
ಮುಂಬಯಿ, ಫೆ. 15 – ಶರಣರ ವಚನಗಳನ್ನು ಮಕ್ಕಳ ಮನದಲ್ಲಿ ಮೂಡಿಸಿ ಅವರ ಬದುಕನ್ನು ಉಜ್ವಲಗೊಳಿಸಲು ಬಾಲ್ಯದಿಂದಲೇ ಸಂಸ್ಕಾರಗೊಳಿಸಬೇಕೆಂದು ಡಾ. ಭರತ್ ಕುಮಾರ್ ಪೊಲಿಪು ಅವರು ನುಡಿದರು.

ಬಸವೇಶ್ವರ ಫಿಲಾಸಫಿಕಲ್ ಆ್ಯಂಡ್ ಕಲ್ಬರಲ್ ಸೊಸೈಟಿ ಚೆಂಬೂರು ಇಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಎನ್. ಬಿ. ಸಾವಳಸಂಗರು ಸ್ವಾಗತಗೈದರು. ಹಿರಿಯರಾದ ವಿ. ವಿ. ಬಳಿಗಾರ ಹಾಗೂ ಸಂಸ್ಥೆಯ ಪದಾಧಿಕಾರಿ ಎನ್. ಬಿ. ಸಾವಳಸಂಗ, ಗಿರೀಶ್ ಸಾರವಾಡ ವೀರಭದ್ರಯ್ಯ ಹಮ್ಮಿಗಿಮಠ ದುಂಡೇಶ ಗಲಗಲಿ ಇನ್ನಿತರ ಗಣ್ಯರು ದೀಪ ಪ್ರಜ್ವಲನೆಗೈದರು. ಲಲಿತಾ ಮತ್ತು ಸಂಗಡಿಗರು ಪ್ರಾರ್ಥನೆಗೈದರು.

ವಚನ ಸಂಗೀತಗಾರರಾದ ಗಿರೀಶ್ ಸಾರವಾಡ ಮತ್ತು ವೀರಭದ್ರಯ್ಯ ಹಮ್ಮಿಗಿಮಠ ಇವರಿಂದ ವಚನಸುಧೆ ನಡೆಯಿತು. ಜಗಮಿಸಿದ ಅತಿಥಿಗಳಿಗೆ, ಸಂಗೀತಗಾರರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಬಿ. ಸಾವಳಸಂಗರವರು ಶಾಲು, ಹೂಗುಚ್ಛ ಮತ್ತು ನೆನಪಿನಕಾಣಿಕೆಯನ್ನಿತ್ತು ಸನ್ಮಾನಿಸಿದರು. ಅತಿಥಿಗಳ ಪರಿಚಯವನ್ನು ಲಲಿತಾ ಅಂಗಡಿಯವರು ಗೈದರು. ಅಮರೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಕರಜಗಿಯವರು ವಂದಿಸಿದರು.




