ಬೆಳವಣಿಗೆಯಲ್ಲಿ ತಮ್ಮ ಕೊಡುಗೆ ನೀಡಿದ ಎಲ್ಲಾ ಮಾನ್ಯರಿಗೂ ಅಭಿನಂದನೆಯನ್ನು ಸಲ್ಲಿಸುತ್ತಾ ನಿಮ್ಮೆಲ್ಲರ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಅಂತಹ ನಮ್ಮ ಸಮಾಜದ ಭವನವು ಆದಷ್ಟು ಬೇಗನೆ ಉದ್ಘಾಟನೆ ಆಗಲಿದ್ದು ಮುಂಬೈ ಎಲ್ಲರೂ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜದ ಕೈಪಿಡಿ
ಸಂವಾದಿ ಪುಸ್ತಕ ಎಂಟನೆಯ ಆವೃತ್ತಿ ಬಿಡುಗಡೆ ಮಾಡಿದ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಪನ್ವಲ್ ನವಿ ಮುಂಬೈಯ ಇದರ ಆಡಳಿತ ಮೊಕ್ತೇಸರರು ಸಿ ಎ ಶ್ರೀಧರ ಆಚಾರ್ಯ ಮಾತನಾಡಿ ನಮ್ಮ ಸಂಸ್ಕೃತಿಯನ್ನು ಉಳಿಸು ಬೆಳೆಸಬೇಕಾಗಿದೆ ಕಾರ್ಯವನ್ನು ನಮ್ಮ ಸಮಾಜದ ಯುವಜನರು ಮಾಡಬೇಕು ಎಂದರು.ಸಂವಾದಿ ಪುಸ್ತಕ ಸಂಪಾದಕ ಪ್ರಭಾಕರ್ ಎಸ್ ಆಚಾರ್ಯ ಪುಸ್ತಕದ ಬಗ್ಗೆ ಮಾಹಿತಿಯನ್ನು ನೀಡಿದರು.
ಬಂಟರ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ಬಿ ಶೆಟ್ಟಿ, ಅವರು ಮಾತನಾಡಿದ ಹಲವಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಇಲ್ಲಿ ಸಮಾಜವು ಗಟ್ಟಿಯಾಗಬೇಕು ಎಂಬ ದೃಷ್ಟಿಯಿಂದ ಜಾತೀಯ ಸಂಘ ಸಂಸ್ಥೆಗಳನ್ನು ನಿರ್ಮಿಸಿದರು. ಅವರ ಮುಂದಾಲೋಚನೆಯಿಂದಾಗಿ ಮುಂಬೈಯಲ್ಲಿ ಪ್ರತಿಷ್ಠಿತ ಸಂಘ ಸಂಸ್ಥೆಗಳು ಬೆಳೆದುಕೊಂಡು ಸಮಾಜಪರ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ವಿಶ್ವಕರ್ಮ ಸಮಾಜವು ಸಮಸ್ತ ಮಾನವ ಕುಲಕ್ಕೆ ಅಗತ್ಯವಾದ ಸಮಾಜವಾಗಿದೆ. ಈ ಸಮಾಜದ ಕೊಡುಗೆಯು ತುಂಬಾ ಇದೆ. ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ (ರಿ) ಮುಂಬಯಿ ನೂರು ವರ್ಷವನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸುವಂತಾಗಲಿ ನಾವೆಲ್ಲರೂ ಇದರಲ್ಲಿ ಭಾಗವಹಿಸುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈಯ ಸಂಸ್ಥಾಪಕ ಉದ್ಯಮಿ ಜಯಕೃಷ್ಣ ಎ ಶೆಟ್ಟಿ, ಅವರು ಮಾತನಾಡಿ ವಿಶ್ವಕರ್ಮ ಸಮಾಜವು ಮುಂಬೈಯ ಹೋಟೆಲ್ ಉದ್ಯಮಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಶಿಲ್ಪ ಕಲೆ ಹಾಗೂ ಆರ್ಚಿಟೆಕ್ ಮುಂತಾದ ಕ್ಷೇತ್ರದಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಭಿನಂದನೆಯ ಈ ಸಮಾಜದ ಯುವ ಪೀಳಿಗೆಯ ಇದನ್ನು ಮುಂದೆ ಕೊಂಡು ಹೋಗಬೇಕು, ತುಳುನಾಡಿನಲ್ಲಿ ಯಾವುದೇ ದೇವಸ್ಥಾನ ಪುರಾತನ ದೇವಸ್ಥಾನಗಳ ನಿರ್ಮಾಣದಲ್ಲೂ ವಿಶ್ವಕರ್ಮ ಸಮಾಜದ ಕೊಡುಗೆ ಅಭಿನಂದನೆಯವಾಗಿದೆ ಎಂದರು.
