
ಕಲ್ಯಾಣಿ ಬಿ. ಪಾತ್ರಿಯವರ ಪುತ್ರ ಶ್ರೀಯುತ ರಮೇಶ್ ಉಚ್ಚಿಲ ಅವರು ಶ್ರೀಮತಿ ತೀರ್ಥ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ಥರ ಪರವಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೇ 25 ಶಿಲಾಸೇವೆಯನ್ನು ನೀಡಿದ್ದು 31/10/2023ನೇ ಮಂಗಳವಾರ 50 ಶಿಲಾಸೇವೆಯನ್ನು ನೀಡಿ ಒಟ್ಟು 75 ಶಿಲಾಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಿಸಿ “ಕಾಪುವಿನ ಅಮ್ಮನ ಮಕ್ಕಳ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಅವರಿಗೂ ಅವರ ಕುಟುಂಬ – ಸಂಸಾರಕ್ಕೂ ಶ್ರೀದೇವಿಯು ಸಂಪೂರ್ಣ ಅನುಗ್ರಹವನ್ನು ಕರುಣಿಸಲಿ. ಆಯುರಾರೋಗ್ಯ ಭಾಗ್ಯವನ್ನೂ, ಸಕಲ ಸಿರಿ ಸಂಪದವನ್ನು ಶ್ರೀ ಮಾರಿಯಮ್ಮ ದಯಪಾಲಿಸಲಿ ಎಂದು ದೇವಿಯ ಪದತಲದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪ್ರಾರ್ಥನೆ.
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಪ್ರಚಾರ ಸಮಿತಿಯ ಸಂಚಾಲಕರಾದ ಶ್ರೀ ಶ್ರೀಧರ್ ಕಾಂಚನ್ ಮತ್ತು ದೇವಳದ ಪ್ರಬಂಧಕರಾದ ಶ್ರೀ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.