
ರಂಗಭೂಮಿಯ ಕಿರೀಟ ಮುಡಿಗೇರಿಸಿಕೊಂಡ ಮೀರಾ ರೋಡ್ ಸ್ಥಳೀಯ ಸಮಿತಿ
ಚಿತ್ರ: ಧನಂಜಯ ಪೂಜಾರಿ, ವರದಿ: ವಾಣಿಪ್ರಸಾದ್ ಕರ್ಕೇರ
ಮುಂಬೈ: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಬಿಲ್ಲವರ ಎಸೋಸಿಯೇಷನ್‌ನ ಸಾಂಸ್ಕೃತಿಕ ಉಪಸಮಿತಿಯು ಆಯೋಜಿಸಿದ್ದ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ 2026’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜನವರಿ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ನಡೆದ ಈ ಕಲಾ ಸಂಭ್ರಮದಲ್ಲಿ ವಿವಿಧ ಸ್ಥಳೀಯ ಸಮಿತಿಗಳಿಂದ ಒಟ್ಟು 15 ನಾಟಕಗಳು ಪ್ರದರ್ಶನಗೊಂಡು ಕಲಾಭಿಮಾನಿಗಳ ಮನಸೂರೆಗೊಂಡವು.
ಜ. 26 ರಂದು ಎಸೋಸಿಯೇಷನ್‌ನ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಬಾರಿಯ ಸ್ಪರ್ಧೆಯಲ್ಲಿ ಮೀರಾ ರೋಡ್ ಸ್ಥಳೀಯ ಸಮಿತಿಯು ಪ್ರಥಮ ಸ್ಥಾನ ಅಲಂಕರಿಸಿದರೆ, ಕಾಂದಿವಲಿ ಸಮಿತಿಯು ದ್ವಿತೀಯ ಹಾಗೂ ಡೊಂಬಿವಲಿ ಸಮಿತಿಯು ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಪ್ರಶಸ್ತಿ ವಿಜೇತರ ವಿವರಗಳು:
ಅತ್ಯುತ್ತಮ ನಾಟಕಗಳು:
- ಪ್ರಥಮ: ಬಗ್ಗನ ಭಾಗ್ಯ (ಮೀರಾ ರೋಡ್ ಸಮಿತಿ)
- ದ್ವಿತೀಯ: ದೇಯಕ್ಕನ ದೈವದಿಲ್ಲು (ಕಾಂದಿವಲಿ ಸಮಿತಿ)
- ತೃತೀಯ: ಸಂಸಾರ (ಡೊಂಬಿವಲಿ ಸಮಿತಿ)

| ವಿಭಾಗ | ಪ್ರಥಮ | ದ್ವಿತೀಯ | ತೃತೀಯ |
|---|---|---|---|
| ನಟ | ಸಚಿನ್ ಪೂಜಾರಿ (ಬಗ್ಗನ ಭಾಗ್ಯ) | ಕುಮಾರ್ ಪೂಜಾರಿ (ಎನ್ನಕಥೆ) | ಜಗದೀಶ್ ಜೆ. ಕೋಟ್ಯಾನ್ (ಸಂಸಾರ) |
| ನಟಿ | ಶಿಲ್ಪಾ ಪೂಜಾರಿ (ಬಗ್ಗನ ಭಾಗ್ಯ) | ಪ್ರತಿಮಾ ಬಂಗೇರಾ (ದೇಯಕ್ಕನ ದೈವದಿಲ್ಲು) | ಶ್ರುತಿ ಪೂಜಾರಿ (ಅಮ್ಮೇರ್) |
| ನಿರ್ದೇಶನ | ಅಶೋಕ್ ವಳದೂರು (ಬಗ್ಗನ ಭಾಗ್ಯ) | ಚಂದ್ರಕಾಂತ್ ಸಾಲ್ಯಾನ್ (ದೇಯಕ್ಕನ ದೈವದಿಲ್ಲು) | ನವೀನ್ ಸುವರ್ಣ ಬೆಂಗ್ರೆ (ಸಂಸಾರ) |
| ಪೋಷಕ ನಟ | ತೇಜಸ್ ಪಿ. ಪೂಜಾರಿ (ಸಂಸಾರ) | ನೀಥೇಶ್ ಪೂಜಾರಿ (ದೇಯಕ್ಕನ ದೈವದಿಲ್ಲು) | ಸುಜಾಲ್ ಕೆ. ಕಿರೋಡಿಯನ್ (ಎನ್ನಕಥೆ) |
| ಪೋಷಕ ನಟಿ | ವಿಜಯಾ ಜ್ಯೋತಿ ಸಾಲಿಯಾನ್ (ದೇಯಕ್ಕನ ದೈವದಿಲ್ಲು) | ಶ್ವೇತಾ ಅಮಿನ್ (ಮೋಕ್ಷ) | ಪೂರ್ಣಿಮಾ ಅಮಿನ್ (ಅಮ್ಮೇರ್) |
| ಬಾಲ ನಟ | ಪುನೀತ್ ಜೆ. ಕೋಟ್ಯಾನ್ (ಮೋಕ್ಷ) | ಸಂತೃಪ್ತ್ ಪೂಜಾರಿ (ದೇಯಕ್ಕನ ದೈವದಿಲ್ಲ್) | ನಿಹಾನ್ ಹರೀಶ್ ಕೋಟ್ಯಾನ್ (ಬಲಿ) |
| ಬಾಲ ನಟಿ | ಸರಣ್ಯ ಪೂಜಾರಿ (ಯಕ್ಷನಿಲಯ) | ಸಾನ್ವಿ ಪೂಜಾರಿ (ಅಮ್ಮೆರ್) | ಧ್ರುತಿ ಸುರೇಶ್ ಪೂಜಾರಿ (ಬಲಿ) |

