
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯ ಮಂತ್ರಿ ದಿ ಡಿ. ದೇವರಾಜ್ ಅರಸು ರವರ ಜನ್ಮದಿನಾಚರಣೆ ಮತ್ತು ಪರಿಶಿಷ್ಟ ಪಂಗಡದ ಇಬ್ಬರು ಪಿ.ಹೆಚ್.ಡಿ ಪದವಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ಆ. 20 ರಂದು ಉಡುಪಿ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಜರಗಿತು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು ಸಂಘಟನೆಯ ಜಿಲ್ಲಾ ಸಂಯೋಜಕರಾದ ಆನಂದ ಪೂಜಾರಿ ಕೊಡೇರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಉಡುಪಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಇಬ್ಬರು ಗಣ್ಯ ನಾಯಕರಿಗೆ ದೀಪ ಬೆಳಗಿ, ಪುಷ್ಪ ನಮನ ಸಲ್ಲಿಸಿದರು.
ಖ್ಯಾತ ವಾಗ್ಮಿ ಗಣನಾಥ್ ಎಕ್ಕರ್ ಅವರು ಇಬ್ಬರು ನಾಯಕರ ಸಾಧನೆಯ ಬಗ್ಗೆ ಮಾತನಾಡುತ್ತ ಹಿಂದುಳಿದ ವರ್ಗದವರಿಗಾಗಿ ದೇವರಾಜ್ ಅರಸುರವರ ಕಾರ್ಯಕ್ರಮ, ಉಳುವನೇ ಭೂಮಿ ಒಡೆಯ 20 ಅಂಶ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ, ಹಾಗೆ ಹಲವಾರು ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಿದ ನಾಯಕ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ವ್ಯವಸ್ಥೆ, 18 ವರ್ಷದವರಿಗೆ ಮತದಾನದ ಹಕ್ಕು, ಮಾಹಿತಿ ತಂತ್ರಜ್ಞಾನ ಯೋಜನೆ, ಒಟ್ಟಾರೆ 21ನೇ ಶತಮಾನದಲ್ಲಿ ಭಾರತದ ಪ್ರಗತಿಯ ಮುಂದಾಲೋಚನೆಯ ವಿಶೇಷವಾದ ಕಾಳಜಿಯ ಮೂಲಕ ಯಶಸ್ವಿ ನಾಯಕರಾಗಿ ಜನಮಾನಸದಲ್ಲಿ ಇಂದಿಗೂ ನೆಲೆ ನಿಂತ ರಾಜೀವ್ ಗಾಂಧಿಯವರು, ಶಾಂತಿ, ಸದ್ಭಾವನೆಗಾಗಿ ಶ್ರಮಿಸಿ, ಉಗ್ರರ ಮಾನವ ಬಾಂಬ್‌ಗೆ ಬಲಿಯಾದರು.
ಇಂತಹ ಇಬ್ಬರು ಮಹಾನ್ ನಾಯಕರ ಜನ್ಮ ದಿನಾಚರಣೆ ಜಿಲ್ಲಾ ಮಟ್ಟದಲ್ಲಿ ಮಾತ್ರ ಸಾಲದು ಗ್ರಾಮ ಗ್ರಾಮದಲ್ಲೂ ಆಚರಣೆ ಆಗಬೇಕು, ಯುವ ಜನತೆಗೆ ಕೊಟ್ಟ ಕಾರ್ಯಕ್ರಮ ತಿಳಿಸುವ ಕೆಲಸ ಆಗಬೇಕು ಎಂದರು.
ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಇಬ್ವರು ಪಿ.ಹೆಚ್.ಡಿ ಸಾಧಕರಾದ ನಾಲೆಜ್ ಮ್ಯಾನೇಜ್ಮೆಂಟ್ ಪಾಲಿಸಿಸ್ ಆ್ಯಂಡ್ ಪ್ರಾಕ್ಟೀಸಸ್ ಎ ಸ್ಟಡಿ ವಿಥ್ ರೆಪರೆನ್ಸ್ ಟು ಕಂಪ್ಯೂಟರ್ ಸಾಫ್ಟ್ವೇರ್ ಆ್ಯಂಡ್ ಸರ್ವಿಸ್ಸ್ ಇನ್ ಕರ್ನಾಟಕ ಎಂಬ ಪ್ರಬಂಧ ಮಂಡಿಸಿ ಪಿ.ಹೆಚ್.ಡಿ ಪಡೆದ ಡಾ.ಶ್ರೀ ದಿನಕರ ಕೆಂಜೂರು, ಮತ್ತು A study on hospital Anxiety and Psycho -Social status of Women undergoing Chemotheraphy for blood cancer. ಎನ್ನುವ ಮಹಾ ಪ್ರಬಂಧ ಮಂಡಿಸಿ ಪಿ.ಹೆಚ್.ಡಿ ಪದವಿ ಪಡೆದ ಡಾ. ಕುಮಾರಿ ಅಶ್ವಿತಾ ರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿನಕರ ರವರು ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸುರವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಮ್ಮನ್ನು ಕರೆದು ಗೌರವಿಸಿ ಪ್ರೋತ್ಸಾಹ ನೀಡಿದಕ್ಕೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗೆ ಕೃತಜ್ಞತೆ ಸಲ್ಲಿಸುತ್ತಾ, ವಿದ್ಯೆಗೆ ಬಹಳ ಕಷ್ಟ ಪಡುವ ಸಮುದಾಯದಲ್ಲಿ ಜನಿಸಿ ಇಲ್ಲಿಯವರೆಗಿನ ಸಾಧನೆ ಮಾಡುವಲ್ಲಿ ಅನುಭವಿಸಿದ ಕಷ್ಟದ ದಿನಗಳು, ಸಾಧನೆಯ ಸಂಭ್ರಮ ಹಾಗೆ ಸಮುದಾಯಕ್ಕೆ ಸರಕಾರ ಮಾಡಬೇಕಾದ ಯೋಜನೆಗಳ ಬಗ್ಗೆ ತಿಳಿಸಿದರು.
ಇನ್ನೊರ್ವ ಅಭಿನಂದಿತೆ ಡಾ. ಕುಮಾರಿ ಅಶ್ವಿತಾ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಕ್ಯಾನ್ಸರ್ ರೋಗ ಪೀಡಿತರ ಸಮಸ್ಯೆ, ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ, ಅನುಭವಿಸುವ ನೋವು ವಿವರಿಸುತ್ತಾ ಸರಕಾರ ಕ್ಯಾನ್ಸರ್ ಪೀಡಿತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವಲ್ಲಿ ಯೋಜನೆ ರೂಪಿಸುವಲ್ಲಿ ನಮ್ಮೆಲ್ಲ ನಾಯಕರು ಮುತುವರ್ಜಿ ವಹಿಸಿ ಕಾರ್ಯಗತ ಗೊಳಿಸಿದರೆ, ನೂರಾರು ಕುಟುಂಬಗಳು ನೆಮ್ಮದಿಯ ದಿನಗಳನ್ನು ನೋಡಬಹುದು ಈ ನಿಟ್ಟಿನಲ್ಲಿ ಪ್ರಯತ್ನ ಆಗಲಿ ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೆ ಅತೀ ಕಡಿಮೆ ಜನಸಂಖ್ಯೆ ಇರುವ ನಮ್ಮ ಸಮುದಾಯದ ಯುವ ಜನತೆ ಕಷ್ಟ ಪಟ್ಟು ಉನ್ನತ ವ್ಯಾಸಂಗ ಮಾಡಿದರು ಸೂಕ್ತ ಉದ್ಯೋಗ ಇಲ್ಲದೆ ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಸರಕಾರ ಈ ಬಗ್ಗೆ ಸೂಕ್ತ ಉದ್ಯೋಗ ದೊರಕಿಸಿ ಕೊಡುವಲ್ಲಿ ನಮ್ಮ ಇಲ್ಲಿರುವ ನಾಯಕರು ಸರಕಾರದ ಮುಂದೆ ಈ ವಿಷಯ ಪ್ರಸ್ತಾಪ ಮಾಡಿ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಮಾತನಾಡುತ್ತ ನಾನು ಜಿಲ್ಲಾ ಅಧ್ಯಕ್ಷನಾದ ಬಳಿಕ ಒಂದು ವರ್ಷದಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಎಲ್ಲಾ ಮುಂಚೂಣಿ ಸಂಘಟನೆಗಳಿಗೆ ಹಂಚಿ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದ್ದೇನೆ, ಅದರಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯವರು ಈ ಮಹಾನ್ ನಾಯಕರ ಜನ್ಮ ದಿನದಂದು ಇಬ್ಬರು ಪಿ.ಹೆಚ್.ಡಿ ಪದವೀಧರರ ಸನ್ಮಾನ ಮಾಡಿರುವಂತೆ ಪ್ರತಿವರ್ಷ ವಿಶೇಷವಾದ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿರುವುದು ಸಂತೋಷ, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಕೊರಗ ಸಮುದಾಯ ನಮ್ಮ ಎರಡು ಜಿಲ್ಲೆಗಳಲ್ಲಿ ಬಹಳ ಕಡಿಮೆ ಜನಸಂಖ್ಯೆ ಇರುವ ಸಮುದಾಯ ಈ ಸಮುದಾಯಕ್ಕೆ ಸೂಕ್ತ ಉದ್ಯೋಗ ನಾಯ್ಯಯುತವಾಗಿ ದೊರಕಬೇಕಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಮ್. ಎ. ಗಫುರ್, ಜಿಲ್ಲಾ ಕಾಂಗ್ರೇಸ್ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ, ಕೆಪಿಸಿಸಿ ಸದಸ್ಯರಾದ ವೇರೋನಿಕಾ ಕರ್ನಲಿಯೋ, ಹರಿಪ್ರಸಾದ್ ರೈ, ಉಡುಪಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಿಣಿ, ಹಿರಿಯ ನಾಯಕರಾದ ನಾಗೇಶ್ ಕುಮಾರ್ ಉದ್ಯಾವರ, ನರಸಿಂಹ ಮೂರ್ತಿ, ಮಹಾಬಲ ಕುಂದರ್, ಎಸ್‌ಸಿ ಘಟಕದ ಜಯ್ ಕುಮಾರ್,ವಿಜಯ್ ಕೊಡವೂರ್,ಮಹಿಳಾ ಪ್ರಮುಖರಾದ ಗೀತಾ ವಾಗ್ಲೆ, ಮೀನುಗರಿಕಾ ಘಟಕದ ಜಿಲ್ಲಾಧ್ಯಕ್ಷರಾದ ನಿರೀಕ್ಷಾ ಮೆಂಡನ್, ಮೀನಾಕ್ಷಿ ಮಾಧವ ಬನ್ನಂಜೆ, RGPRS ಇದರ ಜಿಲ್ಲಾ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಮೃತಾ ಯು. ಪೂಜಾರಿ, ಶ್ರೀ ಸುರೇಶ ಶೆಟ್ಟಿ ಬನ್ನಂಜೆ, ಸೀಮಾ, ಜ್ಯೋತಿ ಮೆನನ್, ರೋಷನ್ ಬ್ಯಾರೆಟ್ಟೋ, ಅಬ್ರಹಾಂ, ನಥಾಲಿಯ, ಜಾನಕಿ ಬಿಲ್ಲವ, ಲವೀನಾ, ನಾಗಮ್ಮ ಬೈಂದೂರು ಮತ್ತು ಮಾಲತಿ ಉಪಸ್ಥಿತರಿದ್ದರು.
ಶಾಂತಿ ಪಿರೇರಾ ಮತ್ತು ಸತೀಶ್ ಜಪ್ತಿ ಸನ್ಮಾನಿತರನ್ನು ಪರಿಚಯಿಸಿದರು. ಲಿಲ್ಲಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರೆ. ಸೂರ್ಯ ಸಾಲ್ಯಾನ್ ವಂದಿಸಿದರು. ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.




