ಬಿಲ್ಲವರ ಅಸೋಸಿಯೇಶನ್‌ನ ಜೊತೆ ಕೋಶಾಧಿಕಾರಿ ಹರಿಶ್ಚಂದ್ರ ಜಿ. ಕುಂದರ್ (67) ದಿನಾಂಕ 28.01.2026ರಂದು ಸಾಯಂಕಾಲ ಅಪಘಾತದಿಂದ ದೈವಾಧೀನರಾದರು.
ಅವರು ಇತ್ತೀಚೆಗೆ ತಾಯ್ನಾಡ ದೈವ ದೇವರ ನೇಮೋತ್ಸವದಲ್ಲಿ ಸಕುಟುಂಬ ಸಮೇತ ಭಾಗಿಯಾಗಿ, ಊರ ಕಂಬಳವನ್ನು ನೋಡಿ, ಶಿವಗಿರಿಯ ಗುರು ಸಾನಿಧ್ಯದಲ್ಲಿ ಉಪಸ್ಥಿತರಿದ್ದು ಮುಂಬಯಿಗೆ ಹಿಂತಿರುಗಿ ಬಂದಿದ್ದರು.
ದಿನಾಂಕ 28ರಂದು ಬಿಲ್ಲವ ಭವನದಲ್ಲಿ ಜೊತೆ ಕೋಶಾಧಿಕಾರಿಯ ಕರ್ತವ್ಯವನ್ನು ಪೂರ್ಣಗೊಳಿಸಿ ಸಾಯಂಕಾಲ ಮನೆಗೆ ಹಿಂತಿರುಗುವ ಸಮಯದಲ್ಲಿ ರಸ್ತೆ ಅಪಘಾತಕ್ಕೀಡಾಗಿ ದುರ್ಮರಣ ಹೊಂದಿದರು.
ಸರಳ, ಸಜ್ಜನ, ಸ್ವಾಭಿಮಾನಿ ವ್ಯಕ್ತಿ ಹರಿಶ್ಚಂದ್ರ ಜಿ. ಕುಂದರ್ ಬಿಲ್ಲವರ ಅಸೋಸಿಯೇಶನ್‌ನ ಜೊತೆ ಕೋಶಾಧಿಕಾರಿಯಾಗಿ, ಅಕ್ಷಯ ಪತ್ರಿಕೆಯ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ವಸಾಯಿ ಗುರುನಾರಾಯಣ ಮಂದಿರ ಆಡಳಿತ ಸಮಿತಿಯ ಪದಾಧಿಕಾರಿಯಾಗಿ, ತುಳು ಲಿಪಿ ಪ್ರಚಾರಕರಾಗಿ, ಅವಿಶ್ರಾಂತ ಸೇವೆ ಸಲ್ಲಿಸಿದವರು. ಅಸೋಸಿಯೇಶನ್‌ನ ಎಲ್ಲಾ ಉಪಸಮಿತಿಗಳ ಕಾರ್ಯಚಟುವಟಿಕೆಗಳ ಯಶಸ್ಸಿಗಾಗಿ ಸಕ್ರಿಯವಾಗಿ ಸಹಕಾರ ಮತ್ತು ಸಲಹೆ ನೀಡುತ್ತಿದ್ದರು.
ಮುಂಬಯಿಯಲ್ಲಿ ಕೆನರಾ ಬ್ಯಾಂಕ್‌ನ ಡಿವಿಜನಲ್ ಮ್ಯಾನೇಜರ್ ಆಗಿ ಸೇವೆ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಮೊಗವೀರ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಬ್ಯಾಂಕ್ ಬೆಳವಣಿಗೆಯಲ್ಲಿ ಸಹಕರಿಸುತ್ತಿದ್ದರು.
ಮೃತರು ಪತ್ನಿ ಮಮತಾ ಹೆಚ್. ಕುಂದರ್, ಎರಡು ಗಂಡು ಮಕ್ಕಳಾದ ಹರ್ಷಿತ್ ಕುಂದರ್ ಮತ್ತು ಆಶಿಶ್ ಕುಂದರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವರು.
