24.7 C
Karnataka
April 3, 2025
ಪ್ರಕಟಣೆ

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 14 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.



ಬೊಯಿಸರ್ :   ಇದೇ ಡಿಸೆಂಬರ್ ತಾ. 27 ನೆಯ ಶುಕ್ರವಾರದಂದು ಪಾಲ್ಘರ್ ಜಿಲ್ಲೆಯ ಬೊಯಿಸರ್ ನಲ್ಲಿಯ  ಸಂತಶ್ರೇಷ್ಟ ಗುರು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ  14 ನೆಯ ವರ್ಷದ ಪ್ರತಿಷ್ಟಾಪನಾ ಉತ್ಸವವು ಜರಗಲಿದೆ.

ಪ್ರಾತಃ ಕಾಲದ 6 ಗಂಟೆಗೆ ಸಂಕಲ್ಪ ಪೂಜೆ ಹಾಗೂ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. 8 ಗಂಟೆಗೆ  ನಿತ್ಯಾನಂದ ಬಾಬಾ ಪಂಚಾಮೃತ ಅಭಿಷೇಕ ಮತ್ತು ಪ್ರಾತಃ ಆರತಿಯು ಸರ್ವ ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ಜರಗಲಿದೆ.

ಬೆಳಿಗ್ಗೆ 10 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಸದ್ಗುರು ನಿತ್ಯಾನಂದ ಭಜನಾ ಮಂಡಳಿಯವರಿಂದ ಭಕ್ತಿಗೀತೆ ಹಾಗೂ ಭಜನಾ ಕಾರ್ಯಕ್ರಮವಿರುತ್ತದೆ. 12 ಗಂಟೆಗೆ ಮದ್ಯಾಹ್ನದ ಆರತಿಯ ಬಳಿಕ ಅನ್ನಸಂತರ್ಪಣೆ ಜರಗಲಿದೆ.

ಸಂಜೆ 6 ಗಂಟೆಗೆ ನಿತ್ಯಾನಂದ ಬಾಬಾ ಇವರ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆ ಇದ್ದು ಸಂಜೆ 8 ಗಂಟೆಯ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ.

              ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವ  ಪೂರ್ಣ ದಿನದ ಈ  ಪ್ರತಿಷ್ಟಾಪನೋತ್ಸವಕ್ಕೆ ಭಕ್ತಾಭಿಮಾನಿಗಳೆಲ್ಲರೂ ಸಹ ಕುಟುಂಬ ಬಂದು ಭಾಗವಹಿಸಬೇಕಾಗಿ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ ಹಾಗೂ ವಿಶ್ವಸ್ಥ ಮಂಡಳಿಯವರು ಸಮಸ್ಥ ಭಕ್ತಮಂಡಳಿಯ ಪರವಾಗಿ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಸುದ್ದಿ ವಿವರ :ಪಿ.ಆರ್.ರವಿಶಂಕರ್

    8483980035

Related posts

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ಮಾ.9ರಂದ 41 ನೇ ಮಹಾಸಭೆ, ಸಾಧಕರಿಗೆ ಸನ್ಮಾನ! ಮಾಜಿ ಅಧ್ಯಕ್ಷರುಗಳಿಗೆ ಗೌರವ!

Mumbai News Desk

ಡಿ. 17ರಂದು  ಪೊವಾಯಿ  ವಿದೂಶಿ ಗೀತಾ ವೇದ್ (ಸಾಲ್ಯಾನ್) ರ ನಟನಾ ನೃತ್ಯ ಅಕಾಡೆಮಿಯ 11ನೇ ವಾರ್ಷಿಕೋತ್ಸವ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಅ. 8ಕ್ಕೆ ಶ್ರೀ ದುರ್ಗಾ ಹೋಮ, ಶ್ರೀ ದೇವಿ ದರ್ಶನ

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

Mumbai News Desk

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk