26.3 C
Mumbai
March 7, 2026
Mumbai News Kannada
ಸುದ್ದಿ

” ಸಾಧನೆಯ ಮೂಲಕ ಮನಸ್ಸನ್ನು ತಿಳಿಗೊಳಿಸುವುದೇ ಜೀವನದ ಮುಖ್ಯ ಉದ್ದೇಶ “: ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ.







ಸುದ್ದಿ ವಿವರ : ಪಿ.ಆರ್.ರವಿಶಂಕರ್
8483980035
ಬೊಯಿಸರ್ ತಾ. 14.01.2026
ಧರ್ಮಸ್ಥಳದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಇವರು ಇದೇ ಜನೆವರಿ ತಾ.14 ನೇ ಬುಧವಾರ ಮಕರ ಸಂಕ್ರಾಂತಿಯಂದು ಮಹಾರಾಷ್ಟ್ರ ಪಶ್ಚಿಮ ಕರಾವಳಿಯ ಬೊಯಿಸರ್ ಪಶ್ಚಿಮದಲ್ಲಿನ ಸುಪ್ರಸಿದ್ಧ ಶ್ರೀ ಸ್ವಾಮಿ ನಿತ್ಯಾನಂದ ಮಂದಿರಕ್ಕೆ ಭೇಟಿ ನೀಡಿದರು.
ಶ್ರೀ ಗಳಿಗೆ ಕಳೆದ ವರ್ಷ ಶ್ರೀ ಪಂಚ ದಶಾನಮ್ ಜುನಾ ಅಖಾಡದಲ್ಲಿನ ಗೌರವಾನ್ವಿತ ಅನಂತ ಶ್ರೀ ವಿಭೂಷಿತ ಶ್ರೋತ್ರೀಯ ಭ್ರಾಮ್ನಿಷ್ಟ ಮಹಾ ಮಂಡಲೇಶ್ವರ ಪದವಿ ದೊರಕಿದ್ದು ( ಈ ಪಟ್ಟಕ್ಕೆ ಭಾಜನರಾದ ಕರ್ನಾಟಕ ರಾಜ್ಯದಲ್ಲಿನ ಏಕೈಕ ಮತ್ತು ಮೊತ್ತ ಮೊದಲ ಸ್ವಾಮಿಗಳು ) ಈ ಪಟ್ಟ ದೊರಕಿದ ಬಳಿಕ ಬೊಯಿಸರ್ ಗೆ ಇಂದು ಮೊದಲ ಭೇಟಿ ಆಗಿದೆ.
ಮಂದಿರಕ್ಕೆ ಆಗಮಿಸಿದ ಶ್ರೀಗಳನ್ನು ಮಂದಿರದ ವಿಶ್ವಸ್ಥ ಮಂಡಳಿ, ಸದ್ಗುರು ಭಜನಾ ಮಂಡಳಿ ಹಾಗೂ ಭಕ್ತ ವೃಂದದವರು ಪುಷ್ಪವೃಷ್ಟಿ , ಸಾಂಪ್ರದಾಯಿಕ ವಾದ್ಯ ವೃಂದದೊಂದಿಗೆ ಸ್ವಾಗತಿಸಿದರು . ಮುಖ್ಯದ್ವಾರದಲ್ಲಿ ಶ್ರೀಗಳ ಪಾದ್ಯ ಪೂಜೆಯ ಬಳಿಕ , ನಿತ್ಯಾನಂದ ಸ್ವಾಮಿಯವರ ಮಂದಿರದಲ್ಲಿ ಶ್ರೀಗಳು ಆರತಿ ಸಲ್ಲಿಸಿದರು. ಸಭಾಂಗಣದಲ್ಲಿ ಮಂದಿರದ ವಿಶ್ವಸ್ಥ ಮಂಡಳಿ ಹಾಗೂ ಭಕ್ತಾಭಿಮಾನಿಗಳು ಶಾಲು ಹೊದೆಸಿ ಫಲವಸ್ತು ಕಾಣಿಕೆಗಳನ್ನು ಸಲ್ಲಿಸಿ ಹಾರಾರ್ಪಣೆಗೈದು ಗೌರವಿಸಲಾಯಿತು. ಉಪಸ್ಥಿತ ಭಕ್ತ ಮಂಡಳಿಗೆ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಧಾರ್ಮಿಕ ಪ್ರವಚನದೊಂದಿಗೆ ಆಶೀರ್ವಚನ ನೀಡಿದರು.


