30.9 C
Mumbai
June 8, 2026
Mumbai News Kannada
ತುಳುನಾಡು

ಉಡುಪಿ ಕಂಬಳ ಶಂಕುಸ್ಥಾಪನೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರು, ಶಾಸಕರು ಸೇರಿ 37 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು





ಉಡುಪಿಯ 80 ಬಡಗುಬೆಟ್ಟು ಗ್ರಾಮದ ಸರ್ಕಾರಿ ಜಮೀನಿನಲ್ಲಿ ಜಿಲ್ಲಾಡಳಿತದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ‘ಉಡುಪಿ ಕಂಬಳ’ದ ಶಂಕುಸ್ಥಾಪನೆ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಸಿದ ಆರೋಪದ ಮೇಲೆ ಸಂಸದರು ಮತ್ತು ಹಲವು ಶಾಸಕರು ಸೇರಿದಂತೆ ಒಟ್ಟು 37 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳಕ್ಕಾಗಿ ಕಾಯ್ದಿರಿಸಲಾದ ಜಾಗದಲ್ಲಿ ಫೆಬ್ರವರಿ 28ರಂದು ಶಂಕುಸ್ಥಾಪನೆ ನಡೆಸಲು ಕಂಬಳ ಸಮಿತಿ ನಿರ್ಧರಿಸಿತ್ತು. ಆದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಅಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಆ ಪ್ರದೇಶದಲ್ಲಿ ಸೆಕ್ಷನ್ 163 BNSS ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಈ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ, ನಿಯಮಗಳನ್ನು ಮೀರಿ ಅಕ್ರಮವಾಗಿ ಗುಂಪು ಸೇರಿ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಉಡುಪಿ ತಹಶೀಲ್ದಾರ್ ಪಿ.ಆರ್. ಗುರುರಾಜ್ ದೂರು ನೀಡಿದ್ದಾರೆ. ಈ ದೂರಿನನ್ವಯ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ರಾಜೇಶ್ ನಾಯ್ಕ ಹಾಗೂ ವಿಧಾನ ಪರಿಷತ್ ಸದಸ್ಯ ಧನಂಜಯ್ ಸರ್ಜಿ ಮತ್ತು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಸೇರಿದಂತೆ ಹಲವರ ಮೇಲೆ ಬಿಎನ್‌ಎಸ್ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಭೂಮಿಯನ್ನು ಸಮತಟ್ಟುಗೊಳಿಸಿದ ಆರೋಪವೂ ಇವರ ಮೇಲಿದೆ.



Related posts

ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಕರ್ನಿರೆ: ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವ ಸಂಪನ್ನ

Mumbai News Desk

ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕರ

Mumbai News Desk

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನೂತನ ಮೊಕ್ತೆಸರರುಗಳು

Mumbai News Desk

ಧಾಖಲೆಯೊಂದಿಗೆ ತಿರುವೈಲು ಕಂಬಳ ಸಂಪನ್ನ: ಮುಂಬೈಯ ಪುರೋಹಿತರಾದ ಪ್ರವೀಣ್ ಭಟ್ ಅವರಿಗೆ ಸನ್ಮಾನ

Mumbai News Desk

ಮುಲ್ಕಿ : ಹರಿಶ್ಚಂದ್ರ ಸಾಲಿಯಾನ್‌ರವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ

Mumbai News Desk