ಉದ್ಯಮಿ ಶ್ರೀನಿವಾಸ್ ಆರ್ನ್ಮೆಮೆಂಟ್ಸ್ ಬೋರಿವಲಿ ಮಾಲಕ ಶ್ರೀ ಶ್ರೀಧರ್ ಆಚಾರ್ಯ, ಅವರು ಮಾತನಾಡಿ ಹತ್ತು ತಾಯಿಯ ಮಕ್ಕಳು ಒಂದು ಸೇರಿ ಸಂಘಟನೆ ನಿರ್ಮಾಣಗೊಳ್ಳುತ್ತದೆ. ಅದನ್ನು ನಾವು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಮುಂದೆ ಬೆಳೆಸಬೇಕೆಂದು ನಮ್ಮ ಕರ್ತವ್ಯ ಸಮಾಜದ ಒಗ್ಗಟ್ಟಿಗಾಗಿ ನಾವೆಲ್ಲರೂ ಶ್ರಮಿಸಬೇಕು. ಯುವಜನರು ಮುಂದೆ ಬಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಆಗ ಸಮಾಜವು ಎಲ್ಲರನ್ನೂ ಗೌರವಿಸುತ್ತಾರೆ ಎಂದರು.
ಸಭಾಧ್ಯಕ್ಷತೆಯನ್ನು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷ ರವೀಶ್ ಜಿ ಆಚಾರ್ಯ ಅವರು ವಹಿಸಿ ಮಾತನಾಡುತ್ತಾ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈ 80ನೇ ವರ್ಷವನ್ನು ಆಚರಿಸಲು ಸಮಾಜ ಬಾಂಧವರೆಲ್ಲರ ಸಾಕಾರ ದೊರೆತಿದೆ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು, ಅಲ್ಪಸ್ವಲ್ಪ ಲೋಪ ದೋಷಗಳು ಇದ್ದರೂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿದೆ ಎಲ್ಲರ ಸಹಕಾರ ಇದೆ, ಕಳೆದ 80 ವರ್ಷಗಳಿಂದ ನಮ್ಮ ಹಿರಿಯರು ಈ ಸಂಘದ ಬೆಳವಣಿಗೆಗೆ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಮುಂಬೈಯಲ್ಲಿ ಸಮಾಜ ಬಾಂಧವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಾರ್ಯವನ್ನು ನಮ್ಮ ಈ ಸಂಸ್ಥೆಯು ಸದಾ ಮಾಡುತ್ತಿದೆ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈ 80 ವರ್ಷ ಕೇವಲ ಸಂಖ್ಯೆಯಾಗಿರದೆ ಹಲವಾರು ಯೋಜನೆಗಳನ್ನು ಈ ಸಂಸ್ಥೆಯು ಕಾರ್ಯರೂಪಕ್ಕೆ ತಂದಿದೆ. ನಮ್ಮ ಧರ್ಮ ಸಂಸ್ಕೃತಿ ಉಳಿಸುವ ಬೆಳೆಸುವ ದೃಷ್ಟಿಯಿಂದ ನಾವು ಕೆಲಸ ಮಾಡುತ್ತಾ ಬಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು ಮಹಿಳಾ ವಿಭಾಗದ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.ಉಪಾಧ್ಯಕ್ಷ ಗಣೇಶ್ ಕುಮಾರ್ ಕೆ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮವನ್ನು ವೀಣಾ ಸುಧೀರ್ ಆಚಾರ್ಯ ಹಾಗೂ ಹರೀಶ್ ಆಚಾರ್ಯ ಅವರು ನಿರೂಪಿಸಿದರು. ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಅವರು ಸ
ವಂದಿಸಿದರು.
ವೇದಿಕೆಯಲ್ಲಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿಯ ಇದರ ಅಧ್ಯಕ್ಷ ರವೀಶ್ ಜಿ ಆಚಾರ್ಯ, ಉಪಾಧ್ಯಕ್ಷ ಗಣೇಶ್ ಕುಮಾರ್ ಕೆ, ಕೋಶಾಧಿಕಾರಿ ಬಾಬುರಾಜ್ ಎಂ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಪ್ರಸಾದ್ ಆಚಾರ್ಯ ಸುಧೀರ್ ಜೆ ಆಚಾರ್ಯ, ಜೊತೆಕೋಶಾಧಿಕಾರಿ ರವೀಂದ್ರ ಐಪಿ ಆಚಾರ್ಯ, ಆಚರಣೆಯ ಕಾರ್ಯಾಧ್ಯಕ್ಷ ಸದಾನಂದ ಎನ್ ಆಚಾರ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾಕ್ಟರ್ ಕೆ ಮೋಹನ್, ನಿಧಿ ಸಂಗ್ರಹಣಾ ಸಮಿತಿಯ ಕಾರ್ಯಧ್ಯಕ್ಷ ನಿತಿನ್ ದಾಮೋದರ್ ವಿ ಆಚಾರ್ಯ, ಸ್ವಾಗತ ಸಮಿತಿಯ ಕಾರ್ಯಧ್ಯಕ್ಶರಾದ ಭವಾನಿ ಶಂಕರ್ ವಿ ಆಚಾರ್ಯ, ಸ್ಮರಣ ಸಂಚಿಕೆ ಕಮಿಟಿಯ ಕಾರ್ಯಾಧ್ಯಕ್ಷ ಅರುಣ್ ಪಿ ಆಚಾರ್ಯ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಗೋಪಾಲ್ ಆಚಾರ್ಯ, ಯುವ ವಿಭಾಗದ ಕಾರ್ಯದ್ಯಕ್ಷ ಸಂದೇಶ್ ಜೆ ಆಚಾರ್ಯ ಹಾಗೂ ಇತರ ಉಪಸಮಿತಿಯ ಕಾರ್ಯಾಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
(ಚಿತ್ರ ವರದಿ: ಸುಭಾಷ್ ಶಿರಿಯ)




