
ಗೋಕುಲ ತುಳು ಕನ್ನಡಿಗ ಗೇಮ್ಸ್ ವಿವಿಧ ಸಮಾಜದ ಬಾಂಧವರ ಒಗ್ಗಟ್ಟಿಗೆ ಶಕ್ತಿ ತುಂಬಿದೆ – ಗೋಪಾಲ ಸಿ ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ : ಬಿ ಎಸ್ ಕೆ ಬಿ ಎಸೋಸಿಯೇಷನ್ ನ ಶತಮಾನದ ಈ ಶುಭ ಸಂದರ್ಭದಲ್ಲಿ ಮಹಾನಗರದಲ್ಲಿರುವ ವಿವಿಧ ತುಳು ಕನ್ನಡಿಗ ಸಮಾಜ ಬಾಂಧವರನ್ನುಕ್ರೀಡೆಯ ಮೂಲಕ ಒಂದೆಡೆ ಸೇರಿಸಿ, ಎಲ್ಲಾ ಸಮುದಾಯದ ಹಿರಿ ಕಿರಿಯರು ಭಾಗವಹಿಸಿ ತಮ್ಮ ಒಗ್ಗಟ್ಟನ್ನು ತೋರಿಸಿದ್ದು ಇದು ವಿವಿಧ ಸಮಾಜದ ಬಾಂಧವರ ಒಗ್ಗಟ್ಟಿಗೆ ಶಕ್ತಿ ತುಂಬಿದೆ ಎಂದು ಮಾಜಿ ಸಂಸದ ಗೋಪಾಲ ಸಿ ಶೆಟ್ಟಿ ಅವರು ನುಡಿದರು.

ಸಯನ್ ಬಿ ಎಸ್ ಕೆ ಬಿ ಅಸೋಸಿಯೇಷನ್ ಮುಂಬಯಿ ಇದರ ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ಮುಂಬಯಿಯ ಎಲ್ಲಾ ತುಳು ಕನ್ನಡಿಗರಿಗಾಗಿ ಗೋಕುಲ ಮುಂಬಯಿ ತುಳು ಕನ್ನಡಿಗ ಗೇಮ್ಸ್ 2025 ಫೆ.9 ರಂದು , ಎರಡನೇ ದಿನದಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಅಧ್ಯಕ್ಷ ಬಿ.ನಾರಾಯಣ, ವೈಬ್ರೆಂಟ್ ಎಕ್ಸ್ ಪೊಟೆಕ್ಸ್ ನ ಆಡಳಿತ ನಿರ್ದೇಶಕ ಬಿ.ರಮಾನಂದ ರಾವ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅರುಣ್ ಕುಮಾರ್ ಹೊಸಬೆಟ್ಟು, ,ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮಿನ್, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ,
ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಎನ್.ದೇವಾಡಿಗ, ಮಾಜಿ ಅಧ್ಯಕ್ಷ
ಧರ್ಮಪಾಲ್ ಯು. ದೇವಾಡಿಗ, ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ವಿಜಯೇಂದ್ರ ವಿ.ಗಾಣಿಗ, ಮಾಜಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ ಗಾಣಿಗ, , ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟ್ರದ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ, ಪೊಹಿಯಿಸರ್ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಮತ್ತು ರೇಡಿಯೊಸಿಟ್ ಸಿಇಒ ಲಿಖಿತ್ ಕುಕ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿಯ ಅಧ್ಯಕ್ಷರಾದ ಡಾ. ಸುರೇಶ್ ಎಸ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದು ಖ್ಯಾತ ಕ್ರೀಡಾಪಟು ಜಯ ಶೆಟ್ಟಿ, ವಿಠಲ್ ಎಸ್ ಆಳ್ವ, ರಾಜೇಶ್ ಶೆಟ್ಟಿ ಕ್ರೀಡೋತ್ಸವನ್ನು ನಿರ್ವಹಿಸಿದರು.

ವಾಮನ್ ಎನ್ ಹೊಳ್ಳ ಸ್ವಾಗತಿಸಿದರು. ಎಸೋಸಿಯೇಷನ್ ನ ಗೌರವ ಕಾರ್ಯದರ್ಶಿ ಎಪಿಕೆ ಪೋಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರಶಾಂತ್ ಹೇರ್ಲೆ , ಉಪಾಧ್ಯಕ್ಷ ಮೋಹನ್ ಹೊಳ್ಳ ಮತ್ತು ಅವಿನಾಶ್ ಶಾಸ್ತ್ರಿ ಗೌ. ಕೋಶಾಧಿಕಾರಿ ಹರಿದಾಸ್ ಭಟ್ ಜೊತೆ ಕಾರ್ಯದರ್ಶಿ ವೈ ಮೋಹನ್ ರಾಜ್ ಮತ್ತು ಚಿತ್ರ ಮೇಲ್ಮನೆ, ಜೊತೆ ಕೋಶಾಧಿಕಾರಿ ಗಣೇಶ್ ಭಟ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.