26.3 C
Mumbai
March 7, 2026
Mumbai News Kannada
ಮುಂಬಯಿ

ದಹಿಸರ್ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದಲ್ಲಿ 40ನೇ ವಾರ್ಷಿಕ ಮಹಾಪೂಜಾ ಮಹೋತ್ಸವ (ಬಲಿ ಉತ್ಸವ, ಸಾಧಕರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ)





ಚಿತ್ರ ವರದಿ : ದಿನೇಶ್ ಕುಲಾಲ್ 

 ದಹಿಸರ್, ಫೆ. 15.ದಹಿಸರ್  ಪೂರ್ವ ರಾವಲ್ಪಾಡ, ಗೋಕುಲ್ ನಗರದ ಶನಿ ಮಂದಿರ ಚೌಕ್‌ನಲ್ಲಿ ಕನ್ನಡಿಗರು ಸ್ಥಾಪಿಸಿರುವ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ ( ರಿ. ) ಆಡಳಿತದ ಶ್ರೀ ದುರ್ಗಾಪರಮೇಶ್ವರಿ-ಶ್ರೀ ಶನೀಶ್ವರ ದೇವಸ್ಥಾನದ 4೦ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಫೆ. 14 ಶನಿವಾರದಂದು ಮೊದಲ್ಗೊಂಡು ಫೆ 15 ರ ರವಿವಾರ ಬೆಳಿಗ್ಗೆಯವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ  ವಿಜಯ ಉಪಾಧ್ಯಯ ಹಾಗೂ ಸಹ ಅರ್ಚಕರಾದ ತೇಜಸ್ ಭಟ್ ಇವರ ನೇತೃತ್ವ ದಲ್ಲಿ ಸಾವಿರಾರು ಭಕ್ತರ ಕೂಡುವಿಕೆಯಲ್ಲಿ
ಭಕ್ತಿ ಸಂಭ್ರಮದೊಂದಿಗೆ ನಡೆಯಿತು,

ವಾರ್ಷಿಕ ಪೂಜಾ ಮಹೋತ್ಸವದ ನಿಮಿತ್ತ ಫೆ.14 ರಂದು ಶನಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ ಹಾಗೂ ಶ್ರೀ ಶನಿದೇವರಿಗೆ ನವಕಲಶ ಪ್ರಧಾನ ಹೋಮ, ಶನಿಶಾಂತಿ, ನಾಗದೇವರ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ , ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ ,ಶ್ರೀ ದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸ್ವರ್ಣಾಲಂಕಾರ ಸೇವೆ, ಪಲ್ಲ ಪೂಜೆ, ಮಧ್ಯಾಹ್ನ ಬಾಲಾಜಿ ಅರ್ಥ್ ಮೂವರ್ಸ್ ನ ಮಾಲಕರಾದ ಇ. ಭಾಸ್ಕರ್ ನಾಯ್ಡು ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, ನಡೆಯಿತು,

 ಮಧ್ಯಾಹ್ನ  ಮಂದಿರದ ಸದಸ್ಯರಿಂದ ಭಜನೆ, ಬಳಿಕ ಶ್ರೀ ಶನಿಗ್ರಂಥ ಪಾರಾಯಣ, ಸಂಜೆ  ಕುಂಕುಮಾರ್ಚಣೆ, ಆ ಬಳಿಕ ಬಲಿ ಉತ್ಸವ, ಕಟ್ಟೆ ಪೂಜೆ, ವಿವಿಧ ವೇಷ ಭೂಷಣ ದೊಂದಿಗೆ. ಜರಿಮೇರಿ ದಿನೇಶ್ ಕೋಟ್ಯಾನ್ ಬಳಗದ ವಾದ್ಯ, ಚೆಂಡೆ, ಡೋಲು, ಕುಣಿತ ಭಜನೆಗಳೊಂದಿಗೆ  ಮೆರವಣಿಗೆ, ನಡೆಯಿತು.

