
ಮುಂಬೈ ಕನ್ನಡಿಗರ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ 66ನೇ ನಾಡಹಬ್ಬ ಸಮಾರಂಭ ಹಾಗೂ ವಿಚಾರಗೋಷ್ಠಿ, ಮಾರ್ಚ್ 9ರಂದು, ರವಿವಾರ ಬೆಳಿಗ್ಗೆ 9:00 ರಿಂದ ಸಾಯಂಕಾಲ 7ರ ತನಕ ಮಲಾಡ್ ಪಶ್ಚಿಮ, ಎಸ್ ವಿ ರೋಡ್, ರಾಮಾಂಜನೇಯ ಹೋಟೆಲ್ ನ ಹತ್ತಿರದ ಬಜಾಜ್ ಸಭಾಗ್ರಹದಲ್ಲಿ ಜರಗಲಿದೆ.
ಕಾರ್ಯಕ್ರಮದ ವಿವರ :
ಬೆಳಿಗ್ಗೆ 9.30ರಿಂದ ಸಂಘದ ಉಪ ವಿಭಾಗ ಮತ್ತು ಮುಂಬೈಯ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಬೆಳಿಗ್ಗೆ 10.50.ಕ್ಕೆ ವಿಚಾರಗೋಷ್ಠಿ
ಉದ್ಘಾಟಕರು ವಿಶ್ವನಾಥ ಕೆ ಶೆಟ್ಟಿ (ಉದ್ಯಮಿ, ಸಮಾಜ ಸೇವಕ )
ಸ್ವಾತಂತ್ರ್ಯ ಹೋರಾಟದ ಭಾರತೀಯ ಸ್ತ್ರಿ ಶಕ್ತಿ ವಿಷಯದ ಕುರಿತು ವಿಚಾರಗೋಷ್ಠಿ
ಅಧ್ಯಕ್ಷತೆ – ಡಾ! ಕಬ್ಬಿನಾಲೆ ವಸಂತ್ ಭಾರದ್ವಾಜ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ )
ಉಪನ್ಯಾಸ : ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ
ಉಪನ್ಯಾಸಕರು – ಟಿ ಎನ್ ಖಂಡಿಗೆ ವಿಷಯ – ಅಪ್ರತಿಮ ಸಾಹಸದ ಕಿತ್ತೂರ ರಾಣಿ ಚೆನ್ನಮ್ಮ
ಉಪನ್ಯಾಸಕರು – ಶ್ರೀಕಾಂತ್ ಶೆಟ್ಟಿ ಕಾರ್ಕಳ, ವಿಷಯ – ತುಳು ನೆಲದ ಸಿಡಿಗುಂಡು ಉಳ್ಳಾಲದ ರಾಣಿ ಅಬ್ಬಕ್ಕ.
ಈ ಸಂಧರ್ಭ ಸಂಘದ ಮುಖವಾಣಿ ‘ಮುಂಬೆಳಕು’ ಬಿಡುಗಡೆ ಮಾಡಲಾಗುವುದು.

ಸಂಜೆ 4 ಗಂಟೆಗೆ 66ನೇ ನಾಡಹಬ್ಬ ಸಮಾರಂಭ
ಅಧ್ಯಕ್ಷತೆ – ಶ್ರೀಕಾಂತ್ ಶೆಟ್ಟಿ ಕಾರ್ಕಳ (ಪ್ರಖರ ರಾಷ್ಟ್ರವಾದಿ, ಚಿಂತಕ )
ಮುಖ್ಯ ಅತಿಥಿ – ಡಾ! ಆರ್ ಕೆ ಶೆಟ್ಟಿ (ಗೌರವ ಪ್ರ. ಕಾರ್ಯದರ್ಶಿ ಬಂಟರ ಸಂಘ ಮುಂಬಯಿ )
ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬೈಯ ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಹೋಟೆಲ್ ಉದ್ಯಮಿ ಸಮಾಜ ಸೇವಕ ಸಂತೋಷ್ ಪಿ ಶೆಟ್ಟಿ, ಕೋರಿಯೋಗ್ರಾಪರ್ ತುಷಾರ್ ಶೆಟ್ಟಿ ಉಪಸ್ಥಿತರಿರುವರು.
ಮದ್ಯಾಹ್ನ 2.30ರಿಂದ 3.45 ಮತ್ತು ಸಾಯಂಕಾಲ 6ರಿಂದ 7ರ ತನಕ ಸಂಘದ ಉಪ ವಿಭಾಗಗಳು ಮತ್ತು ಮುಂಬೈಯ ವಿವಿಧ ಸಂಘಟನೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಿನವಿಡೀ ನಡೆಯುವ 66ನೇ ನಾಡಹಬ್ಬ ಸಮಾರಂಭದ ಎಲ್ಲಾ ಕಾರ್ಯಕ್ರಮದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಮಾರಂಭವನ್ನು ಯಶಸ್ಸುಗೊಳಿಸುವಂತೆ ಸಂಘದ ಅಧ್ಯಕ್ಷರಾದ ವಿಶಾಲಾಕ್ಷಿ ಉಳುವಾರ, ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್, ಗೌರವ ಕೋಶಾಧಿಕಾರಿ ಎಂ ಆನಂದ ಶೆಟ್ಟಿ, ಪಾರುಪತ್ಯಗಾರರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಜಿ ಟಿ ಆಚಾರ್ಯ, ದೇವಲ್ಕುಂದ ಭಾಸ್ಕರ ಶೆಟ್ಟಿ ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ.
