
ತೋನ್ಸೆ ಗರೋಡಿಯ ಕಾಲಾವಧಿ ನೇಮೋತ್ಸವದ ಪ್ರಯುಕ್ತ ದಿನಾಂಕ 26/02/2026ರ ಗುರುವಾರದಂದು ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಗರೋಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಗರೋಡಿಯ ಅರ್ಚಕರಾದ ಸುರೇಶ್ ಅವರು ಪ್ರಾರ್ಥನೆ ಸಲ್ಲಿಸಿ ಬೈದರ್ಕಳರ ಪ್ರಸಾದವನ್ನು ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ತೋನ್ಸೆ ಗರೋಡಿಯ ಸಂಪೂರ್ಣ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಮನವಿ ಪತ್ರವನ್ನು ಗರೋಡಿ ಸಮಿತಿಯ ಪದಾಧಿಕಾರಿಗಳು ಹಸ್ತಾಂತರಿಸಿದರು. ಒಕ್ಕೂಟದ ಅಧ್ಯಕ್ಷರಾದ ಹರೀಶ್ ನಿಡಂಬಳ್ಳಿ, ಪ್ರಧಾನ ಕಾರ್ಯದರ್ಶಿ ವಿಷು ಕುಮಾರ್ ಕಲ್ಯಾಣಪುರ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಂದಕಿಶೋರ್ ಕೆಮ್ಮಣ್ಣು ಅವರು ಈ ಮನವಿಯನ್ನು ಬ್ಯಾಂಕಿನ ಅಧ್ಯಕ್ಷರಿಗೆ ಸಲ್ಲಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಖಜಾಂಚಿ ಸುಭಾಷ್, ಜೀರ್ಣೋದ್ಧಾರ ಖಜಾಂಚಿ ಸಂದೀಪ್ ಶಂಕರ್, ಜೊತೆ ಜೊತೆ ಕಾರ್ಯದರ್ಶಿ ಉದಯ ಕಂಡಾಳ, ರವಿ ತೋನ್ಸೆ, ರವಿ ಹೂಡೆ, ಭಾರತ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ನವೀನ್ ಗುಳಿಬೆಟ್ಟು, ಗುರಿಕಾರರಾದ ಜಯಂತ್, ಸುರೇಶ್ ಅಂಚನ್, ಮಧುಸೂದನ್, ಜನಾರ್ಧನ ತೊಟ್ಟಂ, ರತ್ನಾಕರ ಸಾಲಿಯನ್, ಸತೀಶ್ ಅಂಚನ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮನವಿ ಪತ್ರವನ್ನು ಸ್ವೀಕರಿಸಿದ ಶ್ರೀ ಸೂರ್ಯಕಾಂತ್ ಸುವರ್ಣ ಅವರು ಮಾತನಾಡಿ, ಗರೋಡಿಯ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.




