ಮುಂಬಯಿ : ಗೋರೆಗಾಂವ್ (ಪೂರ್ವ)ದ ಸಹಕಾರವಾಡಿ ವಿರ್ವಾನಿ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಭಾಗದಲ್ಲಿನ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಜ. 24 ಮತ್ತು 25 ರಂದು 61ನೇ
ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶನಿವಾರ, ಜ. 24ರಂದು ಬೆಳಿಗ್ಗೆ 7.15ರಿಂದ ಉದ್ಘಾಟನೆ, ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಹಾಗೂ ಭಕ್ತರಿಂದ ಹಗಲು–ರಾತ್ರಿ ಏಕಹಾ ಭಜನೆ ಮತ್ತು ಶ್ರೀ ರಾಮ ಜಯ ರಾಮ ಜಯ ಜಯ ರಾಮ” ನಾಮಸ್ಮರಣೆ ಭಾನುವಾರ, ಜ. 25 ರಂದು ಬೆಳಿಗ್ಗೆ 7.16ಕ್ಕೆ ಏಕಹಾ ಭಜನೆ ಮಂಗಲೋತ್ಸವ ಬೆಳಿಗ್ಗೆ 8.00ರಿಂದ 9.00ರವರೆಗೆ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ, ಪಾದುಕಾ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ಬೆಳಿಗ್ಗೆ 11.00ರಿಂದ ಮಧ್ಯಾಹ್ನ 12.00ರವರೆಗೆ ಶ್ರೀ ಸದ್ಗುರು ಭಜನಾ ಸಮಿತಿ ಸದಸ್ಯರಿಂದ ಭಜನಾ ಸಂಕೀರ್ತನೆ ಮಧ್ಯಾಹ್ನ 12.00ರಿಂದ 3.00ರವರೆಗೆ ಮಹಾಪ್ರಸಾದ ಅನ್ನ ಸಂತರ್ಪಣೆ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ
ಸಂಜೆ 6.00ರಿಂದ ಗುರು ನಾರಾಯಣ ಯಕ್ಷಗಾನ ಮಂಡಳಿ ಇವರಿಂದ ತುಳು ಯಕ್ಷಗಾನ “ಅಜ್ಜನ ಪಜ್ಜೆ”
ರಾತ್ರಿ 8.00ಕ್ಕೆ ಸಭಾ ಕಾರ್ಯಕ್ರಮ ನಂತರ ಯಕ್ಷಗಾನ ಮುಂದುವರಿಯಲಿದೆ.
ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದ ಪಡೆಯಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಶ್ರಮದ ಗೌರವ ಅಧ್ಯಕ್ಷರಾದ ಮೋಹನ ಪೂಜಾರಿ, ಅಧ್ಯಕ್ಷರಾದ ರಘು ಮೂಲ್ಯ, ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಬಂಗೇರ ಮತ್ತು ಶ್ರೀಧರ್ ಮೂಲ್ಯ, ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಕೋಶಾಧಿಕಾರಿ ಬಬಿತಾ ಜೆ. ಕೋಟ್ಯಾನ್, ಜೊತೆನ್ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಆಶಾಲತಾ ಶೈಲೇಶ್, ಮಹಿಳಾ ವಿಭಾಗ, ಪೂಜಾ ಸಮಿತಿ ಹಾಗೂ ಎಲ್ಲಾ ಪದಾಧಿಕಾರಿಗಳು ವಿನಂತಿಸಿದ್ದಾರೆ.




