
ಮುಂಬಯಿ; ಮಹಾನಗರದ ಜನಪ್ರಿಯ ನಾಟಕ ತಂಡ ಅಭಿನಯ ಮಂಟಪ ಮುಂಬಯಿಯ ಕಲಾವಿದರು ಅಭಿನಯಿಸುವ “ಕೋರ್ದಬ್ಬು ತನ್ನಿ ಮಾನಿಗ” ಮತ್ತು “ಪಂಜುರ್ಲಿ” ಈ ಎರಡು ತುಳು ನಾಟಕಗಳ ಮುಹೂರ್ತವು ಅಸಲ್ಪದ ಗೀತಾಂಬಿಕ ಮಂದಿರದ ಅರ್ಚಕರಿಂದ ಮಾತೆ ಗೀತಾಂಬಿಕೆಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ನಡೆಯಿತು.
ಅಭಿನಯ ಮಂಟಪದ ಅಧ್ಯಕ್ಷರಾದ ಬಾಲಕೃಷ್ಣ ಡಿ. ಶೆಟ್ಟಿ ,ನಿರ್ದೇಶಕ ಕರುಣಾಕರ ಕೆ. ಕಾಪು ಮತ್ತು ಸಾ ದಯ ಇವರೊಂದಿಗೆ ಎಲ್ಲಾ ಕಲಾವಿದರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು . ಮಾರ್ಚ್ 9 ರಂದು ಮೊಗವೀರ ಕನ್ನಡ ಮಾಸಿಕದ 85ನೇ ಸಂಭ್ರಮ ಅಂದೇರಿ ಮೊಗವೀರ ಭವನದಲ್ಲಿ ನಡೆಯಲಿದ್ದು, ಅಂದು ಪಂಜುರ್ಲಿ ನಾಟಕ ಪ್ರದರ್ಶನಗೊಳ್ಳಲಿದೆ . ಕೋರ್ದಬ್ಬು ತನ್ನಿ ಮಾನಿಗ ನಾಟಕವು ಅಭಿನಯ ಮಂಟಪದ 43ನೇ ವಾರ್ಷಿಕೋತ್ಸವದಂದು ಪ್ರದರ್ಶನಗೊಳ್ಳಲಿದೆ. ಕೋರ್ದಬ್ಬು ತನ್ನಿ ಮಾನಿಗ ದಿ. ಯು ಆರ್ ಚಂದರ್ ಮತ್ತು ಪಂಜುರ್ಲಿ ನಾಟಕವನ್ನು ಭರತ್ ಕರ್ಕೆರ ಮಂಗಳೂರು ರಚಿಸಿದ್ದು, ಈ ನಾಟಕಗಳನ್ನು ಖ್ಯಾತ ನಿರ್ದೇಶಕ ಅಭಿನಯ ಮಂಟಪದ ಕರುಣಾಕರ ಕೆ. ಕಾಪು ಇವರು ನಿರ್ದೇಶಿಸುತ್ತಿದ್ದಾರೆ..