29 C
Karnataka
April 10, 2025
ಪ್ರಕಟಣೆ

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.



ಶಹಾಡ್ ಬಿರ್ಲಾಗೇಟ್ ಬಳಿಯ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ವ್ಯವಸ್ಥಾಕತ್ವದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 63ನೇ ವಾರ್ಷಿಕೋತ್ಸವ, 10ನೇ ವಾರ್ಷಿಕ ಪ್ರತಿಷ್ಠ ವರ್ಧಂತಿ ಉತ್ಸವ 12/04/2025 ಶನಿವಾರ ಮೊದಲ್ಗೊಂಡು 21/04/2025 ಸೋಮವಾರ ದವರೆಗೆ ಭಜನಾ ಸಪ್ತಾಹ, ಹಾಗೂ ಸಾಮೂಹಿಕ ಚಂಡಿಕಾಯಾಗ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಡೊಂಬಿವಲಿಯ ಶ್ರೀ ಶಂಕರನಾರಾಯಣ ತಂತ್ರಿ ಇವರ ನೇತೃತ್ವದಲ್ಲಿ ನಡೆಯಲಿರುವುದು.

ಧಾರ್ಮಿಕ ಕಾರ್ಯಕ್ರಮಗಳ ವಿವರ :

ಪ್ರತಿ ನಿತ್ಯ ಪೂಜೆಗಳು- ಬೆಳಿಗ್ಗೆ 8 ರಿಂದ – ನಿತ್ಯ ಪೂಜೆ, ಮಹಾಪೂಜೆ, ಸಾಯಂಕಾಲ 6ರಿಂದ ಕುಂಕುಮಾರ್ಚನೆ, ಮಹಾಪೂಜೆ, ಭಜನಾ ಕಾರ್ಯಕ್ರಮ 5.30ರಿಂದ 8.30

12/4/25, ಶನಿವಾರ – ಬೆಳಿಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯವಾಚನ, ಮಹಾಸಂಕಲ್ಪ, ಭದ್ರದೀಪ ಪ್ರಜ್ವಲನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಹಾಗಣಪತಿ ಹೋಮ, ಮಹಾಪೂಜೆ
ಸಂಜೆ 5.30ರಿಂದ 7ರ ತನಕ ಭಜನಾ ಸೇವೆ ( ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್, ಕುಲಾಲ ಸಂಘ ಮುಂಬೈ, ಗುರುವಂದನಾ ಭಜನಾ ಮಂಡಳಿ ಪ್ರಾದೇಶಿಕ ಸಮಿತಿ, ಥಾಣೆ , ಕಸಾರ, ಕರ್ಜತ್)
ತಾ 13/4/25 ಆದಿತ್ಯವಾರ – ಸಂಜೆ 5.30ರಿಂದ
7.00 ಭಜನಾ ಸೇವೆ (ನಿತ್ಯಾನಂದ ಮಿತ್ರ ಭಜನಾ ಮಂಡಳಿ ಯುವ ವಿಭಾಗ ಬಿರ್ಲಾ ಗೇಟ್ ಶಹಾಡ್ ಓಂ ಶಕ್ತಿ ಮಹಿಳಾ ಸಂಸ್ಥಾ ಕಲ್ಯಾಣ್)
14/4/25 ಸಂಜೆ 6.30ರಿಂದ ಭಜನಾ ಸೇವೆ (ಶ್ರೀಗುರುನಾರಾಯಣ ಭಜನಾ ಮಂಡಳಿ ಬಿಲ್ಲವರ ಅಸೋಸಿಯೇಷನ್ ಲೋಕಲ್ ಆಫೀಸ್ ಕಲ್ಯಾಣ)
15/4/25 ಮಂಗಳವಾರ – ಸಂಜೆ 6.30ರಿಂದ ಭಜನಾ ಸೇವೆ (ಶ್ರೀ ಸಾಯಿ ನಿತ್ಯಾನಂದ ಭಜನಾ ಮಂಡಳಿ ಭಿವಂಡಿ ಇವರಿಂದ)
16/4/25 ಬುಧವಾರ – ಭಜನಾ ಸೇವಾ (ವರದ ಸಿದ್ಧಿವಿನಾಯಕ ಸೇವಾ ಮಂಡಳಿ ಡೊಂಬಿವಲಿ, ಇವರಿಂದ)
17/4/25 ಗುರುವಾರ – ಬೆಳಿಗ್ಗೆ 9 ಗಂಟೆಯಿಂದ ಶ್ರೀ ವಿಷ್ಣು ಸಹಸ್ರನಾಮ ಅರ್ಚನೆ, ಹೋಮ, ಪಂಚಕಲಾಶ, ಅಭಿಷೇಕ ಪೂಜೆ, ಶ್ರೀ ಗುರು ಪಾದುಕಾ ಪೂಜೆ
ಸಂಜೆ 6.30 pm to 7.30 pm 7.30 pm to 8.30 ಭಜನಾ ಸೇವಾ (ಸ್ವರ ಕಲಾವೇದಿಕೆ ಕರ್ನಾಟಕ ಸಂಘ ಕಲ್ಯಾಣ್, ಇವರಿಂದ ಶ್ರೀ ದೇವಾನಂದ್ ಕೋಟ್ಯಾನ್ ಬಳಗ, ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ, ಇವರಿಂದ)
18/4/25 ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕುಂಡ ಸಂಸ್ಕಾರ, ಅಗ್ನಿ, ಜನನ, ಸಂಸ್ಕಾರ, ಮಹಾ ಗಣಪತಿ ಹೋಮ, ಪೂಜೆ, ನವಗ್ರಹಶಾಂತಿ
ಸಂಜೆ 5 ಗಂಟೆಗೆ ರಾಕೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಿಕ್ನಾಲ ಬಲಿ
6.30 ರಿಂದ 8.30 ಭಜನಾ ಸೇವೆ (ಬಂಟರ ಸಂಘ ಪ್ರಾದೇಶಿಕ ಸಮಿತಿ ಭಿವಂಡಿ ಕಲ್ಯಾಣ್,ಉಲಾಸನಗರ್, ಅಂಬರನಾಥ್, ಬದ್ಲಾಪುರ್ ಇವರಿಂದ)
19/4/25 ಶನಿವಾರ ಬೆಳಿಗ್ಗೆ 9ಕ್ಕೆ ಮೂಕಾಂಬಿಕಾ ದೇವೀ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, 108 ಸೀಯಾಳಬಿಷೇಕ, (ಶ್ರೀಮತಿ ಮತ್ತು ಶ್ರೀ ಮಂಜುನಾಥ ಶೆಟ್ಟಿ ಮತ್ತು ಕುಟಂಬಸ್ಮರು ಸಾಯಿ ಶ್ರದ್ಧಾ ಕಲ್ಯಾಣ್,ಇವರಿಂದ) ತುಲಭಾರ ಸೇವೆ, ನವಗ್ರಹ ಶಾಂತಿ, ಪಂಚವಿಶಂತಿ ಕಳಾರಾಧನೆ, ಪ್ರಧಾನ ಹೋಮ, ಶ್ರೀ ಪ್ರಸನ್ನ ಗಣಪತಿ ದೇವರಿಗೆ ನವಕಲಶರಾಧನೆ, ಅನ್ನಸಂತರ್ಪಣೆ,
ಸಂಜೆ 5ಗಂಟೆಗೆ 25 ರ ಕಲಶಾಭಿಷೇಕ ಪ್ರಧಾನ ಹೋಮ, ಅವಸ್ರುತ ಬಲಿ, ಮಹಾಪೂಜೆ, ಪಲ್ಲ ಪೂಜೆ,
ಅನ್ನ ಪ್ರಸಾದ ವಿತರಣೆ, ರಥಕಲಶರಾಧನೆ, ಪ್ರಧಾನ ಹೋಮ, ರಥೋತ್ಸವ ಉತ್ಸವ ಬಲಿ, ರಥೋತ್ಸವ -ಸೇವೆ (ಶ್ರೀಮತಿ ಕುಶಾಲ ಪಿ ಶೆಟ್ಟಿ ಮತ್ತು ಕುಟುಂಬಸ್ತರು ಉಲ್ಕಾಸ್ ನಗರ ), ಸಾಮೂಹಿಕ ರಂಗ ಪೂಜೆ, ಮಹಾಪೂಜೆ
20/04/25 ರವಿವಾರ ಬೆಳಿಗ್ಗೆ 9ರಿಂದ ಸಾಮೂಹಿಕ ಚಂಡಿಕಾಯಾಗ ಪ್ರಾರಂಭ, ಪೂರ್ಣಾಹುತಿ, ಸಾಮೂಹಿಕ ಚಂಡಿಕಾಯಾಗ,
ಬ್ರಾಹ್ಮಣ ಸುವಾಸಿನಿ ಆರಾಧನೆ, ದಂಪತಿ ಪೂಜೆ, ಮಹಾಪೂಜೆ, ಪಲ್ಲಪೂಜೆ,
ಬೆಳಿಗ್ಗೆ 11.30 am ಧಾರ್ಮಿಕ ಸಭಾ ಕಾರ್ಯಕ್ರಮ,
ಮದ್ಯಾಹ್ನ 1.00 ಗಂಟೆಗೆ ಮಹಾ ಅನ್ನಸಂತರ್ಪಣೆ( ಅನ್ನ ಸಂತರ್ಪಣೆ ಸೇವೆ ಪ್ರಾಯೋಜಕರು ಶ್ರೀಮತಿ ಸ್ವಾತಿ ಮತ್ತು ಶ್ರೀ ವಿಶಾಲ್ ಸಾಂತ ಕುಟುಂಬಸ್ಮರು ವಡೋಧರ ಇವರಿಂದ )
ಸಂಜೆ 4.00 p.m ಶೋಭಾ ಯಾತ್ರೆ, ಅಷ್ಟಾವಧಾನ ಸೇವೆ, ಕಟ್ಟೆ, ಪೂಜೆ, ಸಂಜೆ 8.00 ಗಂಟೆಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, (ಅನ್ನ ಸಂತರ್ಪಣೆ ಸೇವೆ ಪ್ರಾಯೋಜಕರು ಶ್ರೀ ಜಗದೀಶ ರಾಮ ಭಂಜನ್ ಕುಟುಂಬಸ್ಕರು ಅಂಬರ್ ನಾಥ್ ಇವರಿಂದ)
ಸಂಜೆ 8.00 ರಿಂದ 12.30ರ ತನಕ ಯಕ್ಷಗಾನ- ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿ, ಅಸಲ್ಫಾ ಘಾಟ್ಕೊಪರ್, ಮುಂಬಯಿ, ಇದರ ಕಲಾವಿದರಿಂದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮ (ತುಳು) ಯಕ್ಷಗಾನ ಬಯಲಾಟ ಜರಗಲಿದೆ.( ಯಕ್ಷಗಾನದ ಸೇವೆಯು ಶ್ರೀ ರಾಜೇಶ್ ಜೆ ಶೆಟ್ಟಿ, ಮತ್ತು ಕುಟುಂಬಸ್ಥರು ಇವರಿಂದ)
21/04/25 ಸೋಮವಾರ ಬೆಳಿಗ್ಗೆ 6.30ಕ್ಕೆ ಸಂಪ್ರೋಕ್ಷಣೆ, ನವಕಲಾಕಾರಾಧನೆ, ಪ್ರಧಾನ ಹೋಮ, ಪರಿವಾರ ಸಹಿತ ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಮಹಾಪೂಜೆ 5.00 ರಿಂದ ಕುಂಕುಮಾರ್ಚನೆ, ಲಲಿತಾ ಸಹಸ್ರ ನಾಮಾರ್ಚನೆ, ಸಪ್ತಶತಿ ಪಾರಾಯಣ, ಮಹಾಪೂಜೆ ಋತಿಕ್ ಸಂಭಾವನೆ, ಮಂಗಲ ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ.


ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 63ನೇ ವಾರ್ಷಿಕೋತ್ಸವದ ನಿಮ್ಮಿತ್ತ ನಡೆಯಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ತೀರ್ಥ-ಪ್ರಸಾದ ಸ್ವೀಕರಿಸುವಂತೆ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಕಾರ್ಯಧ್ಯಕ್ಷ ಚಂದ್ರಕಾಂತ್ ಎಸ್ ಶೆಟ್ಟಿ, ಅಧ್ಯಕ್ಷ ರಾಜೇಶ್ ಜೆ ಶೆಟ್ಟಿ, ಸಮನ್ವಯಕ ಕರುಣಾಕರ ಜೆ ಶೆಟ್ಟಿ, ಉಪಾಧ್ಯಕ್ಷ ಯುವರಾಜ್ ಕೆ ಪೂಜಾರಿ, ಗೌರವ ಕಾರ್ಯದರ್ಶಿ ಜಗಧೀಶ್ ಎಂ ಶೆಟ್ಟಿ ಬೆಳಿಂಜೆ, ಜತೆ ಕಾರ್ಯದರ್ಶಿಗಳಾದ ಗಣೇಶ್ ಶೆಟ್ಟಿ ನಂದ್ರೋಳಿ, ಪ್ರೇಮ್ ಕುಮಾರ್ ಎಸ್ ರೈ, ಗೌರವ ಕೋಶಾಧಿಕಾರಿ ಸಂತೋಷ್ ಎಚ್ ಶೆಟ್ಟಿ, ಜತೆ ಕೋಶಾಧಿಕಾರಿಗಳಾದ ಸದಾನಂದ ಸಾಲ್ಯಾನ್, ವಸಂತ್ ಶೆಟ್ಟಿ , ಉಪಸಮಿತಿಯ ಪದಾಧಿಕಾರಿಗಳು, ಟ್ರಸ್ಟಿಗಳು, ಸಲಹೆಗಾರರು, ವಿಶೇಷ ಆಮಂತ್ರಿತರು, ಮಹಿಳಾ ವಿಭಾಗದ ಪದಾಧಿಕಾರಿಗಳು ಸದಸ್ಯರು, ಯುವ ವಿಭಾಗದ ಸದಸ್ಯರು, ಹಾಗೂ ಸಮಿತಿ ಸದಸ್ಯರು ವಿನಂತಿಸಿದ್ದಾರೆ.

Related posts

ಜ 3 . ಕರ್ನಿರೆ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವವು ಸಮಾಲೋಚನಾ ಸಭೆ.

Mumbai News Desk

ಸಾಂತಾಕ್ರೂಸ್ :  ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ 3 ರಿಂದ 11 ವರೆಗೆ ನವರಾತ್ರಿ ಉತ್ಸವ.

Mumbai News Desk

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk

ಫೆ.3 ರಂದು ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಡಿ. 15ರಂದು ಕಲ್ಲುರ್ಟಿ -ಪಂಜುರ್ಲಿ -ಗುಳಿಗ ದೈವದ ನೇಮ (ಕೋಲ )

Mumbai News Desk

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk