27.7 C
Mumbai
July 23, 2026
Mumbai News Kannada
ಸುದ್ದಿ

ನಾಸಿಕ್ ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ:







ಸಂಘಟನೆ ಬಲಿಷ್ಟವಾಗಬೇಕಾದರೆ ಅಲ್ಲಿ ಸಂಘಟನಾತ್ಮಕವಾಗಿ ಸಮಾ ಜಪರ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು: ನಿತ್ಯಾನಂದ ಆರ್. ಶೆಟ್ಟಿ

ನಮ್ಮ ಹಿರಿಯರು ನಾಡು-ನುಡಿಯ ಅಭಿಮಾನ, ಗೌರವ ದಿಂದ ಸ್ಥಾಪಿಸಿದ ಈ ಸಂಘವು ಇಂದು ಯೌವನಾವಸ್ಥೆಯಲ್ಲಿ ಇರುವುದು ಹೆಮ್ಮೆಯ ಸಂಗತಿ ಸಂಗತಿ. ಸಂಘವು ಕಳೆದ 36 ವರ್ಷಗಳಿಂದ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಬಿಂಬಿಸುವ ಕಾರ್ಯ ಕ್ರಮಗಳಲ್ಲಿ ಇಲ್ಲಿನ ತುಳುವರ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ನೀಡಿ ಅವರನ್ನು ಸಂಘದ ಕಡೆ ಆಕರ್ಷಿಸುವ ಕೆಲಸವನ್ನು ಮಕ್ಕಳ ಪಾಲಕ ಪೋಷಕರು ಮಾಡ ಬೇಕು. ಸಂಘದ ಪ್ರತಿಯೊಂದು ನಾಡು -ನುಡಿಯನ್ನು ಬಿಂಬಿಸುವ ಕಾರ್ಯ ಕ್ರಮಗಳಲ್ಲಿ ತುಳುವರು ಅಧಿಕ ಸಂಖ್ಯೆ ಯಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಒಂದು ಸಂಘಟನೆ ಬಲಿಷ್ಟವಾಗಬೇಕಾ ದರೆ ಅಲ್ಲಿ ಸಂಘಟನಾತ್ಮಕವಾಗಿ ಸಮಾ ಜಪರ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕಾಗಿದೆ ಎಂದು ನಾಸಿಕ್ ತುಳು ಸೇವಾ ಸಂಘದ ಅಧ್ಯಕ್ಷರಾದ ನಿತ್ಯಾನಂದ ಆರ್. ಶೆಟ್ಟಿ ಅವರು ಹೇಳಿದರು.

ಜ. 26ರಂದು ನಾಸಿಕ್ ಚೇತನಾ ನಗರದ ಶ್ರೀ ಲಕ್ಷ್ಮೀ ನಾರಾಯಣ ಸಭಾ
ಭವನದಲ್ಲಿ ನಡೆದ ನಾಸಿಕ್ ತುಳು ಸೇವಾ ಸಂಘದ 36ನೇ ವಾರ್ಷಿ ಕೋತ್ಸವಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ಸಂಘಕ್ಕಾಗಿ ಜಾಗವನ್ನು ಪಡೆದಿದ್ದು, ಅಲ್ಲಿ ತುಳು ಭವನ ನಿರ್ಮಾಣ ನಮ್ಮೆಲ್ಲರ ಕನಸಾಗಿದೆ ಅದಕ್ಕಾಗಿ ಸಂಘದ ಕಟ್ಟಡ ನಿರ್ಮಾಣ ಸಮಿತಿ ಹಗಲಿರುಳು ಶ್ರವಿ ಸುತ್ತಿದೆ. ನಮ್ಮೆಲ್ಲರ ಕನಸು ನನಸಾಗಲು ನಾವೆಲ್ಲರು ಒಂದಾಗಿ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸೋಣ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುಂಬಯಿ ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಅವರು
ಮಾತನಾಡಿ, ತುಳುನಾಡಿನ ಆಚಾರ, ವಿಚಾರ, ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿ ಹೇಳುವಲ್ಲಿ ಪಾಲಕರ ಪಾತ್ರ ಮಹತ್ವದ್ದು ಮುಂಬಯಿ ಚಿಣ್ಣರ ಬಂಬದ ನೆಲೆ ಯಲ್ಲಿ ಇಲ್ಲೂ ಕೂಡ ಮಕ್ಕಳಿಗೆ ತುಳು ನಾಡಿನ ಸಾಂಸ್ಕೃತಿ, ಕಲೆಯ ಬಗ್ಗೆ ಮಾಹಿತಿ ನೀಡುವ, ಕಲಿಸುವ ತರಗತಿ ಗಳನ್ನು ಪ್ರಾರಂಭಿಸಬೇಕು, ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕಿದ್ದರೆ ಬಾಲಕರು ಸದಾ ಮಾರ್ಗದರ್ಶಕರಾಗಿರಬೇಕು, ಎಂದರು.

