32 C
Mumbai
March 7, 2026
Mumbai News Kannada
ಸುದ್ದಿ

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್,ಪೃಥ್ವಿ ಸೇವಾ ಟ್ರಸ್ಟ್, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ





ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಪೃಥ್ವಿ ಸೇವಾ ಟ್ರಸ್ಟ್ ಮಂಗಳೂರು, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಇದರ ಸಹಯೋಗದಿಂದ ಉಚಿತ ಬೃಹತ್ ರಕ್ತದಾನ ಶಿಬಿರವು ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೇವಾ ಭಾರತಿ ಕರ್ನಾಟಕ ಇದರ ಕಾರ್ಯದರ್ಶಿಯಾದ ಕೆ ಚನ್ನಯ್ಯ ಸ್ವಾಮಿ ಇವರು ಉದ್ಘಾಟಿಸಿ ಮಾತಾಡಿದರು ರಕ್ತದಾನವು ಖರೀದಿಸಿ ಮಾಡುವ ದಾನವಲ್ಲ ಸ್ವಯಂ ಪ್ರೇರಿತರಾಗಿ ತಮ್ಮ ರಕ್ತವನ್ನು ದಾನ ಮಾಡುವುದೇ ಅಮೂಲ್ಯವಾದ ದಾನ ಎಂದು ನುಡಿದರು. ರೆಡ್ ಕ್ರಾಸ್ ಸಂಸ್ಥೆಯ ಸಿಎ ಶಾಂತರಾಮ್ ಶೆಟ್ಟಿ ಅವರು ಮಾತಾಡಿ ರೇಟ್ ಕ್ರಾಸ್ ಸಂಸ್ಥೆಯು ಇನ್ನೂ ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು ಈ ರಕ್ತದಾನ ಶಿಬಿರದಲ್ಲಿ ಸುಮಾರು ನೂರಕ್ಕೂ ಮಿಕ್ಕಿ ರಕ್ತದಾನಿಗಳು ಭಾಗವಹಿಸಿದರು.


ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪೃಥ್ವಿ ಸೇವಾ ಟ್ರಸ್ಟ್ ನ ಅಧ್ಯಕ್ಷೇ ಲೋಲಾಕ್ಷಿ ಫರ್ನಂಡಿಸ್, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷತ ಕದ್ರಿ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ಕಲ್ಪನಾ ಕೋಟಿಯನ್, ಶೈನೀ ಉಪಸ್ಥಿತಿದ್ದರು,


ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷೇ ಅಕ್ಷತಾ ಕದ್ರಿ ಅವರು ಸ್ವಾಗತ ಮಾಡಿದರು, ಪೃಥ್ವಿ ಸೇವಾ ಟ್ರಸ್ಟ್ ನ ಅಧ್ಯಕ್ಷೇ ಲೋಲಾಕ್ಷಿ ಫರ್ನಾಂಡಿಸ್ ವಂದನಾರ್ಪಣೆ ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶೈನಿ ಇವರು ನೆರವೇರಿಸಿದರು.



Related posts

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )

Mumbai News Desk

  ’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ, ರಿಷಬ್ ಶೆಟ್ಟಿ ಸಹಿತ 30 ಜನ ಸಹಕಲಾವಿದರುಅಪಾಯದಿಂದ ಪಾರು

Mumbai News Desk

ಮುಲ್ಕಿಯ ಜನಪ್ರಿಯ ಡ್ರೈ ಫ್ರುಟ್ಸ್ ಸ್ಟೋರ್, ಕ್ಯಾನ್ ಕೋಸ್ (KANCOS)ವತಿಯಿಂದ “ಗಿವ್ ಅವೇ” ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Mumbai News Desk

ನಾಸಿಕ್ ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ:

Mumbai News Desk

ನಾಸಿಕ್‌ನಲ್ಲಿ ಮುಂಬಯಿ ಕುಲಾಲ ಸಂಘದ ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್ ವತಿಯಿಂದ ತಿರುಪತಿ ಯಾತ್ರೆ

Mumbai News Desk