ರಾತ್ರಿ ಶ್ರೀ ದೇವರಿಗೆ ವಿಶೇಷ ಪೂಜೆ ನಡೆದ ಬಳಿಕ ದಾನಿಗಳಿಗೆ ಭಕ್ತರಿಗೆ ವಿಶೇಷ ಪ್ರಸಾದವನ್ನು ದೇವಸ್ಥಾನದ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ಪುರೋಹಿತರು
ವಿತರಿಸಿದರು.
ರಾತ್ರಿ ಶ್ರೀ ಕ್ಷೇತ್ರದ ಹೊರ ಅವರಣದಲ್ಲಿ   ಮಲ್ಲಿಕಾ ಶೇಖರ್ ಟಿ.ಪೂಜಾರಿ ಮತ್ತು  ವಿಶಾಲ ಸಂತೋಷ್ ಪೂಜಾರಿ ಹಾಗೂ ಮಕ್ಕಳ ಪ್ರಾಯೋಜಕತ್ವದಲ್ಲಿ
 ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಇದರ ಕಲಾವಿದರಿಂದ ‘ಸಂಪೂರ್ಣ ದೇವಿ ಮಹಾತ್ಮೆ ‘ಪೌರಾಣಿಕ ಯಕ್ಷಗಾನವು ಪ್ರದರ್ಶನ ಫೆಬ್ರವರಿ15ರ ಬೆಳಿಗ್ಗೆ ತನಕ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳು  ಮತ್ತು   ಧಾರ್ಮಿಕ ಸಭಾ ಕಾರ್ಯಕ್ರಮ ಶನಿಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷರಾದ  ಸಂತೋಷ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾತ್ರಿ ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳ ಮತ್ತು ಅರ್ಚಕರ ಉಪಸ್ಥಿತಿಯಲ್ಲಿ ಕ್ಷೇತ್ರದ. ದಾನಿಗಳಾದ ಜಯ ಕೆ ಪೂಜಾರಿ, ದಹಿಸರ್ ಹಾಗು ಸಮಿತಿಯ ಸದಸ್ಯರಾದ   ಪದ್ಮಾವತಿ ಎಸ್.ಶೆಟ್ಟಿ  ಇವರು ದೇವಸ್ಥಾನಕ್ಕೆ ನೀಡಿದ ನಿಸ್ವಾರ್ಥ ಸೇವೆಗಳನ್ನು ಗುರುತಿಸಿ   ಸನ್ಮಾನಿಸಿ ಗೌರವಿಸಲಾಯಿತು .

ರವಿವಾರ ಬೆಳಿಗ್ಗೆ ಸಂಪ್ರೋಕ್ಷಣೆ ಮಹಾಪೂಜೆ, ಮಹಾಮಂತ್ರಾಕ್ಷತೆ ಮತ್ತು ತೀರ್ಥ ಪ್ರಸಾದ ವಿತರಣಾ 
ಜರುಗಿತು.
ಭಕ್ತರಿಗೆ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷ  ಸಂತೋಷ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ  ಜಯರಾಮ ಎನ್. ಮೆಂಡನ್ , ಗೌ.ಕೋಶಾಧಿಕಾರಿ . ದೀಪಕ್ ಪೂಜಾರಿ. ಮಾಜಿ ಅಧ್ಯಕ್ಷರಾದ ಶೇಖರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ  ಸದಸ್ಯರು ಪ್ರಸಾದ ನೀಡಿದರು.



Related posts

ಒಕ್ಕಲಿಗರ ಸಂಘದ ಮಹಾರಾಷ್ಟ್ರ ಪದಾಧಿಕಾರಿಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ, ಮುಂಬೈಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಭರವಸೆ

Mumbai News Desk

9 ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ಚೈತನ್ಯ ಕಲಾವಿದರು ಬೈಲೂರು ತಂಡದಿಂದ ‘ಅಷ್ಟೆಮಿ’ ನಾಟಕ ಪ್ರದರ್ಶನ

Mumbai News Desk

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್ ಸ್ಥಳೀಯ ಕಚೇರಿಯಿಂದ ಅದ್ಧೂರಿ ಸ್ನೇಹ ಸಮ್ಮಿಲನ;

Mumbai News Desk

ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಗೆ ಬೆಳ್ಳಿ ಹೊಳಪು! ರಜತ ಮಹೋತ್ಸವ ಸಂಭ್ರಮ.

Mumbai News Desk