28 C
Mumbai
September 19, 2026
Mumbai News Kannada
ಮುಂಬಯಿ

ಬಜೆ ಮೊಗವೀರ ಸುವರ್ಣ ಮೂಲಸ್ಥಾನ ಮುಂಬಾಯಿ ಶಾಖೆ: ಶತಮಾನೋತ್ಸವ ಮನವಿ ಪತ್ರ ಬಿಡುಗಡೆ





ಬಜೆ ಮೊಗವೀರ ಸುವರ್ಣ ಮೂಲಸ್ಥಾನ, ಬಜೆ, ಕುಕ್ಕೆ ಹಳ್ಳಿ, ಉಡುಪಿ ಇದರ ಮುಂಬಾಯಿ ಶಾಖೆಯ ಶತಮಾನೋತ್ಸವ ಆಚರಣೆ ನಿಮಿತ್ತ ಮನವಿ ಪತ್ರವನ್ನು ಜೂ 7 ರಂದು ರವಿವಾರ ಅಂಧೇರಿಯ ಮೊಗವೀರ ಭವನದಲ್ಲಿ ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಮಾನಂಪಾಡಿ ಹರೀಶ್ ಕೋಟ್ಯಾನ್ ಅವರು ಬಿಡು ಗಡೆ ಮಾಡಿದರು. ಈ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷರಾದ ಗೋವರ್ಧನ್ ಸುವರ್ಣ ಅವರು ನವಂಬರ್ 15ರಂದು ನಡೆಯಲಿರುವ ಕಾರ್ಯಕ್ರಮದ ಯಶಸ್ವಿಗೆ ಸರ್ವ ಸುವರ್ಣ ಬಂಧುಗಳು ಸಹಕರಿಸಬೇಕೆಂದು ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಅಶೋಕ ಸುವರ್ಣ ಅವರು ಕಾರ್ಯಕ್ರಮದ ವಿವರವನ್ನು ನೀಡಿದರು.
ಶತಮಾನೋತ್ಸವ ಸಮಿತಿಯ ಉಪ ಕಾರ್ಯಧ್ಯಕ್ಷ ಓಂದಾಸ್ ಕಣ್ಣಂಗಾರ್, ದೊಡ್ಡ ಕೊಪ್ಪಲ ಚಂದ್ರಹಾಸ್ ಸಾಲ್ಯಾನ್, ಪೊಲಿಪು ಉಮೇಶ್ ಮೆಂಡನ್, ಕೋಶಾಧಿಕಾರಿ ಧನರಾಜ್ ಕುಂದರ್, ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಗಿರಿಧರ್ ಸುವರ್ಣ, ಶ್ರೀಮತಿ ಇಂದಿರಾ ಮೆಂಡನ್, ಜತೆ ಕೋಶಾಧಿಕಾರಿ ವಾಮನ್ ಸುವರ್ಣ, ಜತೆ ಕಾರ್ಯದರ್ಶಿ ಸದಾಶಿವ ಸುವರ್ಣ, ಕಾರ್ಯಕರ್ತರಾದ ನರೇಶ್ ಕರ್ಕೇರ, ಭೂಪತಿ ಕೋಟ್ಯಾನ್, ಮನೋಜ್ ಕರ್ಕೇರ, ಹೇಮಾ ಪುತ್ರನ್, ಸುಮತಿ ಕುಂದರ್, ಸುರೇಖಾ ಕೋಟ್ಯಾನ್, ಕುಸುಮಾ ರಾಜ್ ಸುವರ್ಣ,ಸತೀಶ್ ಕುಂದರ್, ಸೋಮನಾಥ್ ಸುವರ್ಣ, ಸರೋಜಿನಿ ಸುವರ್ಣ,ದಾಮೋದರ ಕುಂದರ್,ಸತೀಶ್ ಕುಂದರ್, ನಾರಾಯಣ ಪುತ್ರನ್ ಉಪಸ್ಥಿತರಿದ್ದರು.



Related posts

ಕುರುಬರ ಸಂಘ ಮಹಾರಾಷ್ಟ್ರ ವಾರ್ಷಿಕ ಮಹಾಸಭೆ ಹಾಗೂ ಹಳದಿ ಕುಂಕುಮ ಅಚರಣೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತನಿಷ್ ಸಂತೋಷ್ ಪೂಜಾರಿಗೆ ಶೇ.92.60 ಅಂಕ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದಆಷಾಢ ಹಬ್ಬ ಆಚರಣೆ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 80% ಫಲಿತಾಂಶ

Mumbai News Desk

ಎಸ್ ಎಸ್ ಸಿ ಪರೀಕ್ಷೆ: ರಕ್ಷ್ಮಾ ಜಯಂತ್ ಕುಳಾಯಿಗೆ ಶೇ. 99.20 ಅಂಕ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk