32 C
Mumbai
October 4, 2026
Mumbai News Kannada
ತುಳುನಾಡು

ಸಂಸ್ಕೃತಿಯ ಬೇರು, ಕೃಷಿಯ ಚಿಗುರು: ಉಡುಪಿಯಲ್ಲಿ ಕೃಷಿಯತ್ತ ಯುವಜನರನ್ನು ಆಕರ್ಷಿಸಲು ನಡೆದ ‘ಕೆಸರುದ ಗಮ್ಮತ್ತು’ , ಕೃಷಿ ಕ್ರೀಡಾಕೂಟ ಯಶಸ್ವಿ ಸಂಪನ್ನ



ಉಡುಪಿ: ಯುವಜನತೆ ಕೃಷಿಯಿಂದ ದೂರ ಸರಿಯುತ್ತಿರುವ ಇಂದಿನ ಸಂದರ್ಭದಲ್ಲಿ ಕೃಷಿಯ ಮಹತ್ವವನ್ನು ತಿಳಿಸುವುದರೊಂದಿಗೆ ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ತೆಂಕನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟು ಬೈಲು ಗದ್ದೆಯಲ್ಲಿ ಗದ್ದೆಯಲ್ಲಿ ಕಾಂಗ್ರೆಸ್ ಮುಖಂಡರ ವತಿಯಿಂದ ‘ಕೆಸರುದ ಗಮ್ಮತ್ತು’ ಕೃಷಿ ಕ್ರೀಡಾಕೂಟವನ್ನು ಆಗಸ್ಟ್ 16, /8/ 2026 ಭಾನುವಾರದಂದು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕರಾವಳಿ ಅಭಿವೃದ್ಧಿ ಮಂಡಳಿ, ಮಂಗಳೂರಿನ ಅಧ್ಯಕ್ಷರಾದ ಎಂ.ಎ. ಗಪೂರ್ ಅವರು ಗದ್ದೆಯಲ್ಲಿ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೃಷಿ ಕೇವಲ ಜೀವನೋಪಾಯದ ಮಾರ್ಗವಲ್ಲ; ಅದು ನಮ್ಮ ಬದುಕು, ಸಂಸ್ಕೃತಿ ಮತ್ತು ಪರಿಸರದೊಂದಿಗೆ ಬೆಸೆದುಕೊಂಡಿರುವ ಮಹತ್ವದ ಕ್ಷೇತ್ರವಾಗಿದೆ. ಕೃಷಿಯಿಂದ ಯುವಜನತೆ ದೂರವಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಯುವ ಸಮುದಾಯದಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಪ್ರೇರಣೆಯಾಗಬೇಕು. ಸಮಾನ ಮನಸ್ಕರ ಸಂಘಟನೆಗಳ ಮೂಲಕ ಸಮಾಜ ಸೇವೆಯ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ತೆಂಕನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟು ಗದ್ದೆಯಲ್ಲಿ ನಡೆದ ‘ಕೆಸರುದ ಗಮ್ಮತ್ತು’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಆರೋಗ್ಯದ ದೃಷ್ಟಿಯಿಂದಲೂ ಹಲವು ಪ್ರಯೋಜನಗಳಿವೆ ಎಂದು ತಿಳಿಸಿದರು. ಕೃಷಿಯ ಮಹತ್ವ ಹಾಗೂ ರೈತರ ಶ್ರಮದ ಬಗ್ಗೆ ನೆರೆದಿದ್ದವರಿಗೆ ಅರಿವು ಮೂಡಿಸಿದರು.

ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಪ್ರಸಾದ್ ರಾಜ್ ಕಾಂಚನ್ ಉದ್ಯಮಿ ಹಾಗೂ ಹರಿಪ್ರಸಾದ್ ರೈ ಅವರು ಸಂದರ್ಭೋಚಿತವಾಗಿ ಮಾತನಾಡಿ ಕೃಷಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ ಶೆಟ್ಟಿ, ಮಮತಾ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಕೆಳಾರ್ಕಳ ಬೆಟ್ಟುವಿನ ಶ್ರೀದೇವಿ ಭೂದೇವಿ ಸಹಿತ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಸದಾನಂದ ನಾಯ್ಕ್ ಸ್ವರ್ಣ ಜಾವೆಲಾರ್ಸನ ಗುಜ್ಜಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆಸರುದ ಗಮ್ಮತ್ತು ಕಾರ್ಯಕ್ರಮವು ನಡೆಯುತ್ತಿರುವ ಸ್ಥಳ ಹಾಗೂ ಅದರ ಹಿನ್ನೆಲೆಯನ್ನು ಕ್ರಮಬದ್ಧವಾಗಿ ದಾಖಲಿಸುವಂತೆ ಸದಾನಂದ ನಾಯ್ಕ್ ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಖ್ಯಾತ ಶೆಟ್ಟಿ ಬಡಾಮನೆ ಬೆಲ್ಕಳೆ, ಸತೀಶ್ ಶೆಟ್ಟಿ ಕೆಳಾರ್ಕಳ ಬೆಟ್ಟು, ಪಿ. ಅಬೂಬಕರ್, ಗೋಪಾಲ್ ಪೂಜಾರಿ, ದಯಾನಂದ ಆಚಾರ್ಯ, ಪ್ರಕಾಶ್, ಶಂಕರ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಇಬ್ಬರು ಯುವತಿಯರಿಂದ ಪ್ರಾರ್ಥನೆ ನಡೆಯಿತು. ಬಳಿಕ ಗ್ರಾಮೀಣ ಕಾಂಗ್ರೆಸ್ ತೆಂಕನಿಡಿಯೂರು ಅಧ್ಯಕ್ಷರಾದ ಸತೀಶ್ ನಾಯ್ಕ್ ಅವರು ಮೆರವಣಿಗೆಯಲ್ಲಿ ಆಗಮಿಸಿದ ಕೋಣಗಳನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು.

ತೇಜಸ್ ಬಂಗೇರ ಅವರು ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು, ಸಮಾಜ ಸೇವಕರು ಹಾಗೂ ಆಶಾ ಕಾರ್ಯಕರ್ತೆಯರ ಪರಿಚಯವನ್ನು ನೀಡಿ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲದೆ, ಕೆಸರು ಗದ್ದೆಯ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳ ಪಟ್ಟಿಯನ್ನು ವಾಚಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.

ಸುರೇಶ್ ನಾಯ್ಕ್ ಮತ್ತು ತೇಜಸ್ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು.

ಕೆಸರುದ ಗಮ್ಮತ್ತು ಕೃಷಿ ಕ್ರೀಡಾಕೂಟದ ಯಶಸ್ಸಿಗೆ ಪ್ರಭಾಕರ್ ಬಿ. ಅಂಚನ್, ಸತೀಶ್ ಪಿ. ಪೂಜಾರಿ, ಶರತ್ ಶೆಟ್ಟಿ, ಮಂಜುನಾಥ್ ಆಚಾರ್ಯ, ರಾಜೇಶ್ ಕರ್ಕೆರ, ರವಿ ಲಕ್ಷ್ಮೀನಗರ, ಅನೂಷ, ವಿನಯ ಆಚಾರ್ಯ, ರವಿ ಪೂಜಾರಿ, ನೆಲ್ಸನ್ ಮಾಸ್ಕರೆಣ್ಣಾಸ್ ಸೇರಿದಂತೆ ಹಲವರು ಶ್ರಮಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಪ್ರಖ್ಯಾತ ಶೆಟ್ಟಿ ಅವರು ವಂದಿಸಿದರು.

– ಜಯ ಸಿ. ಪೂಜಾರಿ
ಕೆಳಾರ್ಕಳ ಬೆಟ್ಟು



Related posts

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ

Mumbai News Desk

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ

Mumbai News Desk

ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವ : ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ

Mumbai News Desk

ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ) ತೊಕ್ಕೊಟ್ಟು ಅಭಿನಂದನೆ ಬೊಕ್ಕ ಗುರು ಪೂರ್ಣಿಮೆ ಲೇಸ್

Mumbai News Desk

ಮುಲ್ಕಿ : ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರಿಗೆ ಸನ್ಮಾನ

Mumbai News Desk

Grand Thayankett Mahotsav, celebrated at Uppala Thurthi, Mahamalaraya Temple

Mumbai News Desk