ನಾಯ್ಗಾಂವ್ನಿಂದ ವಿರಾರ್ವರೆಗಿನ ವಿಸ್ತೃತ ಪ್ರದೇಶದಲ್ಲಿ ಸಕ್ರಿಯವಾಗಿರುವ ಸಾಮಾಜಿಕ ಹಾಗೂ ಜಾತೀಯ ಸೇವಾ ಸಂಸ್ಥೆಯಾದ ‘ವಸಾಯಿ ತಾಲೂಕ ಮೊಗವೀರ ಸಂಘ’ದ ಮಹಾಸಭೆಯು ಅಕ್ಟೋಬರ್ 4ರಂದು ಸಂಘದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ 2026 – 2029ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯರಾದ ಪ್ರದೀಪ್ ಪುತ್ರನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅದೇ ರೀತಿ ಕಾರ್ಯದರ್ಶಿಯಾಗಿ ವನಿತಾ ಎಚ್. ಬಂಗೇರ, ಕೋಶಾಧಿಕಾರಿಯಾಗಿ ದಿನೇಶ್ ಜಿ. ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಪಲ್ಲವಿ ಎಂ. ಪುತ್ರನ್ ಹಾಗೂ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿಶ್ವನಾಥ್ ಬಂಗೇರ ಅವರುಗಳು ನೂತನವಾಗಿ ಆಯ್ಕೆಯಾಗಿದ್ದಾರೆ.



