28 C
Mumbai
September 27, 2026
Mumbai News Kannada
ತುಳುನಾಡು

ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ  ಕ್ರಿಕೆಟ್ ಪಂದ್ಯಾಕೂಟ : ಶಾಲೆಗೆ ರೂಪಾಯಿ 1,67,875/ ಹಸ್ತಾಂತರ.



 ಉಡುಪಿ :ಇನ್ನಂಜೆ ಫ್ರೆಂಡ್ಸ್ ಇನ್ನಂಜೆ ಇವರ ಆಶ್ರಯದಲ್ಲಿ ಹಳೆ ವಿದ್ಯಾರ್ಥಿ ಹಾಗೂ ದಾನಿಗಳ ಸಹಕಾರದಲ್ಲಿ ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಇನ್ನಂಜೆ ಮೈದಾನದಲ್ಲಿ ಇನ್ನಂಜೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಿ, ಅದರಲ್ಲಿ ಉಳಿದ ಮೊತ್ತ 1,67,875 ವನ್ನು ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ್ ಉಪಾಧ್ಯಾಯ, ದೈಹಿಕ ಶಿಕ್ಷಕರಾದ ನವೀನ್ ಶೆಟ್ಟಿ, ಅಧ್ಯಾಪಕಿಯಾದ ಶಶಿಕಲಾ ಆಚಾರ್ಯ ಇವರಿಗೆ ಹಸ್ತಾಂತರಿಸಲಾಯಿತು. 

   ಈ ಸಂದರ್ಭದಲ್ಲಿ ಇನ್ನಂಜೆ ಫ್ರೆಂಡ್ಸ್  ಇದರ ಸದಸ್ಯರುಗಳಾದ ದಿವೇಶ್ ಶೆಟ್ಟಿ, ರಾಜೇಶ್ ಕುಲಾಲ್,ಅನಿರುದ್ಧ, ಪ್ರಶಾಂತ್ ಆಚಾರ್ಯ, ವಿಕೇಶ್ ಶೆಟ್ಟಿ, ನಾಗೇಶ್ ಆಚಾರ್ಯ, ಪ್ರಥಮ್ ಆಚಾರ್ಯ, ನಿತೇಶ್ ಆಚಾರ್ಯ, ಸಚಿನ್ ಅಮೀನ್, ಪವನ್ ಕುಲಾಲ್, ಸಂದೀಪ್ ಅಜೀಲಕಾಡು, ಸಂದೀಪ್ ಆಚಾರ್ಯ,ಗಣೇಶ್ ಆಚಾರ್ಯ , ರವಿ ಪ್ರಸಾದ್, ನೀಲೇಶ್ ಶೆಟ್ಟಿ, ಕೃಷ್ಣ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು..

2025-26 ಸಾಲಿನ ಇನ್ನಂಜೆ ಶಾಲೆಯ 10ನೇ ತರಗತಿ ಫಲಿತಾಂಶ ಕನ್ನಡ ಮಾಧ್ಯಮ ಮತ್ತು ಆಂಗ್ಲಮಾಧ್ಯಮ ಶೇಕಡಾ 100 ಫಲಿತಾಂಶ ಲಭಿಸಿದೆ. 
ಈ ಸಂದರ್ಭದಲ್ಲಿ ಮಾತನಾಡಿದ 
ಇನ್ನಂಜೆ ಫ್ರೆಂಡ್ಸ್ ದಿವೇಶ್ ಶೆಟ್ಟಿ ಒಂದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಊರ ಪರ – ಊರ ದಾನಿಗಳಿಗೆ, ನಮ್ಮನ್ನು ಪ್ರೋತ್ಸಾಹಿಸಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ, ಕಾರ್ಯಕ್ರಮದ ಯಶಸ್ಸಿಗೆ ಬೆನ್ನುಲುಬಾದಂತಹ ನನ್ನೆಲ್ಲಾ ಸಂಘಟಕ ಮಿತ್ರರಿಗೆ, ಶಿಸ್ತುಬದ್ಧವಾಗಿ ಹಾಗೂ ಸಂಯಮದಿಂದ ವರ್ತಿಸಿದ ಕ್ರೀಡಾಪಟುಗಳಿಗೆ, ಕ್ರೀಡಾಭಿಮಾನಿಗಳಿಗೆ , ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸಿದರು.



Related posts

ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವ : ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ

Mumbai News Desk

ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಹಾಗೂ ಸಾಧಕರ ಗೌರವಾರ್ಪಣೆ: ಕಾರ್ಮಿಕರು ಶ್ರಮ ಮತ್ತು ಪರೋಪಕಾರಿ ಜೀವನದ ನಿಜವಾದ ಸಾಧಕರು – ಡಾ.ಹರಿಕೃಷ್ಣ ಪುನರೂರು

Mumbai News Desk

ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ : ಕಾಪು ಬಂಟರ ಸಂಘದಿಂದ ಸನ್ಮಾನ

Mumbai News Desk

ಕೋಡಿಕಲ್‌ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್ ಆಯ್ಕೆ

Mumbai News Desk

ಉಡುಪಿ : ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

Mumbai News Desk

ಹೆಜಮಾಡಿ ಮಹಿಳಾ ಮಂಡಳಿಯಿಂದ ಸಂಭ್ರಮದ ‘ಆಟಿಡೊಂಜಿ ದಿನ’ ಆಚರಣೆ

Mumbai News Desk