31 C
Mumbai
September 29, 2026
Mumbai News Kannada
ಸುದ್ದಿ

ಶ್ವೇತಾ ಪ್ರಸನ್ನ ಶೆಟ್ಟಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ



ಶ್ವೇತಾ ಪ್ರಸನ್ನ ಶೆಟ್ಟಿ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು, ಬೆಳಗಾವಿ) ತನ್ನ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ. ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿದ್ದ ಡಾ. ಶಾಂತಕುಮಾರಿ ಕೆ. ಅವರ ಮಾರ್ಗದರ್ಶನದಲ್ಲಿ, ಶ್ವೇತಾ ಅವರು ಸಲ್ಲಿಸಿದ “ಎ ಸ್ಟಡಿ ಆಫ್ ಸಿಂಗಲ್ ಆಂಡ್ ಡಬಲ್ ಇಂಟಿಗ್ರಲ್ಸ್ ಇನ್ವಾಲ್ವಿಂಗ್ ಹೈಪರ್‌ಜಿಯೊಮೆಟ್ರಿಕ್ ಆಂಡ್ ಜನರಲೈಸ್ಡ್ ಹೈಪರ್‌ಜಿಯೊಮೆಟ್ರಿಕ್ ಫಂಕ್ಷನ್ಸ್ ವಿತ್ ಅಪ್ಲಿಕೇಶನ್ಸ್” (A Study of Single and Double Integrals Involving Hypergeometric and Generalized Hypergeometric Functions with Applications) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಮಾನ್ಯತೆ ಲಭಿಸಿದೆ.

ಮಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರ ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗಣಿತಶಾಸ್ತ್ರ ನಿಯತಕಾಲಿಕೆಗಳಲ್ಲಿ (ಜರ್ನಲ್‌ಗಳಲ್ಲಿ) ಪ್ರಕಟಗೊಂಡಿವೆ.

ಇವರು ಎರ್ಮಾಳು ಪುಚೊಟ್ಟು ದಿವಂಗತ ಸುಂದರ ಶೆಟ್ಟಿ ಮತ್ತು ಪಾದೂರು ಕರ್ಮರಪಾಡಿ ವತ್ಸಲಾ ಶೆಟ್ಟಿ ದಂಪತಿಯ ಪುತ್ರಿ ಹಾಗೂ ಪುಣೆಯ ಉದ್ಯಮಿ ಪ್ರಸನ್ನ ಶೆಟ್ಟಿ ಪೆರ್ಡೂರು ಅವರ ಪತ್ನಿ.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (13/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಪುತ್ತಿಗೆ ಶ್ರೀಪಾದಂಗಳವರಿಂದ ಡಾ| ರಾಮದಾಸ ಉಪಾಧ್ಯಾಯರಿಗೆ ಗೌರವಾರ್ಪಣೆ,

Mumbai News Desk

ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮನಾಥ್ ಹೆಗ್ಡೆ ನಿಧನ.

Mumbai News Desk

ಕೋಡಿಕಲ್ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ಆರೋಗ್ಯ ತಪಾಸಣಾ ರಕ್ತದಾನ ಶಿಬಿರ 

Mumbai News Desk

*ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ, ಸೇವಕರ್ತ ಪ್ರೇಮಾನಂದ ಕುಲಾಲ್ ವರಿಗೆ ಗೌರವ,

Mumbai News Desk

ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಅಧಿಕಾರ ಸ್ವೀಕಾರ

Mumbai News Desk