
ಶ್ರೀ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ನೇತೃತ್ವದ ಶ್ರೀ ಅಯ್ಯಪ್ಪ ಭಕ್ತ ವೃಂದ ಸೇವಾ ಸಮಿತಿ ಮುಂಬಯಿ (ರಿ.) ಇದರ ವಿಶೇಷ ಸಭೆಯು ನವೆಂಬರ್ 19 ರ ಭಾನುವಾರದಂದು ಬೆಳಿಗ್ಗೆ 11.30 ಗಂಟೆಗೆ ಗೋರೆಗಾಂವ್ ಶಿಬಿರ, ಪ್ಲಾಟ್ ಸಂಖ್ಯೆ 261/262, ಜೈ ಯೋಗೇಶ್ವರ್ ಕೋ. ಹೌ. ಸೊಸೈಟಿ ಲಿಮಿಟೆಡ್, ರಸ್ತೆ ಸಂಖ್ಯೆ 12, ಜವಾಹರ್ ನಗರ, ಗೋರೆಗಾಂವ್ (ಪಶ್ಚಿಮ), ಹಜರತ್ ಷಾ ದಾವಲ್ ಶಾ ಬಾಬಾ ದರ್ಗಾ ಹತ್ತಿರ, ಮುಂಬೈ 104 ಇಲ್ಲಿ ನಡೆಯಲಿರುವುದು. ಈ ಸಭೆಯಲ್ಲಿ ಮಾಲೆ ಧಾರಣೆ ಹಾಗೂ ಶಬರಿಮಲೆ ಯಾತ್ರೆಯ ಬಗ್ಗೆ ಚರ್ಚಿಸಲಾಗುವುದು, ವ್ಯವಸ್ಥಾಪಕ ಸಮಿತಿ ಸದಸ್ಯರು ಹಾಗೂ ಮಾಲಾದಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ದೀಪಾವಳಿ ಹಬ್ಬದ ಶುಭಾಶಯಗಳು
ದೀಪಾವಳಿ ಹಬ್ಬದ ಶುಭಾಶಯಗಳು
ದೀಪಾವಳಿ ಹಬ್ಬದ ಶುಭಾಶಯಗಳು