29.1 C
Karnataka
March 31, 2025
ಸುದ್ದಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.


ಮನೋಹರ್ ಶೆಟ್ಟಿ ಸಮಾಜಕ್ಕೆ ಅನುಕರಣಿಯರು – ದುಗ್ಗಣ್ಣ ಸಾವಂತ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಶ್ವರರಾಗಿ ದಕ್ಷ ಆಡಳಿತ ನೀಡಿ ಸ್ವರ್ಗಸ್ತರದ ಎನ್ ಎಸ್ ಮನೋವ ಶೆಟ್ಟಿ ಕಕ್ವಗುತ್ತು ಗ ಅವರಿಗೆ ಈ ಕ್ಷೇತ್ರ ಬಪ್ಪನಾಡುವಿನ ಜ್ಞಾನ ಮಂದಿರದಲ್ಲಿ ಮಾರ್ಚ್ 23ರಂದು ನುಡಿ ನಮನ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಮಾತನಾಡಿದ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೋಕ್ತೆಸರರಾದ ದುಗ್ಗಣ್ಣ ಸಾವಂತರು ಮಾತನಾಡುತ್ತ ” ಬಪ್ಪನಾಡು ದೇವಳದಲ್ಲಿ ಜವಾಬ್ದಾರಿತವಾಗಿ ಕಾರ್ಯನಿರ್ವಹಿಸಿದ ಮನೋಹರ್ ಶೆಟ್ಟಿ ಅವರು ಸಮಾಜಕ್ಕೆ ಅನುಕರಣೆಯರು. ಯಾವುದೇ ಸ್ವಾರ್ಥ ಇಲ್ಲದೆ ಒಳ್ಳೆಯ ಮನೋಭಾವನೆ, ದಕ್ಷತೆ, ಶಿಸ್ತು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ಅವರು ನುಡಿ ನಮ್ಮನ್ನು ಸಲ್ಲಿಸಿದರು.
ಶಾಸಕ ಉಮನಾಥ ಎ ಕೋಟ್ಯಾನ್, ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್, ಕಸಾಪ ರಾಜ್ಯ ಪೂರ್ವಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕರಾದ ತ್ರಿಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್, ಸಸಿಹಿತ್ಲು ಭಗವತಿ ದೇವಳದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಎಳತ್ತೂರು ದೇವಳದ ಸಂತೋಷ್ ಕುಮಾರ್ ಹೆಗ್ಡೆ, ಬಿಲ್ಲವ ಸಂಘದ ವಾಮನ ಕೋಟ್ಯಾನ್ ನಡಿಕುದ್ರು, ಬಂಟರ ಸಂಘದ ಅಶೋಕ್ ಕುಮಾರ್ ಶೆಟ್ಟಿ, ಬಪ್ಪನಾಡು ದೇವಳದ ಜೀರ್ಣೋದ್ಧಾರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಪತಂಜಲಿ ಯೋಗ ಸಮಿತಿಯ ರಾಜೇಶ್ ಭುವನಾಭೀರಾಮ ಉಡುಪ, ಗುರುವಪ್ಪ ಕೋಟ್ಯಾನ್, ಸುನಿಲ್ ಆಳ್ವ ನುಡಿ ನಮನ ಸಲ್ಲಿಸಿದರು.
ದೇವಳದ ಪವಿತ್ರಪಾಣಿ ಅತ್ತೂರು, ಬೈಲಮನೆ ವೆಂಕಟರಾಜು ಉಡುಪ, ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷ ಪಾದೆಮನೆ ಜಯಂತ್ ರೈ, ಪ್ರಮುಖರಾದ ಸುಭಾಸಚಂದ್ರ ಭಂಡಾರಿ, ಕೋಲ್ನಾಡು ಕಿರಣ್ ಶೆಟ್ಟಿ, ರಾಮಚಂದ್ರ ನಾಯಕ್, ಹರಿಶ್ಚಂದ್ರ ಪಿ.ಸಾಲ್ಯಾನ್, ಮೂಲ್ಕಿ ಸಪಂ ಅಧ್ಯಕ್ಷ ಸತೀಶ್ ಅಂಚನ್ ಜೀವನ್ ಕೆ ಶೆಟ್ಟಿ ಉದಯಶೆಟ್ಟಿ ಜಯಶೆಟ್ಟಿ ಮಯೂರಿ, ಸಂಜೀವ ದೇವಾಡಿಗ ನಾಗೇಶ್ಕೊಪ್ಪನಾಡು ಶಿವಶಂಕರ್ ವರ್ಮ, ಮನೋಹರ್ ಶೆಟ್ಟಿ ಮತ್ತು ಅವರ ಕುಟುಂಬಿಕರು ಉಪಸ್ಥಿತರಿದ್ದರು.

Related posts

ದ್ವಾರಕಾಮಯಿ ಮಠ ಶ್ರೀ ಕ್ಷೇತ್ರ ಶಂಕರಪುರದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ನುಡಿ -ನಮನ

Mumbai News Desk

ಬೆಂಗಳೂರು : ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ವೈರಸ್ ಪತ್ತೆ, ಆತಂಕ ಪಡುವ ಅಗತ್ಯವಿಲ್ಲ – ಆರೋಗ್ಯ ಇಲಾಖೆ

Mumbai News Desk

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ : ಮೂವರು ದರೋಡೆಕೋರರ ಬಂಧನ

Mumbai News Desk

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk

ಪಕ್ಷಿಕೆರೆ : ಪತ್ನಿ ಮಗುವನ್ನು ಹತ್ಯೆಗೈದು ಪತಿ ರೈಲಿಗೆ ತಲೆಕಕೊಟ್ಟು ಅತ್ಮಹತ್ಯೆ

Mumbai News Desk