September 6, 2026
Mumbai News Kannada
ತುಳುನಾಡು

ಹೆಜಮಾಡಿ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ





ಹೆಜಮಾಡಿ ಬಿಲ್ಲವ ಸಂಘ (ರಿ ) ಹೆಜಮಾಡಿ,ಗಾಂಧಿನಗರ ಯುವಕ ಯುವತಿ ವ್ರoದ (ರಿ ) ಹೆಜಮಾಡಿ ಕೋಡಿ, ಕೆ. ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಎ. ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ,ನಿಟ್ಟೆ ಮೀನಾಕ್ಷಿ ಹೆಗ್ಡೆ ಆರೋಗ್ಯ ಕೇಂದ್ರ ಹೆಜಮಾಡಿ ಕೋಡಿ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರವು ಹೆಜಮಾಡಿ ಬಿಲ್ಲವ ಸಂಘದಲ್ಲಿ ಜರಗಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ವಹಿಸಿದ್ದರು.
ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಶ್ವರ ದಯಾನಂದ ಹೆಜಮಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಅರುಣ್ ಕೊಪ್ಪಲ, ಗಾಂಧಿ ನಗರ ಯುವಕ ವ್ರoದದ ಅಧ್ಯಕ್ಷ ಚಂದ್ರಶೇಖರ ಸುವರ್ಣ, , ಹೆಜಮಾಡಿ ಯ ಧಾರ್ಮಿಕ ಮುಖಂಡ ಮಾಧವ ಸನಿಲ್, ಹೆಜಮಾಡಿ ಗ್ರಾ. ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ವಿವಿಧ ವಿಭಾಗದ ವೈದ್ಯರು ಗಳಾದ ಡಾI ರಾಘವೇಂದ್ರ, ಡಾ. ರೋಹಿತ್ ಹೊಳ್ಳ, ಡಾ. ಗುರುಸಂದೇಶ್, ಡಾ. ಸೋನಿತ್, ಡಾ.ರಕ್ಷಿತ್, ಡಾ. ವೈಷ್ಣವಿ , ಇವರುಗಳು ಉಪಸ್ಥಿತರಿದ್ದರು.

ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ ವಂದಿಸಿದರು, ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು

ಈ ಶಿಬಿರದಲ್ಲಿ ಕಿವಿ ಮೂಗು ಗಂಟಲು, ಕಣ್ಣು, ಚರ್ಮರೋಗ, ಎಲುಬು ಕೀಲು, ಸ್ತ್ರೀ ರೋಗ, ದಂತ ಪರೀಕ್ಷೆ ಮತ್ತು ಚಿಕಿತ್ಸಾ ವಿಭಾಗಗಳಲ್ಲಿ ನುರಿತ ವೈದ್ಯರು ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿ ಔಷದಿಯನ್ನು ಉಚಿತ ವಾಗಿ ವಿತರಿಸಲಾಯಿತು ಹಾಗೂ ಅಗತ್ಯ ಇರುವವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಹೆಜಮಾಡಿ ಸುತ್ತಮುತ್ತಲಿನ ಸುಮಾರು 500 ಕ್ಕೂ ಮಿಕ್ಕಿ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದರು.



Related posts

ನಾಡಿನ ಸಂಸ್ಕೃತಿ ಉಳಿಸುವಲ್ಲಿ ಕಟೀಲು ಕ್ಷೇತ್ರದ ಪಾತ್ರ ಅನನ್ಯ: ಸಚಿವ ಯು. ಟಿ. ಖಾದರ್ (೨೬ನೇ ವರ್ಷದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ)

Mumbai News Desk

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ, ಅ. 29ರ ತನಕ ಸ್ವರ್ಣ ಸಮರ್ಪಣೆಗೆ ಭಕ್ತರಿಗೆ ಅವಕಾಶ

Mumbai News Desk

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*

Mumbai News Desk

ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರಿಗೆ ಸನ್ಮಾನ

Mumbai News Desk

ಸುರತ್ಕಲ್ ಬಂಟರ ಸಂಘದಲ್ಲಿ “ಆಟಿದ ಪೊರ್ಲು” ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Mumbai News Desk

ಉಡುಪಿ ಕಂಬಳ ಶಂಕುಸ್ಥಾಪನೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರು, ಶಾಸಕರು ಸೇರಿ 37 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

Mumbai News Desk