30 C
Mumbai
September 21, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ – 5, ಮಹಿಳಾ ವಿಭಾಗದ ವತಿಯಿಂದ ರೇಖಾಚಿತ್ರ ಬಿಡಿಸಿ ಬಣ್ಣ ಹಚ್ಚುವ ಸ್ಪರ್ಧೆ – 2026



ಡೊಂಬಿವಲಿ: ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ–5ರ ಅಂಗವಾಗಿ, ಮಂದಿರದ ಮಹಿಳಾ ವಿಭಾಗದ ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ “ರೇಖಾಚಿತ್ರ ಬಿಡಿಸಿ ಬಣ್ಣ ಹಚ್ಚುವ ಸ್ಪರ್ಧೆ – 2026” ದಿನಾಂಕ 20.09.2026ರ ಭಾನುವಾರ ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಡೊಂಬಿವಲಿ ಪಶ್ಚಿಮದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯ ವೇದಬ್ರಹ್ಮ ಕಟ್ಟಡದ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.

ಸ್ಪರ್ಧೆಗೆ “ಶ್ರೀ ಮಹಾವಿಷ್ಣು ದೇವರು ಹಾಗೂ ಅವರ ದಶಾವತಾರಗಳು” ಎಂಬ ವಿಷಯವನ್ನು ನೀಡಲಾಗಿತ್ತು. ಒಟ್ಟು ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಸುಮಾರು 50 ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ವಿಜೇತರಾದವರಿಗೆ ಬಹುಮಾನ ವಿತರಣೆಯು ದಿನಾಂಕ 27.09.2026ರಂದು ಡೊಂಬಿವಲಿ ಪೂರ್ವದ ಶಿವಂ ಸಭಾಗೃಹದಲ್ಲಿ ನಡೆಯಲಿರುವ “ಸ್ವರ್ಣ ಸಂಭ್ರಮ – ದಾಸರ ಭಜನಾ ಸ್ಪರ್ಧೆ – 2026” ಸಮಾರಂಭದಲ್ಲಿ ನೆರವೇರಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಮಂದಿರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು. ಹಾಗೆಯೇ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮಂದಿರದ ಸರ್ವ ಸದಸ್ಯರಿಗೆ ಆಡಳಿತ ಮಂಡಳಿಯು ಕೃತಜ್ಞತೆಗಳನ್ನು ಸಲ್ಲಿಸಿತು.

ಶ್ರೀ ಮಹಾವಿಷ್ಣು ದೇವರ ಅನುಗ್ರಹದಿಂದ ಮಕ್ಕಳ ಪ್ರತಿಭಾ ವಿಕಸನಕ್ಕೆ ಪೂರಕವಾದ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.



Related posts

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದಆಷಾಢ ಹಬ್ಬ ಆಚರಣೆ

Mumbai News Desk

ಬಿಲ್ಲವರ ಅಸೋಸಿಯೇಷನ್, ಮುಂಬೈಡೊಂಬಿವಲಿ ಸ್ಥಳೀಯ ಕಚೇರಿ, ಸಾಮೂಹಿಕ ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಚಿತ್ರಾಪು ಬಿಲ್ಲವರ ಸಂಘದ 81ನೇ ಮಹಾಸಭೆ: ಸಮಾಜಮುಖಿ ಕಾರ್ಯಗಳಿಗೆ ಒಗ್ಗಟ್ಟಿನ ಸಂಕಲ್ಪ

Mumbai News Desk

ಮಹಾರಾಷ್ಟ್ರದಲ್ಲಿ ಮುಂಗಾರು ಆರ್ಭಟ: ಮುಂಬೈ ಮತ್ತು ಕೊಂಕಣ ಭಾಗದಲ್ಲಿ ರೆಡ್ ಅಲರ್ಟ್, ಅಸ್ತವ್ಯಸ್ತಗೊಂಡ ಜನಜೀವನ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಸಂಚಾಲಿತ ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ 49ನೇ ವಾರ್ಷಿಕ ಮಹಾಸಭೆ ಯಶಸ್ವಿ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಭೂಮಿಕಾ ಭಂಡಾರಿ  ಗೆ ಶೇ 93 ಅಂಕ.

Mumbai News Desk