ಅತಿಥಿಯಾಗಿ ಪಾಲ್ಗೊಂಡ ಸಂಘಟಕ ‌ ಪತ್ರಕರ್ತ ಬಿ. ದಿನೇಶ್ ಕುಲಾಲ್ ಅವರು ಮಾತನಾಡಿ, ಒಗ್ಗಟ್ಟಿನಿಂದಾಗಿ ಇಷ್ಟೊಂದು ಉತ್ತಮ ರೀತಿಯ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ. ಇದನ್ನೇ ಮುಂದುವರಿಸುತ್ತಾ ಸಂಘವನ್ನು ಬೆಳೆಸುವಲ್ಲಿ ಎಲ್ಲರೂ ಸಹಕರಿಸಬೇಕು. ಮಕ್ಕಳನ್ನು ಪಾಶ್ಚಾತ್ಯ ಶೈಲಿಗೆ ಮಾರುಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ತುಳು-ಕನ್ನಡಿಗರು ಎಲ್ಲಿ ಹೋದರೂ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬಿಟ್ಟುಕೊಟ್ಟವರಲ್ಲ, ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸು ವುದರೊಂದಿಗೆ ಮಕ್ಕಳನ್ನು ಸುಸಂ ಧೃತರನ್ನಾಗಿಸುವ ಕೆಲಸವನ್ನು ಪಾಲಕರು ಮಾಡಬೇಕೆಂದು ಹೇಳಿದರು.

ವೇದಿಕೆಯಲ್ಲಿ ಸಂಘ ಗೌರವ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ನಾಸಿಕ್‌ ರೋಡ್, ಜತೆ ಕೋಶಾಧಿಕಾರಿ ಧೀರಜ್ ಶೆಟ್ಟಿ , ಸಂಘದ ಮಾಜಿ ಅಧ್ಯಕ್ಷ ರಮಾನಂದ ಬಂಗೇರ, ಪಿಆರ್ ಒ . ರಾಮಚಂದ್ರ ಶೆಟ್ಟಿ. ಉಪಾಧ್ಯಕ್ಷ ಮೋಹನ್ ಶರ್ಕೇರ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಕಲ್ಪನಾ ಎಸ್. ಬಂಗೇರ ಅವರು ಉಪಸ್ಥಿತರಿದ್ದರು.

ಉದ್ಯಮಿ ವಾಲಚಂದ್ರ ಕೋಟ್ಯಾನ್ ಅವರು ವರ್ಷಂಪ್ರತಿ ನೀಡುವ ವಿದ್ಯಾರ್ಥಿ ವೇತನವನ್ನು ದಾಮೋದರ ಪೂಚಾರಿಯವರು ವಿತರಿಸಿದರು.

ಸಂತೋಷ್ ಶೆಟ್ಟಿ ಕುಚೂರು ಮತ್ತು ಧನ್ಯಾ ಹರೀಶ್ ಶೆಟ್ಟಿಸಂಯೋಜನೆಯಲ್ಲಿ ಸಂಘದ ಸದಸ್ಯರ ಅಭಿನಯದಲ್ಲಿ ದಶಾವತಾರ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಪ್ರದೀಪ್ ಕೆ. ರೈ ತನ್ನಿ ಧೀರಜ್ ಶೆಟ್ಟಿ ಮತ್ತು ಪೂಜಾ ರೋಹನ್ ರೈ ಕಾರ್ಯ ಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿ ತಿಯ ಅಧ್ಯಕ್ಷರಾದ ಹರೀಶ್ ಆಳ್ವ ಅನಿಲ್ ಕರ್ಕೇರ ಮತ್ತು ಸಂಘದ ಸದಸ್ಯರು
ಪ್ರತಿಭಾವಂತರನ್ನು ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಿದರು. ಅತಿಥಿ-ಗಣ್ಯರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮಾನಿಸಿ ಗೌರವಿಸಿದರು.

ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಮತ್ತು ವೇದಿಕೆಯ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ಅತಿಥಿ ಯಾಗಿ ಭಾಗವಹಿಸಿದ ನಾಸಿಕ್ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ಫೈನಾನ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಶ್ರೀ ಲಕ್ಷ್ಮೀ ನಾರಾಯಣ ಸಭಾ ಭವ ನದ ಟ್ರಸ್ಟಿ ವಿ. ಪಿ. ಶೆಣೈ ಅವರನ್ನು ಗೌರವಿಸಲಾಯಿತು.

ವಿವಿಧ ಸ್ಪರ್ಧೆಗಳ ತಂಡಗಳ ಟ್ರೋಫಿ ಯನ್ನು ಸುರೇಶ್ ಶೆಟ್ಟಿ ಮತ್ತು ನಾಸಿಕ್ ರೋಡ್ ಫ್ರೆಂಡ್ಸ್ ಪ್ರಾಯೋಜಿಸಿದರು.
ಕಾಠ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷ ನಿತ್ಯಾ ನಂದ ಶೆಟ್ಟಿ ಅವರು ಪ್ರಾಯೋಜಕತ್ವ ದಲ್ಲಿ ಭೋಜನದ ವ್ಯವಸ್ಥೆ ಮಾಡಲಾ ಯಿತು.ಸದಸ್ಯ ಬಾಂಧವರು, ತುಳುವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾ ರಂಭದ ಯಶಸ್ಸಿಗೆ ಸಹಕರಿಸಿದರು.



Related posts

ಸಿ ಎ ಪರೀಕ್ಷೆ ಫಲಿತಾಂಶ 2024 ಸ್ನೇಹ ಶಿವಪ್ಪ ಮೊಗವೀರ ಉತ್ತೀರ್ಣ

Mumbai News Desk

ಧರ್ಮಪಾಲ್ ದೇವಾಡಿಗ ಮತ್ತು ಚಂದ್ರಶೇಖರ್ ಬೆಳ್ಚಡ ಇವರಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ

Mumbai News Desk

ಕೆವಿಎಸ್ ಎಂಟರ್ಟೈನ್ಮೆಂಟ್ ನ ಕಲಾವಿದರಿಂದ ತುಳು ನಾಟಕ ಪ್ರದರ್ಶನ

Mumbai News Desk

ಮುಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಮಿನಾ ಆಳ್ವ ಆಯ್ಕೆ 

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ  ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk