29.1 C
Karnataka
March 31, 2025
ಮಹಾರಾಷ್ಟ್ರ

ಮಹಾರಾಷ್ಟ್ರ : ಹಲಾಲ್ ಪ್ರಾಮಾಣೀಕರಣವನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಪ್ರಸ್ತಾವನೆ

ಮಹಾರಾಷ್ಟ್ರದಲ್ಲಿ ಹಲಾಲ್ ಪ್ರಾಮಾಣೀಕರಣವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಹಿಂದೂ ಜನಜಾಗೃತಿ ಸಮಿತಿಯೊಂದಿಗಿನ ಸಭೆಯ ನಂತರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಹಲಾಲ್ ಪ್ರಾಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಬಲಪಂಥೀಯ ಸಂಘಟನೆ ಹೇಳಿಕೊಂಡಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅವಧಿಯಲ್ಲಿ ಹಲಾಲ್ ಪ್ರಮಾಣ ಪತ್ರಗಳ ಮೇಲೆ ನಿಷೇಧ ಹೇರಿದ ನಂತರ, ಹಿಂದೂ ಜನಜಾಗೃತಿ ಸಮಿತಿ ಮಹಾರಾಷ್ಟ್ರದಲ್ಲಿ ಹಲಾಲ್ ಉತ್ಪನ್ನಗಳ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಿ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಔಪಚಾರಿಕ ಮನವಿಯನ್ನು ಸಲ್ಲಿಸಿತು. ಧಾರ್ಮಿಕ ಆಧಾರದ ಮೇಲೆ ಉತ್ಪನ್ನಗಳನ್ನು ಪ್ರಾಮಾಣಿಕರಿಸುವುದು ಜಾತ್ಯಾತೀತ ರಾಜ್ಯದಲ್ಲಿ ಸಂವಿಧಾನಬಾಹಿರ ಎಂದು ಸಂಘಟನೆ ವಾದಿಸಿತು. ಬಲಪಂಥೀಯ ಸಂಘಟನೆ ಸೋಮವಾರ(ಮಾ. 24) ಉಪಮುಖ್ಯಮಂತ್ರಿ ಶಿಂದೆ ಅವರಿಗೆ ತನ್ನ ಪ್ರಾಸ್ತಾವನೆಯನ್ನು ಸಲ್ಲಿಸಿದ್ದು ಇದು ಹಲಾಲ್ ಪ್ರಾಮಾಣಿಕಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.ಆಹಾರ ಉತ್ಪನ್ನಗಳಿಗೆ ಮಾನದಂಡವನ್ನು ನಿಗದಿ ಪಡಿಸುವ ಮತ್ತು ಪ್ರಮಾಣ ಪತ್ರಗಳನ್ನು ನೀಡುವ ಸರ್ಕಾರಿ ಅಧಿಕಾರ ಹೊಂದಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI)ಗೆ ಸಮಾನಾಂತರವಾಗಿ ಪ್ರಮಾಣಿಕರಣವನ್ನು ಸ್ಥಾಪಿಸಲಾಗಿದೆ ಎಂದು ಪ್ರಸ್ತಾವನೆಯಲ್ಲಿ ಆರೋಪಿಸಲಾಗಿದೆ. ಪ್ರಮಾಣಿಕರಣವು ಸರ್ಕಾರಿ ನಿಯಮಗಳನ್ನು ಉಲ್ಲಂಗಿಸುತ್ತದೆ ಮತ್ತು ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗೊಂದಲವನ್ನು ಸೃಷ್ಟಿಸಿದೆ ಎಂದು ಅದು ಆರೋಪಿಸಿದೆ.
ಹಲಾಲ್ ಇಂಡಿಯಾ, ಹಲಾಲ್ ಸರ್ಟಿಫಿಕೇಷನ್ ಸರ್ವಿಸಸ್ ಇಂಡಿಯಾ, ಜಮಿಯಾತ್ ಉಲ್ಲೇಮಾ-ಎ-ಹಿಂದ್ ಮತ್ತು ಜಮೀಯಾತ್ ಉಲೇಮ-ಎ- ಮಹಾರಾಷ್ಟ್ರದಂತಹ ಸಂಸ್ಥೆಗಳು ಹಲಾಲ್ ಪ್ರಮಾಣ ಪತ್ರಗಳನ್ನು ಅಕ್ರಮವಾಗಿ ವಿತರಿಸಿದೆ, ಮತ್ತು ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುತ್ತಿದೆ ಎಂದು ಇಂದು ಜನಜಾಗೃತಿ ಸಮಿತಿ ಆರೋಪಿಸಿದೆ.
ಮಹಾರಾಷ್ಟ್ರದಲ್ಲಿ ಕಾನೂನುಬಾಹಿರರವಾಗಿ ಹಲಾಲ್ ಪ್ರಮಾಣ ಪತ್ರಗಳನ್ನು ನೀಡುವ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ. ಹಲಾಲ್ ಪ್ರಾಮಾಣಿಕರಣದ ನೆಪದಲ್ಲಿ ಖಾಸಗಿ ಸಂಸ್ಥೆಗಳು ಸಂಗ್ರಹಿಸಿದ ಹಣವನ್ನು ತನಿಖೆ ಮಾಡಬೇಕು ಮತ್ತು ಹಲಾಲ್ ಪ್ರಮಾಣ ಪತ್ರಗಳನ್ನು ಸಂಗ್ರಹಿಸಲಾದ ಅಕ್ರಮ ಸಂಪತ್ತನ್ನು ಬಡ್ಡಿಯೊಂದಿಗೆ ವಸೂಲಿ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

Related posts

ಶ್ರೀ ದುರ್ಗಾ ಕಾಳಿ ಮಂದಿರ, ಅಂಬರ್ ನಾಥ್ ನವರಾತ್ರಿ ಉತ್ಸವ ಸಂಪನ್ನ.

Mumbai News Desk

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ

Mumbai News Desk

ಕರ್ನಾಟಕ ಮಹಾಮಂಡಲ ಮೀರಾ ಭಾಯಂದರ್ ನ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ , ಹರಸಿನ ಕುಂಕುಮ ಕಾರ್ಯಕ್ರಮ 

Mumbai News Desk

ಮಹಾರಾಷ್ಟ್ರದ ಸಿಎಂ ರೇಸ್​ನಿಂದ ಹಿಂದೆ ಸರಿದ ಏಕನಾಥ್ ಶಿಂಧೆ; ದೇವೇಂದ್ರ ಫಡ್ನವಿಸ್ ಹಾದಿ ಸುಗಮ

Mumbai News Desk

ಮಹಾರಾಷ್ಟ್ರ : ಹೊಸ ಸರಕಾರ ರಚನೆಗೆ ಮುಂದುವರಿದ ಕುತೂಹಲ, ದಿಢೀರ್ ಸ್ವಗ್ರಾಮಕ್ಕೆ ಹೊರಟ ಏಕನಾಥ್ ಶಿಂಧೆ

Mumbai News Desk

ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ : ಮುಂದಿನ ಮುಖ್ಯಮಂತ್ರಿ ಯಾರು ಎಂಬ ಸ್ಪಷ್ಟತೆ ಇಲ್ಲ

Mumbai News Desk