” ಉತ್ತಮ ಜೀವನ ಸಾಗಿಸುವ ನಿಟ್ಟಿನಲ್ಲಿ ಮನುಷ್ಯನಿಗೆ ಮೊತ್ತ ಮೊದಲು ಸತ್ಯದ ಅರಿವು ಉಂಟಾಗುವುದು ಅತ್ಯಗತ್ಯವಾಗಿದೆ. ಮನಸ್ಸಿಗೆ ಮುಸುಕಿದ ಮಾಯೆಯನ್ನು ಸರಿಸದ ಹೊರತು ಜ್ಞಾನ ಮತ್ತು ವಿವೇಕ ಪ್ರಕಟವಾಗುವುದಿಲ್ಲ. ಸತ್ಯದ ಅರಿವೂ ಆಗುವುದಿಲ್ಲ. ಜೀವನದ ಮುಖ್ಯ ಉದ್ದೇಶವೇ ನಾನು ಯಾರೆಂಬುದನ್ನು ತಿಳಿದು ಕೊಳ್ಳುವುದಾಗಿದೆ ” ಎನ್ನುತ್ತಾ ಮಹಾಭಾರತ ರಾಮಾಯಣಗಳಲ್ಲಿ ನೀಡಿದ ಸಿದ್ಧಾಂತಗಳನ್ನು ಉದಾಹರಿಸಿದರು. ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಎಲ್ಲೆಡೆಯ ಭಕ್ತಾದಿಗಳು ಒಂದೆಡೆ ಸೇರುವಂತಹ ಈ ಭವ್ಯ ವಾಸ್ತುವಿನ ಮೂಲ ನಿರ್ಮಾತೃ ದಿ. ಶ್ರೀ ಕೋಡಿಕಲ್ ದಾಮೋದರ್ ನಾಯ್ಕ್ ಕೊಡುಗೆಯನ್ನು ಶ್ರೀಗಳು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಜರಗಲಿರುವ ನಾಶಿಕ್ ನಲ್ಲಿಯ ಪವಿತ್ರ ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಎಲ್ಲರನ್ನೂ ಆಮಂತ್ರಿಸಿದರು.
ಕಾರ್ಯಕ್ರಮದ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು.

ಸಂದರ್ಭದಲ್ಲಿ ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್.ರೈ , ಮೀರಾ ಡಹಾಣೂ ಬಂಟ್ಸ್ ಸಂಸ್ಥೆಯ ಟ್ರಸ್ಟೀ ಕೆ. ಭುಜಂಗ ಶೆಟ್ಟಿ , ವಿಶ್ವಸ್ಥ ಮಂಡಳಿಯ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ , ಶ್ರೀನಿವಾಸ್ ಕೋಟ್ಯಾನ್ , ಸತ್ಯಾ ಕೋಟ್ಯಾನ್ , ಸದ್ಗುರು ಭಜನಾ ಮಂಡಳಿಯ ಸದಸ್ಯರು , ಭಕ್ತ ವೃಂದದ ಸದಸ್ಯರು , ಬೊಯಿಸರ್ ಪರಿಸರದ ಉದ್ಯಮಿಗಳು ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ ಹಾಗೂ ಸುದ್ದಿ : ಪಿ.ಆರ್
ರವಿಶಂಕರ್. 8483980035



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ

Mumbai News Desk

ಬಜೆಟ್ ನಲ್ಲಿ ನಿರ್ಲಕ್ಷ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಗ್ರಹ* ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸಿ : ಐಕಳ ಹರೀಶ್ ಶೆಟ್ಟಿ

Mumbai News Desk

ಕರ್ನಿರೆ ವಿಶ್ವನಾಥ್ ಶೆಟ್ಟಿ ಯವರಿಗೆ ಮಾತೃ ವಿಯೋಗ

Mumbai News Desk

ಅಜಿತ್ ಪವಾರ್ ವಿಮಾನ ಅಪಘಾತ : ಘಟನೆ ಹೇಗೆ ನಡೆಯಿತು? ‘ಕಳಪೆ ಗೋಚರತೆ… ನಂತರ ಅಪಘಾತ’

Mumbai News Desk

ಅರಬ್ಬಿ ಸಮುದ್ರದ ಅಲೆಗಳನ್ನು ಗೆದ್ದ ಮುಂಬೈ ಹುಡುಗಿ: 5 ಕಿ.ಮೀ ಈಜಿ ದಾಖಲೆ ಬರೆದ ದಿಶಿತಾ ಚಂದ್ರಶೇಖರ್ ಪೂಜಾರಿ

Mumbai News Desk

ಮುಂಬೈಯ ನಾಟ್ಯ ಕಲಾವಿದೆ ಜ್ಯೋತಿ ರಂಜಿತ್ ಶರ್ಮ ಅವರಿಂದ ಅಯೋಧ್ಯೆಯಲ್ಲಿ ನ್ರತ್ಯ ಸೇವೆ.

Mumbai News Desk