26.3 C
Mumbai
March 7, 2026
Mumbai News Kannada
ಪ್ರಕಟಣೆ

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ







ಭಗವಾನ್ ಈಶ್ವರ ದೇವರು ಕಿರಾತ ರೂಪದಲ್ಲಿ ಭೂಮಿಗೆ ಬಂದು ನಂತರ ಉಳ್ಳಾಯ ದೈವವಾಗಿ ಪ್ರಕಟಗೊಂಡು ತುಳುನಾಡಿನಾದ್ಯಂತ ನೆಲೆ ನಿಂತು ಭಕ್ತರನ್ನು ಪೊರೆಯುತ್ತಿರುವ ಕಥೆ ತುಳುನಾಡಿನಲ್ಲಿ ಜನಜನಿತ. ಶ್ರೀ ಉಳ್ಳಾಯ ದೈವ ಮೊದಲ ಬಾರಿಗೆ ಕಾಣಿಸಿಕೊಂಡ ಮಹತ್ತರ ಪುಣ್ಯಕ್ಷೇತ್ರವೆಂದು ಹೇಳಲಾದ ದಕ್ಷಿಣಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಒಂಬತ್ತು ಮಾಗಣೆಯ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ಸ್ಥಾಪಿಸಿದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಶ್ರೀ ಉಳ್ಳಾಯ, ಓಡ್ಯಂತಾಯ, ಮೈಸಂದಾಯ, ಪರಿವಾರ ದೈವಗಳು ಮತ್ತು ಕಾಂತಾಬಾರೆ ಬೂದಾಬಾರೆಯರ ಪುನರ್ ಪ್ರತಿಷ್ಠೆ, ಮಾಯಂದಾಲ್ ದೈವದ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ  ಹಾಗೂ ನೇಮೋತ್ಸವಕ್ಕೆ ಸಜ್ಜಾಗಿ ನಿಂತಿದೆ.
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಶಿಲಾಮಯ
ಗರೊಡಿ ನಿರ್ಮಾಣ, ಬಾರೆಯರ ಗುಡಿ ನಿರ್ಮಾಣ, ಹೊಸ ಸಭಾಂಗಣ, ಹೊಸ ಧ್ಬಜಸ್ತಂಭ ಪ್ರತಿಷ್ಠಾಪನೆಂಥ ಪ್ರಮುಖ ಕಾಮಗಾರಿಗಳು ಮುಗಿದಿದ್ದು ಪಡುವಣ ದಿಕ್ಕಿನಲ್ಲಿ  ಪ್ರವೇಶದ್ವಾರ ನಿರ್ಮಾಣ ಮತ್ತು ಹೊಸ ಗೋಪುರ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ.
ಈ ಕ್ಷೇತ್ರದಲ್ಲಿ ಫೆಬ್ರವರಿ 4 ರಿಂದ 10 ರ ವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ನಿತ್ಯ ಭಜನೆ ಧಾರ್ಮಿಕ ಸಭೆ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಳೈಸುವಿಕೆಯೊಂದಿಗೆ  ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಭಾರಿ ಶ್ರದ್ಧಾ ಭಕ್ತಿಯೊಂದಿಗೆ ಜರುಗಲಿದೆ.

*ರಾತ್ರಿಯಲ್ಲಿ  ಗರೋಡಿ ಕಟ್ಟಿದ ಕತೆ :*
ಕಾಂತಾಬಾರೆ ಬೂದಾಬಾರೆಯರು ಅಂದು ಮುಲ್ಕಿ ಸೀಮೆ ಅರಸರಿಂದ ಅನುಮತಿ ಪಡೆದು ಪಡುವಣ ಕಡಲಿನ ಸಸಿಹಿತ್ಲು ಬಳಿ ಗರೊಡಿ ಕಟ್ಟುವ ಸಂದರ್ಭದಲ್ಲಿ ಆ ಆಜಾನುಬಾಹುವೀರರು ಪಡುಪಣಂಬೂರು ಮುಟ್ಟಿಕಲ್ಲಿನಿಂದ ಬೃಹತ್ ಹಾಸುಕಲ್ಲುಗಳನ್ನು ಹೆಗಲಲ್ಲಿ ಹೊತ್ತು ತರುವಾಗ ಹೊಯಿಗೆಗುಡ್ಡೆಯ ಗೌರಿ ದೇವಿ ಕೋಳಿಯಾಗಿ  ಕೂಗಿದರು ಎಂಬ ಪ್ರತೀತಿ ಇದೆ. ರಾತ್ರಿ ಬೆಳಗಾಗುವದರೊಳಗೆ  ಗರೋಡಿ ಕಟ್ಟುವೆವೆಂದು  ಬಾಷೆ ಕೊಟ್ಟು ಬಂದ ಕಾಂತಾಬಾರೆ ಬೂದಾಬಾರೆಯರು ಕೋಳಿ ಕೂಗಿದ ಶಬ್ದ ಕೇಳಿ ಬೆಳಗಾಯಿತೆಂದು ತಾವು ತಂದಿದ್ದ ಮೂರು ಹಾಸುಕಲ್ಲುಗಳನ್ನು ಅಲ್ಲೇ ಹಾಕಿದ್ದು ಆ ಮೂರು ಹಾಸುಕಲ್ಲುಗಳೂ ಇಂದಿಗೂ ಸ್ಮಾರಕ ರೂಪದಲ್ಲಿ ಕಾರಣಪುರುಷ ಬಾರೆಯರು ಅಂದು ಇದ್ದರು ಎಂಬುದಕ್ಕೆ ಸಾಕ್ಷಿರೂಪವಾಗಿ ನಿಂತಿವೆ.

