October 30, 2026
Mumbai News Kannada
ಪ್ರಕಟಣೆ

ಡೊಂಬಿವಲಿ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ – 9: ನವೆಂಬರ್ 1 ರಂದು ತುಳು ಹಾಸ್ಯ ಕವಿಗೋಷ್ಠಿ



ಮುಂಬೈ: ಮುಂಬ್ರಾ ಮಿತ್ರ ಭಜನಾ ಮಂಡಳಿ ಸಂಚಾಲಕತ್ವದ ಡೊಂಬಿವಲಿಯ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಸರಣಿ ಕಾರ್ಯಕ್ರಮಗಳ 9ನೇ ಕೊಂಡಿಯಾಗಿ, ಮಂದಿರದ ಮಹಿಳಾ ವಿಭಾಗದ ವತಿಯಿಂದ ತುಳು ಹಾಸ್ಯ ಕವಿಗೋಷ್ಠಿ ಮತ್ತು ಸಭಾ ಕಾರ್ಯಕ್ರಮವು ಇದೇ ಬರುವ ನವೆಂಬರ್ 1, 2026ರ ಆದಿತ್ಯವಾರ ಸಂಜೆ 3.30ಕ್ಕೆ ಸರಿಯಾಗಿ ಮಂದಿರದ ಸಭಾಂಗಣದಲ್ಲಿ ಜರುಗಲಿದೆ.

ತುಳು ಭಾಷೆ, ಹಾಸ್ಯ ಮತ್ತು ಸಾಹಿತ್ಯದ ಈ ವಿಶಿಷ್ಟ ಸಮ್ಮಿಲನದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಡಾ. ಜಿ. ಪಿ. ಕುಸುಮ ಅವರು ವಹಿಸಲಿದ್ದಾರೆ.

ಈ ಗೋಷ್ಠಿಯಲ್ಲಿ ಜನಪ್ರಿಯ ಕವಿಗಳಾದ ಸೋಮನಾಥ್ ಕರ್ಕೇರ, ದೀಪಾ ಶೆಟ್ಟಿ, ಕುಮುದಾ ಡಿ. ಶೆಟ್ಟಿ, ರಮಣ್ ಶೆಟ್ಟಿ ರೆಂಜಾಳ, ಪ್ರಫುಲ್ಲ ಡಿ. ಶೆಟ್ಟಿ ಪಡುಕುಡೂರು, ಸವಿತಾ ಸಾಲಿಯಾನ್, ಲೀಲೇಶ್ ಸುವರ್ಣ, ಅಶೋಕ್ ವಳದೂರು, ಸರ್ವ ಅರಸ ಶೆಟ್ಟಿ ಹಾಗೂ ಓಂದಾಸ್ ಕಣ್ಣಂಗಾರ್ ಅವರುಗಳು ಭಾಗವಹಿಸಿ ತಮ್ಮ ಹಾಸ್ಯ ಕವನಗಳನ್ನು ವಾಚಿಸಲಿದ್ದಾರೆ.

ಕವಿಗೋಷ್ಠಿಯ ನಂತರ ಶ್ರೀ ಮಹಾವಿಷ್ಣು ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿಯರಾದ ಶ್ರೀಮತಿ ಸವಿತಾ ನವೀನ್ ಸಾಲಿಯಾನ್ ಮತ್ತು ಶ್ರೀಮತಿ ರತ್ನ ಮನೋಹರ್ ಮೆಂಡನ್ ಅವರುಗಳು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಇಂದ್ರಾಳಿ ದಿವಾಕರ್ ಶೆಟ್ಟಿ, ಧನ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ್ ಶೆಟ್ಟಿ ಎಕ್ಕಾರ್, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷರಾದ ಸುಬ್ಬಯ್ಯ ಶೆಟ್ಟಿ ಸೂರಿಂಜೆ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರಾದ ಸುಕುಮಾರ್ ಶೆಟ್ಟಿ ಹಾಗೂ ಮಂದಿರದ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಉಪಾಧ್ಯಕ್ಷರಾದ ಶ್ರೀ ಅರವಿಂದ್ ಪದ್ಮಶಾಲಿ, ಕಾರ್ಯದರ್ಶಿಗಳಾದ ಶ್ರೀ ಸಚಿನ್ ಪೂಜಾರಿ ಮತ್ತು ಕೋಶಾಧಿಕಾರಿಗಳಾದ ಶ್ರೀ ಪ್ರವೀಣ್ ಶೆಟ್ಟಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರಲಿದ್ದಾರೆ.

ತುಳು ಸಾಹಿತ್ಯ ಮತ್ತು ಹಾಸ್ಯದ ರಸದೌತಣ ನೀಡಲಿರುವ ಈ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತಾಭಿಮಾನಿಗಳು, ಸಾಹಿತ್ಯ ಪ್ರೇಮಿಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಂದಿರದ ಮಹಿಳಾ ವಿಭಾಗ ಹಾಗೂ ಸುವರ್ಣ ಮಹೋತ್ಸವ ಸಮಿತಿಯು ಜಂಟಿಯಾಗಿ ವಿನಂತಿಸಿಕೊಂಡಿದೆ.



Related posts

ಮುಂಬೈಯಲ್ಲಿ ಅ.2ರಂದು ‘ವೈಬ್ ಫೆಸ್ಟ್ 2026’: ಬಿಲ್ಲವ ಯುವಶಕ್ತಿಯ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ

Mumbai News Desk

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ರಿ. 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

Mumbai News Desk

ಬೊರಿವಲಿ ದೇವುಲ್ಪಾಡಾದ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಜ. 25: ವಾರ್ಷಿಕ ಮಹಾಪೂಜೆ, ಬ್ರಹ್ಮ ಬೈದರ್ಕಳ ನೇಮೋತ್ಸವ

Mumbai News Desk

ಕುಲಾಲ ಸಂಘ ಮುಂಬಯಿ: ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ – ಪೆ 15.: ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಗಣೇಶಪುರಿ ಶ್ರೀ ನಿತ್ಯಾನಂದ ಬಾಬಾ ದರ್ಶನದಲ್ಲಿ ತಾತ್ಕಾಲಿಕ ಬದಲಾವಣೆ: ವಿಗ್ರಹ ನವೀಕರಣ ಹಿನ್ನೆಲೆ ಏಪ್ರಿಲ್ 27 ರಿಂದ ದರ್ಶನ ಸ್ಥಗಿತ

Mumbai News Desk

ಮೇ 2: ಇನ್ನಂಜೆ  ಶಶಿಧರ ಶೆಟ್ಟಿ  ದಂಪತಿಯ ನೇತೃತ್ವದಲ್ಲಿ ಕಾಪು ಶೃಷ್ಟಿ ರೆಸಿಡೆನ್ಸಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

Mumbai News Desk