ತಾಂತ್ರಿಕ ವಿಭಾಗ:
- ಸಂಗೀತ: I. ದಿವಾಕರ್ ಕಟೀಲ್ (ಬಗ್ಗನ ಭಾಗ್ಯ), II. ಅರವಿಂದ್ ಪದ್ಮಶಾಲಿ (ಸಂಸಾರ), III. ದಿವಾಕರ ಕಟೀಲ್ (ಸೋಕ್ರೇಟಿಸ್).
- ರಂಗವಿನ್ಯಾಸ: I. ಸುರೇಶ್ ಕೋಟ್ಯಾನ್ (ಬಗ್ಗನ ಭಾಗ್ಯ), II. ಅಶೋಕ್ ಕೋಡ್ಯಾಡ್ಕ (ದೇಯಕ್ಕನ ದೈವದಿಲ್ಲ್), III. ಪಲ್ಲವಿ (ಚಂದ).
- ಬೆಳಕು: I. ಮಹೇಶ್ (ಚಂದ), II. ಲತೇಶ್ ಎಂ. ಪೂಜಾರಿ (ಬಲಿ), III. ಚಂದ್ರಕಾಂತ್ ಸಾಲಿಯಾನ್ (ಸಂಸಾರ).
- ಪ್ರಸಾದನ: I. ಮಂಜುನಾಥ್ ಶೆಟ್ಟಿಗಾರ್ (ದೇಯಕ್ಕನ ದೈವದಿಲ್ಲು), II. ಮಂಜುನಾಥ್ ಶೆಟ್ಟಿಗಾರ್ (ಬಗ್ಗನ ಭಾಗ್ಯ), III. ಮಂಜುನಾಥ್ ಶೆಟ್ಟಿಗಾರ್ (ಬಲಿ).
- ವಸ್ತ್ರವಿನ್ಯಾಸ: I. ಚಂದ್ರಕಾಂತ್ ಸಾಲಿಯಾನ್ (ಬಗ್ಗನ ಭಾಗ್ಯ), II. ಲತಾ ಬಂಗೇರ (ದೇಯಕ್ಕನ ದೈವದಿಲ್ಲು), III. ಅಶೋಕ ಕೊಡ್ಯಾಡ್ಕ (ಬಲಿ).

ತೀರ್ಪುಗಾರರ ಮೆಚ್ಚುಗೆ ಪಡೆದ ವಿಶೇಷ ಪಾತ್ರಗಳು:
- ಪ್ರಿಯಾ. ವಿ. ಅಮೀನ್ (ಶಾಂತಕ್ಕ – ಸಂಸಾರ)
- ರಾಮಚಂದ್ರ ಸಾಲಿಯಾನ್ (ವಾವನ – ಯಕ್ಷ ನಿಲಯ)
- ಭವ್ಯ ಸುರೇಶ್ ಪೂಜಾರಿ (ಅಂಬಿಕಾ – ಬಲಿ)
- ದಿಶಾಶ್ರೀ ಪೂಜಾರಿ (ಸೋನಿ – ಎನ್ನ ಕತೆ ಏರ್ಲ ಎನ್ನಂದಿನ)
- ಪ್ರಜ್ಞ (ರಶ್ಮಿ – ಕಾಜಿ)
- ಕಾವ್ಯ ಉದಯ್ ಬಂಗೇರ (ಶ್ರುತಿ – ಏರೆಗ್ಲಾ ಪನ್ನೋಡ್ಚಿ)
ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮವು ಮುಂಬೈನಲ್ಲಿ ತುಳು ಭಾಷೆ ಮತ್ತು ರಂಗಭೂಮಿಯ ಕಳೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.