ಮೃತರ ಅಂತ್ಯಕ್ರಿಯೆಯಲ್ಲಿ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಗೌ. ಅಧ್ಯಕ್ಷರಾದ ಎಲ್. ವಿ. ಅಮೀನ್, ಉಪಾಧ್ಯಕ್ಷರಾದ ಕೆ. ಸುರೇಶ್ ಕುಮಾರ್, ಪುರುಷೋತ್ತಮ ಎಸ್. ಕೋಟ್ಯಾನ್, ಜಯಂತಿ ವಿ. ಉಳ್ಳಾಲ್, ಗೌ. ಪ್ರ. ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌ. ಪ್ರ. ಕೋಶಾಧಿಕಾರಿ ರವಿ ಎಸ್. ಸನಿಲ್, ಜೊತೆ ಕಾರ್ಯದರ್ಶಿಗಳಾದ ಕೇಶವ ಕೆ. ಕೋಟ್ಯಾನ್, ವಿಶ್ವನಾಥ ತೊನ್ಸೆ, ಯೋಗೀಶ್ ಎನ್ ಪೂಜಾರಿ, ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಕಾರ್ಯದರ್ಶಿ ಸದಾಶಿವ ವೈ ಕೋಟ್ಯಾನ್, ಸಾಂಸ್ಕೃತಿಕ ಉಪಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನಾ, ಗೌ. ಕಾರ್ಯದರ್ಶಿ ಗೋಪಾಲಕೃಷ್ಣ ಕೆಂಚನಕೆರೆ, ಅಸೋಸಿಯೇಶನ್‌ನ ಹಿರಿಯ ಸದಸ್ಯ ಶಂಕರ್ ಡಿ. ಪೂಜಾರಿ, ರಜತ್ ಸುವರ್ಣ, ಸುರೇಶ್ ಅಂಚನ್, ರಾಜೇಶ್ ಜೆ. ಬಂಗೇರ, ಯುವಾಭ್ಯುದಯ ಉಪಸಮಿತಿಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಕಾರ್ಯದರ್ಶಿ ಲತಾ ವಿ. ಬಂಗೇರ, ಉಪಾಧ್ಯಕ್ಷೆ ಭಾರತಿ ಅಂಚನ್, ವಸಾಯಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್, ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್, ವಸಾಯಿ ಸ್ಥಳೀಯ ಕಚೇರಿಯ ಸದಸ್ಯರು ನಲಸೋಪಾರ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಗಣೇಶ್ ವಿ. ಸುವರ್ಣ, ಕಾರ್ಯದರ್ಶಿ ಆನಂದ್ ಸಿ. ಕೋಟ್ಯಾನ್, ಉಪ ಕಾರ್ಯದರ್ಶಿ ಸುಧಾಕರ ಪೂಜಾರಿ, ಚೆಂಬೂರು ಸ್ಥಳೀಯ ಕಚೇರಿಯ ಗೌ. ಕಾರ್ಯಾಧ್ಯಕ್ಷ ನಿತ್ಯಾನಂದ ಎ ಪೂಜಾರಿ, ಕಾರ್ಯಾಧ್ಯಕ್ಷ ಸುಧಾಕರ ಪೂಜಾರಿ, ಕಾರ್ಯದರ್ಶಿ ಸತೀಶ್ ಸಾಲ್ಯಾನ್, ಬೊರಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್ ಅಮೀನ್, ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶ್ರೀಧರ್ ಅಮೀನ್, ಉಪ ಕಾರ್ಯದರ್ಶಿ ಚಂದ್ರಹಾಸ್ ಪಾಲನ್, ಅಂಧೇರಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಶಾಂತಿ, ಭಾಂಡೂಪ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಜನಾರ್ಧನ್ ಆರ್ ಪೂಜಾರಿ, ಮೀಾರಾರೋಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಎಮ್ ಕರ್ಕೇರ, ಥಾಣೆ ಸ್ಥಳೀಯ ಕಚೇರಿಯ ಕೋಶಾಧಿಕಾರಿ ನಾರಾಯಣ ಆರ್. ಪೂಜಾರಿ, ಜೋಗೇಶ್ವರಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸದಾನಂದ ಅಮೀನ್, ಬಿಸಿಐಎ ಯ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ದೇವೇಂದ್ರ ಬಂಗೇರ, ಗಂಗಾಧರ್ ಅಮೀನ್ ಕರ್ನಿರೆ, ಭಾಸ್ಕರ್ ಕರ್ನಿರೆ, ರಿತೇಶ್ ಪೂಜಾರಿ, ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕರಾದ ರಾಜಾ ವಿ. ಸಾಲ್ಯಾನ್, ಕೆ. ಬಿ. ಪೂಜಾರಿ, ಕೆ. ಎಮ್. ಕೋಟ್ಯಾನ್, ದಯಾನಂದ ಪೂಜಾರಿ, ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಭಾಸ್ಕರ್ ಎಲ್. ಸಾಲ್ಯಾನ್, ಮೊಗವೀರ ಬ್ಯಾಂಕ್‌ನ ಸಿಇಒ ಶ್ವೇತಾ ಕಾಂಚನ್, ನಿರ್ದೇಶಕರಾದ ರಮೇಶ್ ಸಾಲ್ಯಾನ್, ಹರೀಶ್ ಶ್ರಿಯಾನ್, ವಿಜಯ ಸಾಲ್ಯಾನ್, ಮುಕೇಶ್ ಬಂಗೇರ, ಉದ್ಯಮಿ ಅಶೋಕ್ ಸಾಲ್ಯಾನ್, ವಸಾಯಿ, ನಾಲಾಸೋಪಾರ ಪರಿಸರದ ಸಂಘ – ಸಂಸ್ಥೆಯ ಪದಾಧಿಕಾರಿಗಳು, ತುಳು-ಕನ್ನಡಿಗರು, ಅಪಾರ ಸಂಖ್ಯೆಯಲ್ಲಿ ಕರ್ನಿರೆ ಗ್ರಾಮಸ್ಥರು, ಕುಟುಂಬ ಸದಸ್ಯರು ಹಾಗೂ ಅವರ ಹಿತೈಷಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಶೋಕ ವ್ಯಕ್ತಪಡಿಸಿದರು ಹಾಗೂ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.




