32 C
Mumbai
March 7, 2026
Mumbai News Kannada
ತುಳುನಾಡು

ಮೂಲ್ಕಿ: ಪೂಂಜಾ ಚಾರಿಟೇಬಲ್ ಟ್ರಸ್ಟ್‌ನಿಂದ ಅಸಹಾಯಕರಿಗೆ ಚಿಕಿತ್ಸೆಗೆ ನೆರವು





ಮೂಲ್ಕಿ ರಾಮಕೃಷ್ಣ ಪೂಂಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟಿ ಭಾಸ್ಕರ್ ಪೂಂಜಾ ಸಹಕಾರದೊಂದಿಗೆ ಅಸಹಾಯಕರಿಗೆ ಸಹಾಯಹಸ್ತ, ವೈದ್ಯಕೀಯ ಚಿಕಿತ್ಸೆಗೆ ನೆರವು ಸಮಾರಂಭ ಮೂಲ್ಕಿಯ ಕಾರ್ನಾಡ್ ಪೂಂಜಾ ವಿಲ್ಲಾದಲ್ಲಿ ಫೆಬ್ರವರಿ 13 ರಂದು ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿ ಇಂದಿನ ಸಮಾಜ ಸಮಾಜದ ನಡುವಿನ ಸಂಘರ್ಷದಲ್ಲಿ ಮಾನವೀಯ ಮೌಲ್ಯಗಳ ಮೂಲಕ ಸರ್ವ ಧರ್ಮದವರನ್ನು ಒಗ್ಗೂಡಿಸಿ ಪೂಂಜಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಸಹಾಯ ಹಸ್ತ ಕಾರ್ಯಕ್ರಮ ಅಭಿನಂದನೀಯ ಎಂದರು.


ಮುಖ್ಯ ಅತಿಥಿಗಳಾಗಿ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮನಸ್ಸು ಹಾಗೂ ಹೃದಯ ಶ್ರೀಮಂತಿಕೆ ಮೂಲಕ ಕಷ್ಟದಲ್ಲಿರುವವರಿಗೆ ಸಹಕಾರ ಅರ್ಥಪೂರ್ಣ ಕಾರ್ಯಕ್ರಮ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಂಜಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರವಿಂದ ಪೂಂಜಾ ವಹಿಸಿ ಮಾತನಾಡಿ, ಟ್ರಸ್ಟ್ ಬಡವರ ಏಳಿಗೆಗೆ ಶ್ರಮಿಸುತ್ತಿದ್ದು, ನೆರವು ನಿರಂತರವಾಗಿ ನಡೆಯಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಪೂಂಜಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಅಶ್ವಿನಿ ಪೂಂಜಾ, ಅಪೂರ್ವ ಪೂಂಜಾ, ಆದಿತ್ಯ ಪೂಂಜಾ, ಸಂಜನಾ ಆದಿತ್ಯ ಪೂಂಜಾ, ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸುನಿಲ್ ಆಳ್ವ, ಸತೀಶ್ ಅಂಚನ್, ಡಾ. ಹರಿಶ್ಚಂದ್ರ ಎ. ಸಾಲ್ಯಾನ್, ಟ್ರಸ್ಟ್‌ನ ನಿರ್ದೇಶಕರಾದ ಹರ್ಷರಾಜ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಉದಯ್ ಕುಮಾರ್ ಶೆಟ್ಟಿ ಅಧಿಧನ್, ಸುಭಾಷ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಸಂಜೀವ ದೇವಾಡಿಗ, ಹೇಮನಾಥ ಅಮೀನ್ ತೋಕೂರು, ಮಾಜಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಮಂಗಳೂರು, ನವೀನ್ ಶೆಟ್ಟಿ ಪೆರ್ಮಾರ್ ಗುತ್ತು, ಶಶೀಂದ್ರ ಸಾಲ್ಯಾನ್, ನಿಶಾಂತ್ ಶೆಟ್ಟಿ ಕಿಲೆಂಜೂರು, ನಿವೃತ್ತ ಉಪನ್ಯಾಸಕ ವೈ. ಎನ್. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.


ಪೂಂಜಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರವಿಂದ ಪೂಂಜಾ ಸ್ವಾಗತಿಸಿದರು, ಸುನಿಲ್ ಆಳ್ವ ಧನ್ಯವಾದ ಅರ್ಪಿಸಿದರು. ವೈ. ಎನ್. ಸಾಲ್ಯಾನ್ ನಿರೂಪಿಸಿದರು. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ 125 ಮಂದಿಗೆ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ನೀಡಲಾಯಿತು.



Related posts

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Mumbai News Desk

ಉಡುಪಿ : ಮನೆಯಲ್ಲಿ ಅಗ್ನಿ ಅವಘಡ, ಮನೆಯ ಯಜಮಾನ ಮೃತ್ಯು.

Mumbai News Desk

ಉಡುಪಿ ಇಂದ್ರಾಣಿ ನದಿ ಮಾಲಿನ್ಯ ನಿವಾರಣೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ತುರ್ತು ಮನವಿ

Mumbai News Desk

ಹಿರಿಯ ಸಮಾಜ ಬಂಧುಗಳ ನಿಸ್ವಾರ್ಥ ಸೇವೆಯೇ ಸಂಘದ ಬೆಳವಣಿಗೆಗೆ ಅಡಿಪಾಯ – ಮೋಹನ್ ದಾಸ್ ಹೆಜ್ಮಾಡಿ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಸೋತ್ಸವ, ಧಾರ್ಮಿಕ ಸಭೆ;

Mumbai News Desk

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ 50ನೇ ವರ್ಷದ ಸಂಭ್ರಮಾಚರಣೆ

Mumbai News Desk