*ಖಂಡಿಗೆಯಿಂದ ಬರುವ ಉಳ್ಳಾಯನ ಭಂಡಾರ:*
ಸುರತ್ಕಲ್ ಖಂಡಿಗೆ ಬೀಡಿಗೂ ಸಸಿಹಿತ್ಲು ಶ್ರೀ ಉಳ್ಳಾಯ ದೈವಸ್ಥಾನಕ್ಕೆ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದ್ದು ವರ್ಷಂಪ್ರತಿ ಅಲ್ಲಿಂದ ಭಂಡಾರ ಬಂದು ಇಲ್ಲಿ ನೇಮೋತ್ಸವ ನಡೆಯುವ ಆ ಸಂಪ್ರದಾಯ ಇವತ್ತಿಗೂ ನಡೆಯುತ್ತಾ ಬಂದಿದೆ. ಅಂದು ಕಡಪುರ ಮನೆತನದವರು ಉಳ್ಳಾಯ ದೈವವನ್ನು ಖಂಡಿಗೆ ಬೀಡಿಗೆ ದೋಣಿಯಲ್ಲಿ ಕರೆದುಕೊಂಡು ಹೋದ ಸೇವೆಗಾಗಿ ಇಂದಿಗೂ ಉಳ್ಳಾಯನ ಭಂಡಾರದ ಪೆಟ್ಟಿಗೆಯನ್ನು ದೋಣಿಯಲ್ಲಿ ತರಲಾಗುತ್ತಿದೆ.


ರಾಜಮುದ್ರೆಯುಂಗುರ :
ಸಸಿಹಿತ್ಲು ಗರೋಡಿಗೆ ಅತ್ಯಂತ ಪ್ರಾಚೀನ ಇತಿಹಾಸವಿದ್ದು ಇಲ್ಲಿನ ಗಡಿಪ್ರಧಾನರು ಕಾಂತುಲಕಣ ಯಾನೆ ಪಠೇಲ್ ಮನೆತನದವರಿಗೆ ಬ್ರಿಟಿಷರ ಕಾಲದಲ್ಲಿ ರಾಜಮುದ್ರೆಯುಳ್ಳ ಉಂಗುರ ಸಹಿತ ಗಡಿ ಪಟ್ಟ ಪ್ರದಾನ ಮಾಡಿರುವುದು ತುಳುವ ಇತಿಹಾಸದಲ್ಲಿ ಅಪರೂಪದ ಗೌರವ. ಇತ್ತೀಚೆಗೆ  ಗಡಿಪ್ರಧಾನರು ಕಾಂತು ಲಕಣ ಯಾನೆ ಯಾದವ ಜಿ ಬಂಗೇರ ಇವರು ದೇವರ ಪಾದ ಸೇರಿದ ಸಂದರ್ಭದಲ್ಲಿ ಮುಲ್ಕಿ ಅರಸರ ಪ್ರತಿನಿಧಿ ಮತ್ತು ಜಿಲ್ಲಾಧಿಕಾರಿಗಳ ಪ್ರತಿನಿಧಿಗಳು ಬಂದು ರಾಜಮುದ್ರೆಯುಂಗರ ತೆಗೆಯುವ ವಿಶೇಷ ಸಂಪ್ರದಾಯಕ್ಕೆ ಇಂದಿನ ಪೀಳಿಗೆ ಸಾಕ್ಷಿಯಾಗಿರುವುದು ಉಲ್ಲೇಖನೀಯ.


*ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳ ವಿವರ*
##
ಫೆ. 4 ಬುಧವಾರ ಬೆಳಗ್ಗೆ ನಾಗದೇವರಿಗೆ ತನುತಂಬಿಲ, ಗಣಹೋಮ,ಕಾಂತಾಬಾರೆ ಬೂದಾಬಾರೆ ಭಜಕ ವೇದಿಕೆಯಲ್ಲಿ ಮಹೇಶ್ ಶಾಂತಿ ಇವರಿಂದ ಭಜನಾ ಸಂಕೀರ್ತನೋತ್ಸವಕ್ಕೆ ಚಾಲನೆ. ಮಧ್ಯಾಹ್ನ ಅನ್ನಸಂತರ್ಪಣೆ, ಶಿಲ್ಪಿಗಳಿಂದ ಆಲಯ ಪರಿಗ್ರಹ, ಸಂಜೆ ಗೋಪುರ ಉದ್ಘಾಟನೆ, ಉಳ್ಳಾಯ ಮದಿಪು ಚಾವಡಿಯಲ್ಲಿ ಧರ್ಮಸಭೆ,ಪಂಚದೀಪ ಪ್ರಜ್ವಲನೆ, ಸಾಂಸ್ಕೃತಿಕ ಕಲೋತ್ಸವ ಉದ್ಘಾಟನೆ,  ಕಾಂತುಲಕಣ ಗಡಿಪ್ರದಾನ ಯಾನೆ ದಿ. ಪಟೇಲ ಯಾದವ ಜಿ ಬಂಗೇರ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಸಾರಥಿ ಪುಷ್ಕಳಕುಮಾರ್ ಅವರಿಂದ ” ಉಳ್ಳಾಯನ ಕಾರ್ನಿಕ” ಕಥಾಕೀರ್ತನೆ
ಫೆ.5 ಗುರುವಾರ ಬೆಳಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ದೇವನಾಂದಿ, ಆದ್ರಗಣಯಾಗ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅನ್ನಸಂತರ್ಪಣೆ
ಮಧ್ಯಾಹ್ನ 3 ಗಂಟೆಗೆ ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಿಂದ ಸಸಿಹಿತ್ಲು ಗರೋಡಿಗೆ ಹಸಿರು ಹೊರೆ ಕಾಣಿಕೆ ಮೆರವಣಿಗೆ, ಸಂಜೆ 5 ಗಂಟೆಯಿಂದ ಋತ್ವಿಜರ ಸ್ವಾಗತ, ವಾಸ್ತುಹೋಮಾದಿ ಧಾರ್ಮಿಕ ವಿಧಿಗಳು, ಪ್ರವೇಶ ದ್ವಾರ ಉದ್ಘಾಟನೆ, ಪಂಚ ದೀಪ ಪ್ರಜ್ವಲನೆ,ಉಗ್ರಾಣ ಉದ್ಘಾಟನೆ, ಧಾರ್ಮಿಕ ಸಭೆ, ಧನ್ಯಶ್ರೀ ಭಟ್ ನೇತೃತ್ವದ ಕಲಾರಾಧನಾ ತಂಡ ಹಳೆಯಂಗಡಿ ಇವರಿಂದ ಭರತನಾಟ್ಯ, ಪರಮಪದ್ಮ ಕಲಾವಿದರಿಂದ “ಶಿವ ಪುರ್ಸಾದ ಬಬ್ಬರ್ಯೆ” ತುಳು ನಾಟಕ.
ಫೆ.6 ಶುಕ್ರವಾರ ಸ್ವಸ್ತಿ ಪುಣ್ಯಾಹ ಗಣಹೋಮ, ನವಗ್ರಹ ಶಾಂತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮಹಾಸುದರ್ಶನ ಹೋಮಾದಿ ವೈದಿಕ ವಿಧಿಗಳು, ಶ್ರೀ ಕ್ಷೇತ್ರ ಖಂಡಿಗೆಯಿಂದ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಭಂಡಾರ ಆಗಮನ, ಕಾಂತುಲಕಣ ಗುರಿಕಾರರ ಮನೆಯಿಂದ ಭಂಡಾರ ಆಗಮನ, ಸಂಜೆ ಧರ್ಮಸಭೆ, ತೌಳವ ಸಿರಿ ಸಮರ್ಪಣೆ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅಭಿನಯದ ಲಕುಮಿ ತಂಡದಿಂದ “ಆಂಟೀ ಅಂಕಲ್” ತುಳು ನಾಟಕ,
ಫೆ.7 ಶನಿವಾರ ಬೆಳಗ್ಗೆ ಗಣಹೋಮಾದಿ ವೈದಿಕ ವಿಧಿ, ಧ್ವಜಸ್ತಂಭ ಪ್ರತಿಷ್ಠೆ ಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಮಂಟಪ ಸಂಸ್ಕಾರ, ಕಲಶ ಮಂಡಲ ಪೂಜಾದಿ ವೈದಿಕ ವಿಧಿ, ಧಾರ್ಮಿಕ ಸಭೆ, ಸ್ಥಳೀಯ ಪ್ರತಿಭೆಗಳಿಂದ ಮತ್ತು ಮಹಿಳಾ ಸದಸ್ಯರಿಙದ ನೃತ್ಯ ವೈವಿಧ್ಯ ತುಳುವ ಕಮ್ಮೆನ ರೂಪಕ, ಶ್ರೀ ದುರ್ಗಾ ಕಲಾವಿದರು ಹೊಯಿಗೆಗುಡ್ಡೆ ಇವರಿಂದ ಬಿತ್ತ್‌ಲ್ದ ಉಳ್ಳಾಲ್ದಿ ಅಪ್ಪೆ ಭಗವತಿ ತುಳು ನಾಟಕ

