ಭಾಯಂದರ್ (ಮುಂಬೈ): ಯುವ ಯಕ್ಷಗಾನ ಸಂಘಟಕ ಹಾಗೂ ಯಕ್ಷಗುರು ನಾಗೇಶ್ ಪೊಳಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಯಕ್ಷಪ್ರಿಯ ಬಳಗ ಮೀರಾ ಭಾಯಂದರ್’ ವತಿಯಿಂದ ‘ಯಕ್ಷ ನವಮಿ’ ಸಂಭ್ರಮದ ಅಂಗವಾಗಿ ಮಾ. 1ರ ಭಾನುವಾರ ಸಂಜೆ 4:30ಕ್ಕೆ ಮಹಿಳಾ ಕಲಾವಿದರಿಂದ ‘ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ:
ಭಾಯಂದರ್ ಪೂರ್ವದ ಇಂದ್ರಲೋಕ್ ನಾಕಾ, ವಿಮಲ್ ಡೈರಿ ಲೈನ್‌ನಲ್ಲಿರುವ ಕಲಾವತಿ ಮಂದಿರದ ಸಮೀಪದ ಜಿ-9 ಸ್ಪೋರ್ಟ್ಸ್ ಟರ್ಫ್ ಆ್ಯಂಡ್ ಲಾನ್‌ನಲ್ಲಿ (ಪ್ಲಾಟ್ ನಂ. 212) ಈ ಕಲಾ ವೈಭವ ಜರುಗಲಿದೆ. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಸಾಣೂರು ಸಾಂತಿಂಜ ಜನಾರ್ಧನ ಭಟ್, ಕರ್ನೂರು ಶಂಕರ್ ಆಳ್ವ, ಸಿ.ಎ. ಸುರೇಂದ್ರ ಕೆ. ಶೆಟ್ಟಿ, ಪ್ರಜ್ವಲ್ ಶೆಟ್ಟಿ ಹಾಗೂ ವಸಂತಿ ಎಸ್. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಯಕ್ಷಗಾನಕ್ಕೆ ಚಾಲನೆ ನೀಡಲಿದ್ದಾರೆ.
ಹಿಮ್ಮೇಳ ಮತ್ತು ಮುಮ್ಮೇಳದ ವಿವರ:
ಯಕ್ಷಗಾನದ ಹಿಮ್ಮೇಳದಲ್ಲಿ ಉದಯೋನ್ಮುಖ ಭಾಗವತ ಸಾಯಿನಾಥ್ ಎ. ಶೆಟ್ಟಿ ಮುಂಡ್ಕೂರು ಅವರು ಭಾಗವತಿಕೆ ನಡೆಸಿಕೊಡಲಿದ್ದಾರೆ. ಚೆಂಡೆ-ಮದ್ದಳೆಯಲ್ಲಿ ಸುಬ್ರಮಣ್ಯ ಶಾಸ್ತ್ರಿ ಮಣಿಮುಂಡ, ಹರೀಶ್ ಸಾಲ್ಯಾನ್ ಹಾಗೂ ಪ್ರೀತೇಶ್ ಬಿ. ಮೂಲ್ಯ ಸಹಕರಿಸಲಿದ್ದಾರೆ.
ಕಲಾವಿದರ ತಂಡ:
ವೇದಿಕೆಯಲ್ಲಿ ಸುಂದರಿ ಆರ್. ಕೋಟ್ಯಾನ್, ವಸಂತಿ ಎಸ್. ಶೆಟ್ಟಿ, ಅಮೃತ ಪಿ. ಸಾಲ್ಯಾನ್, ಶುಭಲತ ವಿ. ಶೆಟ್ಟಿ, ರೇಷ್ಮಾ ಎಸ್. ಶೆಟ್ಟಿ, ಶೈಲಜಾ ಎಸ್. ಶೆಟ್ಟಿ, ವೀಣಾಕ್ಷಿ ಎಸ್. ಶೆಟ್ಟಿ, ಲೀಲಾವತಿ ಶೆಟ್ಟಿ, ಶಾಲಿನಿ ಆರ್. ಶೆಟ್ಟಿ, ರಶ್ಮಿ ಎಸ್. ಶೆಟ್ಟಿ, ಉಷಾ ಡಿ. ಶೆಟ್ಟಿ, ಸ್ವಾತಿ ಎಸ್. ಕೋಟ್ಯಾನ್, ವಿಶಾಲಾಕ್ಷಿ ಆ. ಮುಲ್ಕಿ, ಸೀತಾ ಶೆಟ್ಟಿ, ಅನಿತಾ ಯು. ಹೆಗ್ಡೆ, ಮಮತಾ ವಿ. ಭಂಡಾರಿ, ಸುಕನ್ಯಾ ವಿ. ಶೆಟ್ಟಿ, ಗೀತಾ ಜಿ. ನೈಕ್, ಸೌಮ್ಯ ಎಸ್. ಶೆಟ್ಟಿ, ಆಶಾ ಪಿ. ಶೆಟ್ಟಿ, ಆಶಾ ಪಿ. ಹೆಗ್ಡೆ, ಜೇಶಿತ್ ಎಸ್. ಪೂಜಾರಿ, ಪ್ರೀತಮ್ ಪಿ. ಹೆಗ್ಡೆ, ನಿಸರ್ಗ ವಿ. ಶೆಟ್ಟಿ ಹಾಗೂ ಭಾನ್ವಿ ವಿ. ಭಂಡಾರಿ ಅಭಿನಯಿಸಲಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಹಿಳಾ ಕಲಾವಿದರ ಈ ಸಾಹಸಕ್ಕೆ ಪ್ರೋತ್ಸಾಹ ನೀಡಬೇಕೆಂದು ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ಹಾಗೂ ಶಿಷ್ಯವೃಂದದವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