ಫೆ.8 ಆದಿತ್ಯವಾರ ಬ್ರಹ್ಮಕಲಶೋತ್ಸವ ಸಂಭ್ರಮ, ಶಿಖರ ಪ್ರತಿಷ್ಠೆ, 8.30 ರ ಕುಂಭಲಗ್ನದಲ್ಲಿ  ದೈವಗಳ ಪುನರ್ ಪ್ರತಿಷ್ಠೆ , ಬ್ರಹ್ಮಕಲಶಾಭಿಷೇಕ, ಕೊಡಿಯಡಿ ಏರುವುದು, ದೈವದರ್ಶನ, ಧ್ವಜಾರೋಹಣ, ಬ್ರಹ್ಮ ತೀರ್ಥ ವಿತರಣೆ, ಮಹಾ ಅನ್ನಸಂತರ್ಪಣೆ.
ಸಂಜೆ ಸಮಾರೋಪ ಸಭಾ ಕಾರ್ಯಕ್ರಮ, ಸ್ಪೀಕರ್ ಯು.ಟಿ.ಖಾದರ್ ಅವರಿಂದ ಸ್ಮರಣ ಸಂಚಿಕೆ ಬಿಡುಗಡೆ, ಉದ್ಯಮಿ ಯೋಗೀಶ್ ಅಂಚನ್ ಇವರಿಂದ ಗರೋಡಿ ಉದ್ಘಾಟನೆ, ಆರೋಗ್ಯ ಸೇವೆಗೆ ಚಾಲನೆ, ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಹಾಸ್ಯ ಸಂಭ್ರಮ, ಸಾಯಿಶಕ್ತಿ ಕಲಾಬಳಗದವರಿಂದ ಜೋಡು ಜೀಟಿಗೆ ತುಳು ನಾಟಕ.
ಫೆ.9 ಸೋಮವಾರ ನೇಮೋತ್ಸವ ಸಂಭ್ರಮ. ಬೆಳಿಗ್ಗೆ 5 ಗಂಟೆಯಿಂದ ಉಳ್ಳಾಯ ದೈವದ ನೇಮೋತ್ಸವ, ಪರಿವಾರ ದೈವಗಳಿಗೆ ಪಂಚಕಜ್ಜಾಯ ಸೇವೆ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಪದ್ಮನಾಭ ಸಸಿಹಿತ್ಲು ನೇತೃತ್ವದ ಕಲಾ ಸೌರಭ ಮುಂಬೈ ತಂಡದಿಂದ “ಗೀತ ಗಾನಾಮೃತ” ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 3.30 ರಿಂದ ಓಡ್ಯಂತಾಯ ದೈವದ ನೇಮೋತ್ಸವ, ರಾತ್ರಿ 9 ಗಂಟೆಯಿಂದ ಜಾರಂದಾಯ, ಬಂಟ, ಧೂಮಾವತಿ ಬಂಟ, ಕೊಡಮಣಿತ್ತಾಯ, ಕಾಂತೇರಿ ಧೂಮಾವತಿ, ಪಿಲಿಚಾಮುಂಡಿ ದೈವಗಳ ನೇಮ
ಫೆ.10 ಮಂಗಳವಾರ ಬೆಳಗ್ಗೆ 5 ಗಂಟೆಗ್ ಧ್ವಜಾವರೋಹಣ, ಕಾಂತುಲಕಣರ ಮನೆಗೆ ಮತ್ತು ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನ
——

—-++

ಮುಂಬಯಿ ಸಮಿತಿ,

ಗೌರವ ಅಧ್ಯಕ್ಷರಾಗಿಸಿ ಬಿ ಕರ್ಕೆರ . ಅಧ್ಯಕ್ಷರು

ಸತೀಶ್ ಎನ್. ಕೋಟ್ಯಾನ್, ಉಪಾಧ್ಯಕ್ಷರು

ವಿಜಯಕುಮಾರ್ ಪಿ . ಸನಿಲ್, ಶೇಖರ್ ಸಸಿಹಿತ್ಲು, ವಾರಿಜಾ ಎಸ್ ಕರ್ಕೇರ,  ಕಾರ್ಯದರ್ಶಿ ದಿನೇಶ್ ಪಿ ಸಾಲಿಯಾನ್, ಜೊತೆ ಕಾರ್ಯದರ್ಶಿ ಸುರೇಂದ್ರ ಎಸ್ ಬಂಗೇರ, ಕೋಶಾಧಿಕಾರಿ ಗೋಪಾಲ್ ಸುವರ್ಣ, ಜೊತೆ ಕೋಶಾಧಿಕಾರಿ ನಳಿನಿ ಎಸ್. ಸಾಲ್ಯಾನ್ , ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಂದ್ರ ಬಂಗೇರ, ರವೀಂದ್ರ ಶಾಂತಿ,ಆಂತರಿಕ ಲೆಕ್ಕಪರಿಶೋಧಕರು ಭಾಸ್ಕರ್ ಸುವರ್ಣ, ಸಂಚಾಲಕರಾಗಿ ಪದ್ಮನಾಭ ಸಸಿಹಿತ್ತು, ಅಶೋಕ್ ಕುಕ್ಯಾನ್,ಸಾಂಸ್ಕೃತಿಕ ಕಾರ್ಯದರ್ಶಿಚಂದ್ರಕಾಂತ್ ಸಾಲ್ಯಾನ್, ಮಹಿಳಾ ಸಂಚಾಲಕಿ ಸುನೀತ ಸುವರ್ಣ ,ಕಲಾವತಿ ಎಚ್. ಕೋಟ್ಯಾನ್, ಗೌರವ ಸಲಹೆಗಾರರುಗಳಾಗಿಮಂಜುನಾಥ ಆರ್. ಕೋಟ್ಯಾನ್, ಗೋಪಾಲ್ ಪೂಜಾರಿ ಅಂಬರನಾಥ, ಲಕ್ಷ್ಮಣ್ ಪಿ. ಸನಿಲ್, ಶ್ರೀಧರ್ ಅಮೀನ್, ನಾರಾಯಣ ಆರ್. ಸುವರ್ಣ, ಕೇಶವ ಎಸ್. ಅಂಚನ್, ಪುರುಷೋತ್ತಮ ಎಂ. ಪೂಜಾರಿ, ಸುರೇಶ್ ಎನ್. ಕೋಟ್ಯಾನ್, ಪ್ರೇಮಲತಾ ಮನೋಜ್ ನಾಗ್ ಪಾಲ್, ಸುನೀತ್ ಹರೀಶ್ ಪೂಜಾರಿ

______

(ವರದಿ : ಯಶೋಧರ ಕೋಟ್ಯಾನ್ ಸಸಿಹಿತ್ಲು)



Related posts

ಭಜನೆ, ತಬಲಾ, ಹಾರ್ಮೋನಿಯಂ, ಚೆಂಡೆ ಕಲಿಕಾಸಕ್ತರಿಗೆ ಶೀಘ್ರದಲ್ಲಿ ತರಗತಿ ಆರಂಭ.

Mumbai News Desk

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

Mumbai News Desk

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ

Mumbai News Desk

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ

Mumbai News Desk

ಶ್ರೀ ಮಹಾವಿಷ್ಣು ಮಂದಿರದಲ್ಲಿ ಮಾರ್ಚ್ 16 ಶನಿವಾರ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ

Mumbai News Desk

ಸೆ.5 ರಂದು ಅಂಧೇರಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತುಳು ಹರಿಕಥೆಯ ನಾದ ಲಹರಿ

Mumbai News Desk